ಬೆಂಗಳೂರು(ಫೆ.13): ಭಾರತದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ, ಬೆನ್ನಿನ ಕೆಳಭಾಗದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ನಲ್ಲಿ ಬುಧವಾರದಿಂದ ಅಭ್ಯಾಸ ಆರಂಭಿಸಿದ್ದಾರೆ. ನೆಟ್ಸ್‌ನಲ್ಲಿ ಕೆಲ ಕಾಲ ಬ್ಯಾಟಿಂಗ್‌ ಮಾಡಿದ ಪಾಂಡ್ಯ, ಫಿಸಿಯೋ ಜತೆ ಚರ್ಚೆ ನಡೆಸಿದರು. 

ಇದನ್ನೂ ಓದಿ: ಪಾಂಡ್ಯ ನಿಶ್ಚಿತಾರ್ಥದ ಬಗ್ಗೆ ತಂದೆಗೇ ಗೊತ್ತಿರಲಿಲ್ಲ!.

ಮುಂದಿನ ತಿಂಗಳು ನಡೆಯಲಿರುವ ದಕ್ಷಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅವರು ತಂಡಕ್ಕೆ ವಾಪಸಾಗುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಐಪಿಎಲ್‌ನಲ್ಲಿ ಆಡುವ ಮೂಲಕ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ಪಾಂಡ್ಯ ಕಾತರಿಸುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಪಾಂಡ್ಯ, ಆ ಬಳಿಕ ತಂಡದಿಂದ ಹೊರಗುಳಿದಿದ್ದಾರೆ. 

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಾ- ನತಾಶಾ ಎಂಗೇಜ್‌ಮೆಂಟ್‌, ಸಖತ್ ಡಿಫರೆಂಟ್!

ಇತ್ತೀಚೆಗಷ್ಟೆಲಂಡನ್‌ಗೆ ತೆರಳಿ ವೈದ್ಯ ಜೇಮ್ಸ್‌ ಆಲಿಬೋನ್‌ರನ್ನು ಸಂಪರ್ಕಿಸಿದ್ದ ಹಾರ್ದಿಕ್‌ ಅವರ ಸಲಹೆ ಮೇರೆಗೆ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡದಿರಲು ನಿರ್ಧರಿಸಿದರು. ಕಳೆದ ತಿಂಗಳು ಮುಂಬೈನಲ್ಲಿ ನಡೆದಿದ್ದ ಫಿಟ್ನೆಸ್‌ ಪರೀಕ್ಷೆಯಲ್ಲಿ ಹಾರ್ದಿಕ್‌ ಅನುತ್ತೀರ್ಣರಾಗಿದ್ದರು ಎಂದು ವರದಿಯಾಗಿತ್ತು.