* ಆಂಧ್ರ ನಾಯಕ ಹನುಮ ವಿಹಾರಿ ಭರ್ಜರಿ ಬ್ಯಾಟಿಂಗ್‌* ಹಾಲಿ ಚಾಂಪಿಯನ್‌ ಮಧ್ಯಪ್ರದೇಶ ವಿರುದ್ದ ವಿಹಾರಿ ಭರ್ಜರಿ ಬ್ಯಾಟಿಂಗ್* ಬಲಗೈ ಮುರಿದಿದ್ದರೂ ಎಡಗೈನಲ್ಲಿ ಬ್ಯಾಟಿಂಗ್ ಮಾಡಿದ ಆಂಧ್ರ ನಾಯಕ

ಇಂದೋರ್‌(ಫೆ.03): ಆಂಧ್ರಪ್ರದೇಶ ನಾಯಕ ಹನುಮ ವಿಹಾರಿ ಹಾಲಿ ಚಾಂಪಿಯನ್‌ ಮಧ್ಯಪ್ರದೇಶ ವಿರುದ್ಧ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನ 2ನೇ ಇನ್ನಿಂಗ್ಸಲ್ಲೂ ಗಾಯದ ನಡುವೆಯೇ ಬ್ಯಾಟ್‌ ಮಾಡಿ ಗಮನ ಸೆಳೆದಿದ್ದಾರೆ. ಮೊದಲ ಇನ್ನಿಂಗ್ಸಲ್ಲಿ ವೇಗಿ ಆವೇಶ್‌ ಖಾನ್‌ರ ಎಸೆತದಲ್ಲಿ ಕೈ ಮುರಿದುಕೊಂಡಿದ್ದ ವಿಹಾರಿ, ಬ್ಯಾಂಡೇಜ್‌ ಕಟ್ಟಿಕೊಂಡೇ ಕೊನೆ ವಿಕೆಟ್‌ಗೆ ಮತ್ತೆ ಕ್ರೀಸ್‌ಗಿಳಿದು ಆಡಿದ್ದರು. ಗುರುವಾರ 2ನೇ ಇನ್ನಿಂಗ್ಸಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಮತ್ತೆ ಬ್ಯಾಟಿಂಗ್‌ಗಿಳಿದು ಎಡಗೈನಲ್ಲೇ ಬ್ಯಾಟ್‌ ಬೀಸಿ 15 ರನ್‌ ಗಳಿಸಿದರು. ಒಂದೇ ಕೈಯಲ್ಲಿ ರಿವರ್ಸ್‌ ಸ್ವೀಪ್‌ ಮೂಲಕ ಬೌಂಡರಿ ಬಾರಿಸಿದ್ದು ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

ಮಧ್ಯಪ್ರದೇಶಕ್ಕೆ ಗೆಲ್ಲಲು ಆಂಧ್ರ 245 ರನ್‌ ಗುರಿ ನಿಗದಿಪಡಿಸಿದೆ. 3ನೇ ದಿನಕ್ಕೆ ವಿಕೆಟ್‌ ನಷ್ಟವಿಲ್ಲದೆ 58 ರನ್‌ ಗಳಿಸಿರುವ ಮ.ಪ್ರದೇಶಕ್ಕೆ ಇನ್ನು 187 ರನ್‌ ಬೇಕಿದೆ. ಮೊದಲ ಇನ್ನಿಂಗ್ಸಲ್ಲಿ ಮ.ಪ್ರದೇಶದ 228 ರನ್‌ಗೆ ಉತ್ತರವಾಗಿ 379 ರನ್‌ ಕಲೆಹಾಕಿ ಮುನ್ನಡೆ ಪಡೆದರೂ, ಆಂಧ್ರ 2ನೇ ಇನ್ನಿಂಗ್ಸಲ್ಲಿ 93 ರನ್‌ಗೆ ಆಲೌಟ್‌ ಆಯಿತು.

