ಐಪಿಎಲ್‌ನಿಂದ ಮುಂಬೈ ತಂಡ ಹೊರಬಿದ್ದ ಕ್ಷಣದಿಂದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಕಳೆದ ಎರಡ್ಮೂರು ವಾರಗಳಿಂದ ಹಾರ್ದಿಕ್ ಪಾಂಡ್ಯರಿಂದ ಪತ್ನಿ ನತಾಶಾ ದೂರ ಆಗ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬೆಂಗಳೂರು: ಡಿವೋರ್ಸ್ ವದಂತಿ ಬಳಿಕ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ (Cricketer Hardik Pandya) ಸಾಮಾಜಿಕ ಜಾಲತಾಣದಲ್ಲಿ ಮೊದಲ ಪೋಸ್ಟ್ ಮಾಡಿಕೊಂಡಿದ್ದಾರೆ. ಫೇಸ್‌ಬುಕ್, ಎಕ್ಸ್ ಖಾತೆಯಲ್ಲಿ ಮುಂದಿನ ವಿಶ್ವಕಪ್ ಪಂದ್ಯಕ್ಕೆ (World Cup 2024) ಸಿದ್ಧವಾಗುತ್ತಿರುವ ಮಾಹಿತಿಯನ್ನು ಹಾರ್ದಿಕ್ ಪಾಂಡ್ಯ ನೀಡಿದ್ದಾರೆ. ಫೇಸ್‌ಬುಕ್‌ನಲ್ಲಿ ಒಂದು, ಎಕ್ಸ್ ಖಾತೆಯಲ್ಲಿ ನಾಲ್ಕು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ನಿಮ್ಮ ಮುಂದಿನ ಪಂದ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರ. 

ಫೋಟೋ ಹಂಚಿಕೊಂಡಿರುವ ಹಾರ್ದಿಕ್ ಪಾಂಡ್ಯ, ನ್ಯಾಷನಲ್ ಡ್ಯೂಟಿ ಆರಂಭ ಎಂಬ ಸಾಲು ಬರೆದುಕೊಂಡಿದ್ದಾರೆ. ವಿಶ್ವಕಪ್‌ ಪಂದ್ಯದಲ್ಲಿ ಟೀಂ ಇಂಡಿಯಾ ಘರ್ಜಿಸಬೇಕು. ನಿಮ್ಮೆಲ್ಲರ ಅದ್ಭುತ ಆಟವನ್ನು ಕಣ್ತುಂಬಿಕೊಳ್ಳಲು ನಾವೆಲ್ಲರೂ ಕಾಯುತ್ತಿದ್ದೇವೆ. ಮತ್ತೋರ್ವ ಬಳಕೆದಾರ ನಿನ್ನೆ ಐಪಿಎಲ್‌, ಇಂದು ವರ್ಲ್ಡ್ ಕಪ್, ನಾಳೆ ಹೆಂಡತಿ ಎಂದು ಬರೆದಿದ್ದಾರೆ. 

ಕೃನಾಲ್ ಜೊತೆಯಲ್ಲಿ ಹಾರ್ದಿಕ್ ಮಗ

ಎರಡು ವರ್ಷದ ಮಗನ ಸಮ್ಮುಖದಲ್ಲಿ ಮದುವೆಯಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್‌ (Natasa Stankovic) 2023ರ ಫೆಬ್ರವರಿ 14ರಂದು ಮದುವೆಯಾಗಿದ್ದರು. ಮದುವೆಯಾದ ಒಂದು ವರ್ಷದ ಬಳಿಕ ತಮ್ಮ ಹೆಸರಿನ ಜೊತೆಯಲ್ಲಿ ಪಾಂಡ್ಯ ಪದ ತೆಗೆದುಹಾಕುವ ಮೂಲಕ ನತಾಶಾ ಹಲವು ಚರ್ಚೆಗಳಿಗೆ ಮುನ್ನುಡಿ ಬರೆದಿದ್ದರು. ಅಂದಿನಿಂದ ಇಬ್ಬರು ದೂರವಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಹಾರ್ದಿಕ್ ಮಗ ಆಗಸ್ತ್ಯ ತನ್ನ ಸೋದರ ಕೃನಾಲ್ ಜೊತೆಗೆ ಇರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾರ್ದಿಕ್ ಮತ್ತು ನತಾಶ ತಮ್ಮ ಮಗನನ್ನು ಕೃನಾಲ್ ಪಾಂಡ್ಯ ಜೊತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಇದೀಗ ಈ ವಿಡಿಯೋಗೆ ನತಾಶಾ ಲೈಕ್‌ ನೀಡಿದ್ದಾರೆ. 

ಇಂಡಿಯಾದ ಹಾರ್ದಿಕ್ ಪಾಂಡ್ಯಗೂ, ಸರ್ಬಿಯಾದ ನತಾಶಾಗೂ ಲವ್ ಆಗಿದ್ದೇಗೆ?

Scroll to load tweet…

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ನೈಟ್‌ಕ್ಲಬ್‌ವೊಂದರಲ್ಲಿ ಭೇಟಿಯಾಗಿದ್ದರು. ಅಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮವಾಗಿ ಬದಲಾಗಿತ್ತು. 2019ರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ನಾನು ಬೆಸ್ಟ್ ಫ್ರೆಂಡ್ ಎಂದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಳ್ಳುವ ಮೂಲಕ ಪ್ರೀತಿಯ ಸುಳಿವನ್ನು ಅಭಿಮಾನಿಗಳಿಗೆ ನೀಡಿದ್ದರು. 2020ರ ವರ್ಷದ ಮೊದಲ ದಿನವೇ ಹಾರ್ದಿಕ್ ಪಾಂಡ್ಯ ಪ್ರಪೋಸ್ ಮಾಡಿ, ಅದೇ ವರ್ಷದ ಮೇ ತಿಂಗಳಲ್ಲಿ ಮಗುವನ್ನು ಬರಮಾಡಿಕೊಂಡಿದ್ದರು. 

ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ನಟಿಸಿದ ಕನ್ನಡ ಸಿನಿಮಾ ಇದೇ ನೋಡಿ!

View post on Instagram