Asianet Suvarna News Asianet Suvarna News

2011ರ ವಿಶ್ವಕಪ್ ಬಳಿಕ ನನಗೆ ಸೂಕ್ತ ಅವಕಾಶ ಕೊಡಲಿಲ್ಲ: ಹರ್ಭಜನ್ ಸಿಂಗ್ ಬೇಸರ..!

* ಕ್ರಿಕೆಟ್‌ನಿಂದ ನಿವೃತ್ತಿಯ ಬಳಿಕ ತಮ್ಮ ಬೇಸರ ಹೊರಹಾಕಿದ ಹರ್ಭಜನ್ ಸಿಂಗ್

* 2011ರ ವಿಶ್ವಕಪ್ ಬಳಿಕ ತಮಗೆ ಸರಿಯಾದ ಅವಕಾಶ ಸಿಗಲಿಲ್ಲವೆಂದ ಭಜ್ಜಿ

* ನಾನೂ 500+ ಟೆಸ್ಟ್ ವಿಕೆಟ್‌ ಕಬಳಿಸುತ್ತಿದ್ದೆ ಎಂದ ಆಫ್‌ ಸ್ಪಿನ್ನರ್

Former Cricketer Harbhajan Singh surprised with his sudden exclusion from MS Dhoni led Team India kvn
Author
Bengaluru, First Published Jan 1, 2022, 1:57 PM IST

ನವದೆಹಲಿ(ಜ.01): ಇತ್ತೀಚೆಗಷ್ಟೇ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತದ ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ (Harbhajan Singh), ತಮಗೆ ಕಳೆದ 7-8 ವರ್ಷಗಳಲ್ಲಿ ಬಿಸಿಸಿಐ (BCCI) ಸರಿಯಾಗಿ ಅವಕಾಶ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿರುವ ಹರ್ಭಜನ್‌, ‘2011ರ ಏಕದಿನ ವಿಶ್ವಕಪ್‌ ಬಳಿಕ ನನಗೆ ಸರಿಯಾಗಿ ಅವಕಾಶವೇ ಸಿಗಲಿಲ್ಲ. ಆ ಹೊತ್ತಿಗಾಗಲೇ ನಾನು ಟೆಸ್ಟ್‌ನಲ್ಲಿ 400 ವಿಕೆಟ್‌ ಪೂರೈಸಿದ್ದೆ. ಸೂಕ್ತ ಅವಕಾಶ ಸಿಕ್ಕಿದ್ದರೆ 500 ವಿಕೆಟ್‌ ಮೈಲಿಗಲ್ಲು ತಲುಪುತ್ತಿದ್ದೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಭಾರತ ಕ್ರಿಕೆಟ್ ತಂಡದಿಂದ ನನ್ನನ್ನು ಕೈಬಿಟ್ಟಿದ್ದಕ್ಕೆ ಬಿಸಿಸಿಐ, ನಾಯಕ ಎಂ ಎಸ್ ಧೋನಿ (MS Dhoni) ಸೇರಿ ಯಾರೂ ವಿವರಣೆಯನ್ನೇ ನೀಡಲಿಲ್ಲ. ಹಲವು ಬಾರಿ ಕೇಳಿದೆ. ಉತ್ತರ ಸಿಗಲಿಲ್ಲ. ಬೇಸತ್ತು ಸುಮ್ಮನಾದೆ’ ಎಂದಿದ್ದಾರೆ. ನಾನು 400 ವಿಕೆಟ್‌ ಕಬಳಿಸಿದಾಗ ನನಗೆ 31  ವರ್ಷ ವಯಸ್ಸಾಗಿತ್ತು. ಇನ್ನೂ 8-9 ವರ್ಷಗಳ ನಾನು ಕ್ರಿಕೆಟ್ ಆಡಲು ಶಕ್ತನಾಗಿದ್ದೆ. ಏನಿಲ್ಲಾವೆಂದರೂ ಇನ್ನೂ ನೂರು ವಿಕೆಟ್‌ಗಳನ್ನು ಕಬಳಿಸುತ್ತಿದ್ದೆ. 2011ರ ಏಕದಿನ ವಿಶ್ವಕಪ್ ಜಯಿಸಿ ಒಂದೆರಡು ವರ್ಷಗಳ ಅದೇ ತಂಡ ಒಟ್ಟಾಗಿ ಆಡಲು ಅವಕಾಶ ಸಿಗದೇ ಹೋದದ್ದು ನಿಜಕ್ಕೂ ಅಚ್ಚರಿಗೆ ಕಾರಣವಾಗಿತ್ತು ಎಂದು ಭಜ್ಜಿ ಹೇಳಿದ್ದಾರೆ. 2011ರ ಏಕದಿನ ವಿಶ್ವಕಪ್ ಮುಕ್ತಾಯದ ಬಳಿಕ ಹರ್ಭಜನ್ ಸಿಂಗ್ ಭಾರತ ಪರ 10 ಟೆಸ್ಟ್‌, 10 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದರು. 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2015ರ ಏಕದಿನ ವಿಶ್ವಕಪ್ ತಂಡದಲ್ಲೂ ಹರ್ಭಜನ್ ಸಿಂಗ್ ಸ್ಥಾನ ಪಡೆಯಲು ವಿಫಲರಾಗಿದ್ದರು. 

