ಐಪಿಎಲ್‌ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, ಪಂದ್ಯದ ಸಮಯ ಚೇಂಜ್...!
ಕೊರೋನಾ ನಡುವೆಯೂ ಐಪಿಎಲ್ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ. ಐಪಿಎಲ್ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೇ ಪಂದ್ಯದ ಸಮಯ ಮತ್ತು ಫೈನಲ್ ಪಂದ್ಯದ ದಿನಾಂಕ ಬದಲಾವಣೆಯಾಗಿದೆ.
ನವದೆಹಲಿ, (ಆ.02): ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 13 ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಸುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಐಪಿಎಲ್ 13ನೇ ಆವೃತ್ತಿಯನ್ನು ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಆಯೋಜಿಸುವ ಬಿಸಿಸಿಐ ಯೋಜನೆಗೆ ಕೇಂದ್ರ ಸರ್ಕಾರ ಇಂದು (ಭಾನುವಾರ) ಗ್ರೀನ್ ಸಿಗ್ನಲ್ ನೀಡಿದೆ.
ಐಪಿಎಲ್ 2020: ಫ್ರಾಂಚೈಸಿಗಳ ಮುಂದೆ ಎದುರಾಗಿವೆ ಹಲವು ಸವಾಲು..!
ಮತ್ತೊಂದೆಡೆ ಯುಎಇಯಲ್ಲಿ ನಡೆಯಲಿರುವ 2020ನೇ ಐಪಿಎಲ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಇಂದು (ಭಾನುವಾರ) ಆಡಳಿತ ಮಂಡಳಿ ಸಭೆ ನಡೆಸಿದ್ದು, ಸಭೆಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ.
ಸಭೆಯ ನಿರ್ಣಯಗಳು
* ಪಂದ್ಯಗಳು ರಾತ್ರಿ 8 ಗಂಟೆ ಬದಲಾಗಿ ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ.
* ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 8ರ ಬದಲಾಗಿ ನ.10ರಂದು ನಡೆಯಲಿದೆ.
* ಪ್ರತಿ ತಂಡಕ್ಕೆ ಯುಎಇಗೆ ತಲಾ 24 ಆಟಗಾರರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ.
* ಪ್ರತಿ ತಂಡಕ್ಕೆ ಯುಎಇಗೆ ತಲಾ 24 ಆಟಗಾರರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ
* ಅಕಸ್ಮಾತ್ ಪಂದ್ಯದ ವೇಳೆ ಆ ದಿನದ ಪ್ಲೇಯಿಂಗ್ 11 ತಂಡದಲ್ಲಿರುವ ಆಟಗಾರನಲ್ಲಿ ಕೋವಿಡ್ 19 ಪಾಸಿಟಿವ್ ದೃಢಪಟ್ಟಲ್ಲಿ ಬದಲಿ ಆಟಗಾರನನ್ನು ಆಡಿಸುವ ನಿರ್ಧಾರಕ್ಕೆ ಬರಲಾಯಿತು.
* ಆಟಗಾರರೆಲ್ಲ ಪ್ರತ್ಯೇಕ ಖಾಸಗಿ ವಿಮಾನಗಳಲ್ಲಿ ಆ. 26ರೊಳಗೆ ಯುಎಇ ತಲುಪಬೇಕಿದೆ.