Asianet Suvarna News Asianet Suvarna News

Happy birthday Sunil Gavaskar: 73ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ದಿಗ್ಗಜ ಗವಾಸ್ಕರ್

* 73ನೇ ಹುಟ್ಟುಹಬ್ಬ ಅಚರಿಸಿಕೊಂಡ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್
* ಟ್ವೀಟ್ ಮೂಲಕ ಶುಭಹಾರೈಸಿದ ಹಿರಿ-ಕಿರಿಯ ಕ್ರಿಕೆಟಿಗರು
* 1949ರ ಜುಲೈ 10ರಂದು ಜನಿಸಿದ ಸುನಿಲ್ ಗವಾಸ್ಕರ್

Happy birthday Sunil Gavaskar BCCI lead wishes for Indian legend as he turns 73 kvn
Author
Bengaluru, First Published Jul 10, 2022, 1:28 PM IST | Last Updated Jul 10, 2022, 1:28 PM IST

ಬೆಂಗಳೂರು(ಜು.10): ಕ್ರಿಕೆಟ್‌ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಬ್ಯಾಟರ್ ಸುನಿಲ್‌ ಗವಾಸ್ಕರ್, ಭಾನುವಾರ(ಜು.10)ವಾದ ಇಂದು 73ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಲಿಟ್ಲ್‌ ಮಾಸ್ಟರ್ ಖ್ಯಾತಿಯ ಸುನಿಲ್ ಗವಾಸ್ಕರ್ ಜುಲೈ 10,1949ರಲ್ಲಿ ಜನಿಸಿದ್ದರು. ಗವಾಸ್ಕರ್, 1983ರ ಏಕದಿನ ವಿಶ್ವಕಪ್‌ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. ಸುನಿಲ್ ಗವಾಸ್ಕರ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ.

ಸುನಿಲ್ ಗವಾಸ್ಕರ್, ಸದ್ಯ ಕ್ರಿಕೆಟ್ ವೀಕ್ಷಕ ವಿವರಣೆಗಾರಿಕೆ ಮೂಲಕ ಮತ್ತೊಮ್ಮೆ ಹತ್ತಿರವಾಗಿದ್ದಾರೆ. ಬಾಂಬೆ ಮೂಲದ ಕ್ರಿಕೆಟಿಗ 16 ವರ್ಷಗಳ ಅಕ್ಷರಶಃ ಕ್ರಿಕೆಟ್‌ ಜಗತ್ತನ್ನು ಆಳಿದ್ದರು. ಗವಾಸ್ಕರ್ 1987ರ ನವೆಂಬರ್‌ನಲ್ಲಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಸುನಿಲ್ ಗವಾಸ್ಕರ್ ಭಾರತ ಕ್ರಿಕೆಟ್ ತಂಡದ ಪರ 233 ಪಂದ್ಯಗಳನ್ನಾಡಿ ಒಟ್ಟಾರೆ 13,214 ರನ್ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಬಾರಿಸಿದ ಜಗತ್ತಿನ ಮೊದಲ ಕ್ರಿಕೆಟಿಗ ಎನ್ನುವ ದಾಖಲೆ ನಿರ್ಮಿಸಿದ್ದ ಸುನಿಲ್ ಗವಾಸ್ಕರ್ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 34 ಶತಕ ಸಹಿತ 10,000 ರನ್ ಬಾರಿಸಿದ್ದು, ಚರುಕಿನ ಪಾದಚಲನೆಯಿಂದ ಹಿಡಿದು ಹೆಲ್ಮೆಟ್ ಇಲ್ಲದೇ ವೇಗದ ಬೌಲರ್ ಎದುರಿಸುವವರೆಗೂ ಎಲ್ಲವನ್ನು ನೋಡಲು ಸುಲಭವಾಗಿರುವಂತೆ ತೋರಿಸಿದ್ದು ಲಿಟ್ಲ್ ಮಾಸ್ಟರ್. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸುನಿಲ್ ಗವಾಸ್ಕರ್, ಎಂದೆಂದಿಗೂ ನೀವು ಚಿರಯುವಕವಾಗಿರಿ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ. 

ಭಾರತದ ಮಾಜಿ ಕ್ರಿಕೆಟಿಗ, ಪದ್ಮಭೂಷಣ ಶ್ರೀ ಸುನಿಲ್ ಗವಾಸ್ಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮಗೆ ಒಳ್ಳೆಯ ಆಯಸ್ಸು ಮತ್ತು ದೀರ್ಘಕಾಲ ಒಳ್ಳೆಯ ಆರೋಗ್ಯ ಸಿಗಲಿ ಎಂದು ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಶುಭ ಹಾರೈಸಿದ್ದಾರೆ.

ನಿಮ್ಮಂತ ನಾಯಕ ಮತ್ತೊಬ್ಬರಿಲ್ಲ: ಧೋನಿ ಹುಟ್ಟುಹಬ್ಬಕ್ಕೆ ಭಾವನಾತ್ಮಕವಾಗಿ ಶುಭ ಕೋರಿದ ಕೊಹ್ಲಿ..!

ಇನ್ನು ಬಿಸಿಸಿಐ, ದಿಗ್ಗಜ ಕ್ರಿಕೆಟಿಗನ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭ ಹಾರೈಸಿದೆ. 233 ಅಂತರರಾಷ್ಟ್ರೀಯ ಪಂದ್ಯಗಳು, 13,214 ಅಂತರರಾಷ್ಟ್ರೀಯ ರನ್‌ಗಳು, ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಬಾರಿಸಿದ ಮೊದಲ ಬ್ಯಾಟರ್. ಭಾರತದ ಮಾಜಿ ಕ್ರಿಕೆಟಿಗ ಹಾಗೂ ಬ್ಯಾಟಿಂಗ್ ದಿಗ್ಗಜನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದೆ.

ಸುನಿಲ್ ಗವಾಸ್ಕರ್ ಭಾರತ ಕ್ರಿಕೆಟ್ ತಂಡದ ಪರ 125 ಟೆಸ್ಟ್ ಪಂದ್ಯಗಳನ್ನಾಡಿ 51.12ರ ಬ್ಯಾಟಿಂಗ್ ಸರಾಸರಿಯಲ್ಲಿ 10,122 ರನ್‌ ಬಾರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 34 ಶತಕ ಬಾರಿಸಿದ್ದ ದಾಖಲೆ ಹಲವು ವರ್ಷಗಳ ಕಾಲ ಸುನಿಲ್ ಗವಾಸ್ಕರ್ ಹೆಸರಿನಲ್ಲಿತ್ತು. ಆ ದಾಖಲೆಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅಳಿಸಿ ಹಾಕಿದ್ದರು. ಇನ್ನು 108 ಏಕದಿನ ಪಂದ್ಯಗಳನ್ನಾಡಿ 35.14ರ ಸರಾಸರಿಯಲ್ಲಿ 3092 ರನ್‌ ಗಳಿಸಿದ್ದಾರೆ.

Latest Videos
Follow Us:
Download App:
  • android
  • ios