Asianet Suvarna News Asianet Suvarna News

IPL 2023 ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ದ ಟಾಸ್ ಗೆದ್ದ ಗುಜರಾತ್!

ಐಪಿಎಲ್ 2023ರ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಸಮಾರಂಭದ ಬಳಿಕ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್  ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಚೆನ್ನೈ ಹಾಗೂ ಗುಜರಾತ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರು ಸ್ಥಾನ ಪಡೆದಿದ್ದಾರೆ?

Gujarat Titans wins toss and chose bowl against CSK in opening match ipl 2023 ckm
Author
First Published Mar 31, 2023, 7:14 PM IST

ಅಹಮ್ಮದಾಬಾದ್(ಮಾ.31): ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಅರ್ಜಿತ್ ಸಿಂಗ್, ರಶ್ಮಿಕಾ ಮಂದಣ್ಣ ಹಾಗೂ ತಮನ್ನ ಭಾಟಿಯಾ ಅದ್ಭುತ ಪರ್ಫಾಮೆನ್ಸ್‌ನೊಂದಿಗೆ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಟೂರ್ನಿ ಬಳಿಕ ಆರಂಭಗೊಂಡ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.ಈ ಮೂಲಕ ಈ ಬಾರಿಯ ಮೊದಲು ಟಾಸ್ ಗೆದ್ದ ಹೆಗ್ಗಳಿಕೆ ಹಾರ್ಧಿಕ್ ಪಾಂಡ್ಯ ಪಾಲಾಗಿದೆ. ಇತ್ತ ಟಾಸ್ ಬಳಿಕ ಮಾತನಾಡಿದ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ, ಮೊದಲು ಬೌಲಿಂಗ್ ಹೆಚ್ಚು ಸೂಕ್ತ ಅನಿಸುತ್ತಿದೆ ಎಂದರು. 

ಹಾರ್ದಿಕ್ ಪಾಂಡ್ಯ ಪ್ಲೇಯಿಂಗ್ 11
ಶುಭಮನ್ ಗಿಲ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ರಾಹುಲ್ ಟಿವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಯಶ್ ದಯಾಳ್, ಅಲ್ಜಾರಿ ಜೊಸೆಫ್ 

ಐಪಿಎಲ್ 2023 ಅದ್ಧೂರಿ ಚಾಲನೆ, ಅರ್ಜಿತ್, ರಶ್ಮಿಕಾ, ತಮನ್ನ ಮೋಡಿಗೆ ಫ್ಯಾನ್ಸ್ ಫಿದಾ!

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ಡೇವೋನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಅಂಬಾಟಿ ರಾಯುಡು, ಮೊಯಿನ್ ಆಲಿ, ಶಿವಂ ದುಬೆ, ಎಂ.ಎಸ್ ದೋನಿ(ನಾಯಕ), ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ರಾಜವರ್ಧನ್ ಹಂಗಾರ್ಗೇಕಾರ್ 

ಒಪನಿಂಗ್ ಸರೆಮನಿ ಕಾರ್ಯಕ್ರಮ ಅಂತ್ಯಗೊಂಡತೆ ನಾಯಕ ಎಂ.ಎಸ್.ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ತೆರೆದ ವಾಹನದ ಮೂಲಕ ಅದ್ಧೂರಿಯಾಗಿ ಕ್ರೀಡಾಂಗಣ ಪ್ರವೇಶಿಸಿದರು. ಕೊರೋನಾ ಕಾರಣದಿಂದ ಭಾರತದಲ್ಲಿ ಐಪಿಎಲ್ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳು ಇದೀಗ ರೋಚಕ ಹೋರಾಟಕ್ಕಾಗಿ ಅಹಮ್ಮಾದಾಬಾದ್ ಕ್ರೀಡಾಂಗಣದಲ್ಲಿ ಸಾಕ್ಷಿಯಾಗಿದ್ದಾರೆ. 

10ನೇ ಕ್ಲಾಸ್‌ ಅಂಕಪಟ್ಟಿ ಹಂಚಿಕೊಂಡ ಕೊಹ್ಲಿ! ವಿರಾಟ್‌ SSLC ಯಲ್ಲಿ ಪಡೆದ ಸ್ಕೋರ್ ಎಷ್ಟು?

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ 16 ವಿಕೆಟ್‌ ಕಿತ್ತಿದ್ದ ಎಡಗೈ ವೇಗಿ ಮುಕೇಶ್‌ ಚೌಧರಿ ಗಾಯದ ಸಮಸ್ಯೆಯಿಂದಾಗಿ 16ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರ ಬದಲು ರಾಜಸ್ಥಾನದ ಯುವ ವೇಗಿ ಆಕಾಶ್‌ ಸಿಂಗ್‌ ಚೆನ್ನೈ ಸೂಪರ್‌ಕಿಂಗ್‌್ಸ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. 2020ರಲ್ಲಿ ಅಂಡರ್‌-19 ವಿಶ್ವಕಪ್‌ ಆಡಿದ್ದ ಆಕಾಶ್‌, ಈ ಹಿಂದೆ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದಿರಲಿಲ್ಲ. ಆಕಾಶ್‌ರನ್ನು ಚೆನ್ನೈ 20 ಲಕ್ಷ ರು.ಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ಟಾಸ್‌ಗೂ ಮೊದಲು ಆಡುವ ಹನ್ನೊಂದರ ಬಳಗದ ಪಟ್ಟಿಯನ್ನು ಎರಡೂ ತಂಡಗಳ ನಾಯಕರು ಪರಸ್ಪರ ಬದಲಿಸಿಕೊಳ್ಳುತ್ತಾರೆ. ಆದರೆ ಐಪಿಎಲ್‌ನಲ್ಲಿ ನಾಯಕರು ಟಾಸ್‌ಗೆ 2 ಪ್ರತ್ಯೇಕ ಪಟ್ಟಿಯೊಂದಿಗೆ ತೆರಳಲಿದ್ದು, ಟಾಸ್‌ ಆದ ಬಳಿಕ ಆಡುವ ಹನ್ನೊಂದರ ಪಟ್ಟಿಯನ್ನು ಬದಲಿಸಿಕೊಳ್ಳಲಿದ್ದಾರೆ. ಈ ಬದಲಾವಣೆಯಿಂದ ತಂಡಗಳು ತಾವು ಮೊದಲು ಬ್ಯಾಟ್‌ ಮಾಡಲಿದೆಯೋ ಅಥವಾ ಬೌಲ್‌ ಮಾಡಲಿದೆಯೋ ಎನ್ನುವುದನ್ನು ನೋಡಿಕೊಂಡು ಆಡುವ ಹನ್ನೊಂದರ ಬಳಗವನ್ನು ನಿರ್ಧರಿಸಬಹುದು.

Follow Us:
Download App:
  • android
  • ios