* 33ನೇ ವಸಂತಕ್ಕೆ ಕಾಲಿರಿಸಿದ ವಿರಾಟ್ ಕೊಹ್ಲಿ* ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಂತು ಅಭಿನಂದನೆಗಳ ಮಹಾಪೂರ* ಸ್ಕಾಟ್ಲೆಂಡ್ ಎದುರು ಅಬ್ಬರಿಸಲು ರೆಡಿಯಾದ ವಿರಾಟ್ ಕೊಹ್ಲಿ

ಬೆಂಗಳೂರು(ನ.05): ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಶುಕ್ರವಾರವಾದ ಇಂದು(ನ.05) ತಮ್ಮ 33ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ (Birthday) ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಪ್ರತಿನಿಧಿಸುವ ವಿರಾಟ್‌ ಕೊಹ್ಲಿಗೆ ಆರ್‌ಸಿಬಿ ಫ್ರಾಂಚೈಸಿ, ಆರ್‌ಸಿಬಿ ತಂಡದ ಪಾಲಿಗೆ ಎಲ್ಲವೂ ಆಗಿರುವ ನಿಮಗೆ ಧನ್ಯವಾದಗಳು. ನಿಮ್ಮ ಸಹ ಆಟಗಾರರು ಹಾಗೂ ಕೋಟ್ಯಾಂತರ ಅಭಿಮಾನಿಗಳ ಪರವಾಗಿ ಶುಭಾಶಯಗಳು ಕಿಂಗ್ ಕೊಹ್ಲಿ ಎಂದು ಶುಭ ಹಾರೈಸಿದೆ.

View post on Instagram

ಸದ್ಯ ವಿರಾಟ್ ಕೊಹ್ಲಿ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು (Team India) ಮುನ್ನಡೆಸುತ್ತಿದ್ದಾರೆ. ಟಿ20 ವಿಶ್ವಕಪ್ (ICC T20 World Cup) ಟೂರ್ನಿಯು ಯುಎಇನಲ್ಲಿ ನಡೆಯುತ್ತಿದೆ. ಟಿ20 ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಡೆ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಗಿದೆ. ಆಫ್ಘಾನಿಸ್ತಾನ ಎದುರು ಗೆಲ್ಲುವ ಮೊದಲು ಟೀಂ ಇಂಡಿಯಾ ಪಾಕಿಸ್ತಾನ (Pakistan) ಹಾಗೂ ನ್ಯೂಜಿಲೆಂಡ್ (New Zealand) ಎದುರು ಮುಗ್ಗರಿಸಿತ್ತು. 

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag), ಕಷ್ಟದ ದಿನಗಳ ಹೆಚ್ಚು ಕಾಲ ಇರುವುದಿಲ್ಲ. ಶತಮಾನದ ಕ್ರಿಕೆಟಿಗನಿಗೆ ಜನ್ಮದಿನದ ಶುಭಾಶಯಗಳು ಎಂದು ಚೀಕೂವಿಗೆ ಶುಭ ಹಾರೈಸಿದ್ದಾರೆ.

View post on Instagram

ಇನ್ನು ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ (Ajinkya Rahane) ಟ್ವೀಟ್ ಮೂಲಕ ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ಹುಟ್ಟುಹಬ್ಬದ ಶುಭಾಶಯಗಳು ವಿರಾಟ್, ಮುಂಬರುವ ದಿನಗಳಲ್ಲಿ ಒಳ್ಳೆಯ ಆರೋಗ್ಯ ಹಾಗೂ ಖುಷಿಯ ದಿನಗಳು ನಿಮ್ಮದಾಗಲಿ ಎಂದು ಶುಭ ಹಾರೈಸಿದ್ದಾರೆ.

Scroll to load tweet…

Virat Kohli Birthday: 10 ತಿಂಗಳ ಮಗಳ ಜತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ವಿರಾಟ್ ಕೊಹ್ಲಿ..!

ಸದ್ಯ ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬದಂದೇ ಸ್ಕಾಟ್ಲೆಂಡ್ ಎದುರು ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದು, ಬೃಹತ್ ಗೆಲುವು ದಾಖಲಿಸುವ ಲೆಕ್ಕಾಚಾರದಲ್ಲಿದೆ. ಟೀಂ ಇಂಡಿಯಾ ಸಹ ಆಟಗಾರರೂ ಕೂಡಾ ಸ್ಕಾಟ್ಲೆಂಡ್ (Scotland) ಎದುರು ಭರ್ಜರಿ ಪ್ರದರ್ಶನ ತೋರುವ ಮೂಲಕ ನಾಯಕನಿಗೆ ಬರ್ತ್‌ ಡೇ ಗಿಫ್ಟ್ ನೀಡಲು ಎದುರು ನೋಡುತ್ತಿದ್ದಾರೆ. 

ಆಧುನಿಕ ಕ್ರಿಕೆಟ್‌ನ ರನ್‌ ಮಷೀನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 23,159 ರನ್‌ ಬಾರಿಸಿದ್ದಾರೆ. ನಾಯಕನಾಗಿ ಭಾರತಕ್ಕೆ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು (Test Cricket) ಗೆಲ್ಲಿಸಿಕೊಟ್ಟ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಇನ್ನು 2011ರ ಏಕದಿನ ವಿಶ್ವಕಪ್ ಹಾಗೂ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಸದಸ್ಯ ಕೂಡಾ ಹೌದು.

Team India ಏಕದಿನ ನಾಯಕತ್ವಕ್ಕೂ ವಿರಾಟ್‌ ಕೊಹ್ಲಿ ಗುಡ್‌ಬೈ?

ಟೀಂ ಇಂಡಿಯಾ ಸಹ ಆಟಗಾರರು ಮಾತ್ರವಲ್ಲದೇ ಪತ್ನಿ ಅನುಷ್ಕಾ ಶರ್ಮಾ (Anushka Sharma) ಕೂಡಾ ವಿನೂತನವಾಗಿ ಪತಿ ವಿರಾಟ್ ಕೊಹ್ಲಿಗೆ ಸಾಮಾಜಿಕ ಜಾಲತಾಣದಲ್ಲಿ ಮೂಲಕ ಶುಭ ಕೋರಿದ್ದಾರೆ.

View post on Instagram

ಟೀಂ ಇಂಡಿಯ ನಾಯಕ ವಿರಾಟ್ ಕೊಹ್ಲಿ ತಮ್ಮ ಜನ್ಮದಿನದಂದು ಸ್ಕಾಟ್ಲೆಂಡ್ ಎದುರು ಬೃಹತ್ ಇನಿಂಗ್ಸ್ ಆಡುವ ಮೂಲಕ ಸ್ಮರಣೀಯವಾಗಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.