ಹರ್ಭಜನ್ ಸಿಂಗ್ ಭಾರತ ಪರ 103 ಟೆಸ್ಟ್ ಪಂದ್ಯಗಳನ್ನಾಡಿ 417 ವಿಕೆಟ್ ಕಬಳಿಸಿದ್ದರು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 236 ಹಾಗೂ 28 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 269 ಹಾಗೂ 25 ವಿಕೆಟ್ ಪಡೆದಿದ್ದರು. 2021ರ ಡಿಸೆಂಬರ್ ಕೊನೆಯ ವಾರದಲ್ಲಿ ಭಜ್ಜಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರು. 

ಬಾಲಿವುಡ್‌ನಲ್ಲಿ ತಾಂಬೆ ಜೀವನಾಧಾರಿತ ಸಿನಿಮಾ!

ಮುಂಬೈ: ದೊಡ್ಡ ದೊಡ್ಡ ಕ್ರಿಕೆಟ್‌ ತಾರೆಯರ ಜೀವನಾಧಾರಿತ ಸಿನಿಮಾಗಳು ತೆರೆ ಕಾಣುತ್ತಿರುವ ಸಮಯದಲ್ಲೇ ಬಹಳ ಅಪರೂಪದ ಸಾಧನೆ ಮಾಡಿರುವ, ಹೆಚ್ಚು ಜನಪ್ರಿಯವಲ್ಲದ ಮುಂಬೈ ಕ್ರಿಕೆಟಿಗ ಪ್ರವೀಣ್‌ ತಾಂಬೆ (Pravin Tambe) ಅವರ ಜೀವನದ ಕಥೆಯೂ ಬಾಲಿವುಡ್‌ನಲ್ಲಿ ತೆರೆ ಕಾಣಲು ಸಿದ್ಧಗೊಳ್ಳುತ್ತಿದೆ. ನಟ ಶ್ರೇಯಸ್‌ ತಲಪಾಡೆ, ಪ್ರವೀಣ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Cricket Calendar 2022: ಈ ವರ್ಷ ಟೀಂ ಇಂಡಿಯಾಗಿದೆ ಬಿಗ್ ಚಾಲೆಂಜ್‌..!

41ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ತಾಂಬೆ, ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡದಲ್ಲಿ ಆಡಿದ್ದರು. 42ನೇ ವಯಸ್ಸಿನಲ್ಲಿ ಮುಂಬೈ ಪರ ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದ ಅವರು, ಕಳೆದ ವರ್ಷ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ್ದರು. 50 ವರ್ಷವಾದರೂ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿ ಉಳಿಯುವ ಮೂಲಕ ತಾಂಬೆ ಅಚ್ಚರಿ ಮೂಡಿಸಿದ್ದಾರೆ.

ವರ್ಷದ ಕ್ರಿಕೆಟರ್‌ ಪ್ರಶಸ್ತಿ ರೇಸ್‌ನಲ್ಲಿ ಸ್ಮೃತಿ, ಶಾಹೀನ್‌

ದುಬೈ: ಐಸಿಸಿ ವರ್ಷದ ಪುರುಷ, ಮಹಿಳಾ ಕ್ರಿಕೆಟರ್‌ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿರುವ ಆಟಗಾರ, ಆಟಗಾರ್ತಿಯರ ಪಟ್ಟಿಯನ್ನು ಐಸಿಸಿ (ICC) ಶುಕ್ರವಾರ ಪ್ರಕಟಗೊಳಿಸಿದೆ. ವರ್ಷದ ಮಹಿಳಾ ಕ್ರಿಕೆಟಿರ್‌ ಪ್ರಶಸ್ತಿ ರೇಸ್‌ನಲ್ಲಿ ಭಾರತದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ (Smriti Mandhana) ಇದ್ದಾರೆ. ವರ್ಷದ ಟಿ20 ಆಟಗಾರ್ತಿ ಪ್ರಶಸ್ತಿಗೂ ಅವರ ಹೆಸರು ನಾಮನಿರ್ದೇಶನಗೊಂಡಿದೆ. 

ಸ್ಮೃತಿ ಜೊತೆ ವರ್ಷದ ಕ್ರಿಕೆಟರ್‌ ಪ್ರಶಸ್ತಿಗೆ ಇಂಗ್ಲೆಂಡ್‌ನ ಟ್ಯಾಮಿ ಬಿಯೊಮೊಂಟ್‌, ದ.ಆಫ್ರಿಕಾದ ಲೆಜಿಲಿ ಲೀ ಹಾಗೂ ಐರ್ಲೆಂಡ್‌ನ ಗ್ಯಾಬಿ ಲೀವಿಸ್‌ ಪೈಪೋಟಿ ನಡೆಸಲಿದ್ದಾರೆ. ಪುರುಷರ ವಿಭಾಗದ ವರ್ಷದ ಕ್ರಿಕೆಟಿಗ ರೇಸ್‌ನಲ್ಲಿ ಪಾಕಿಸ್ತಾನದ ಶಾಹೀನ್‌ ಅಫ್ರಿದಿ, ಮೊಹಮದ್‌ ರಿಜ್ವಾನ್‌, ಇಂಗ್ಲೆಂಡ್‌ನ ಜೋ ರೂಟ್‌ (Joe Root) ಹಾಗೂ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ (Kane Williamson) ಇದ್ದಾರೆ.

Follow Us:
Download App:
  • android
  • ios