Scroll to load tweet…

3ನೇ ಏಕದಿನ: 59 ರನ್‌ ಜಯ ಪಡೆದ ಇಂಗ್ಲೆಂಡ್‌

ಕಿಮ್‌ಬರ್ಲಿ: ನಾಯಕ ಜೋಸ್‌ ಬಟ್ಲರ್‌(131) ಹಾಗೂ ಡೇವಿಡ್‌ ಮಲಾನ್‌(118)ರ ಶತಕ, ಜೋಫ್ರಾ ಆರ್ಚರ್‌(6/40)ರ ಮಾರಕ ದಾಳಿಯ ನೆರವಿನಿಂದ ದ.ಆಫ್ರಿಕಾ ವಿರುದ್ಧ 3ನೇ ಏಕದಿನದಲ್ಲಿ 59 ರನ್‌ ಜಯ ಸಾಧಿಸಿದ ಇಂಗ್ಲೆಂಡ್‌ ವೈಟ್‌ವಾಶ್‌ ತಪ್ಪಿಸಿಕೊಂಡಿದೆ. 2-1ರಲ್ಲಿ ಸರಣಿ ಆತಿಥೇಯ ತಂಡದ ಪಾಲಾಯಿತು. 14ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌, 4ನೇ ವಿಕೆಟ್‌ಗೆ ಬಟ್ಲರ್‌-ಮಲಾನ್‌ರ 232 ರನ್‌ ಜೊತೆಯಾಟದ ನೆರವಿನಿಂದ 7 ವಿಕೆಟ್‌ಗೆ 346 ರನ್‌ ಕಲೆಹಾಕಿತು. ದ.ಆಫ್ರಿಕಾ 43.1 ಓವರಲ್ಲಿ 287ಕ್ಕೆ ಆಲೌಟ್‌ ಆಯಿತು.

ವನಿತಾ ಏಕದಿನ: ಕ್ವಾರ್ಟರ್‌ ಪ್ರವೇಶಿಸಿದ ಕರ್ನಾಟಕ

ರಾಂಚಿ: ರಾಷ್ಟ್ರೀಯ ಹಿರಿಯ ಮಹಿಳಾ ಏಕದಿನ ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ ಪ್ರವೇಶಿಸಿದೆ. ಬುಧವಾರ ನಡೆದ ಪ್ರಿ ಕ್ವಾರ್ಟರ್‌ನಲ್ಲಿ ರಾಜ್ಯ ತಂಡ ಮಧ್ಯಪ್ರದೇಶ ವಿರುದ್ಧ 7 ವಿಕೆಟ್‌ ಜಯ ಸಾಧಿಸಿತು. ಮಧ್ಯಪ್ರದೇಶ 9 ವಿಕೆಟ್‌ಗೆ 166 ರನ್‌ ಗಳಿಸಿತು. ಕರ್ನಾಟಕ 36.3 ಓವರಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ನಾಯಕಿ ವೇದಾ ಔಟಾಗದೆ 44, ಶಿಶಿರಾ 41 ರನ್‌ ಗಳಿಸಿದರು. ಕ್ವಾರ್ಟರಲ್ಲಿ ರಾಜ್ಯಕ್ಕೆ ದೆಹಲಿ ಎದುರಾಗಲಿದೆ.

Border Gavaskar Trophy: ಮೊದಲ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾಗೆ ಶಾಕ್, ಸ್ಟಾರ್ ಬ್ಯಾಟರ್ ಔಟ್..?

ಆಸೀಸ್‌ ವಿರುದ್ಧ ಕೊನೆ 2 ಟೆಸ್ಟ್‌ಗೆ ಬುಮ್ರಾ ಆಯ್ಕೆ?

ಬೆಂಗಳೂರು: ಬೆನ್ನು ನೋವಿನ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಭಾರತದ ಮುಂಚೂಣಿ ವೇಗಿ ಜಸ್‌ಪ್ರೀತ್‌ ಬುಮ್ರಾ ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯ ನೆಟ್ಸ್‌ನಲ್ಲಿ ಬೌಲಿಂಗ್‌ ಆರಂಭಿಸಿದ್ದಾರೆ. ಅವರು ಆಸ್ಪ್ರೇಲಿಯಾ ವಿರುದ್ಧದ ಕೊನೆ 2 ಪಂದ್ಯಗಳಿಗೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬುಮ್ರಾ 2022ರ ಸೆಪ್ಟೆಂಬರ್‌ ಬಳಿಕ ಭಾರತ ತಂಡದಲ್ಲಿ ಆಡಿಲ್ಲ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ:

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

ಆಸೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಹೀಗಿದೆ:

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.