Asianet Suvarna News Asianet Suvarna News

BCCI ಕಾರ್ಯದರ್ಶಿ ಜೈ ಶಾಗೆ ಹಿಗ್ಗಾಮುಗ್ಗಾ ಜಾಡಿಸಿದ ಗೌತಮ್ ಗಂಭೀರ್..!

ಗೌತಮ್ ಗಂಭೀರ್, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಎರಡು ವಿಶ್ವಕಪ್ ಗೆದ್ದ ತಂಡದ ಸದಸ್ಯ. ಸದ್ಯ ಹಾಲಿ ಬಿಜೆಪಿ ಸಂಸದ. ಎಂಪಿ ಆದ್ರೂ ಪಾರ್ಲಿಮೆಂಟ್ಗೆ ಹೋಗಿದಕ್ಕಿಂತ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದೇ ಜಾಸ್ತಿ. ವರ್ಷದಲ್ಲಿ 10 ತಿಂಗಳು ಕ್ರಿಕೆಟ್. ಇನ್ನೆರಡು ತಿಂಗಳು ರಾಜಕೀಯ. ಇದು ವರ್ಕ್ ಔಟ್ ಆಗದ ಮಾತು.

Gautam Gambhir to quit politics ahead of Lok Sabha polls due to this reason kvn
Author
First Published Mar 3, 2024, 4:46 PM IST

ಬೆಂಗಳೂರು(ಮಾ.03) ಅಧಿಕಾರ ಕಳೆದುಕೊಂಡ್ರೆ ಆತನ ಪರಿಸ್ಥಿತಿ ಹೇಗಿರುತ್ತೆ ಅನ್ನೋದು ನಿಮಗೆಲ್ಲಾ ಗೊತ್ತು. ತಮ್ಮ ಅಧಿಕಾರ ಕಳೆದುಕೊಳ್ಳಲು ಕಾರಣವಾದವರನ್ನ ಬೈಯ್ದುಕೊಂಡು ತಿರುಗಾಡುತ್ತಾರೆ. ಆದ್ರೆ ಗೌತಮ್ ಗಂಭೀರ್, ತಮ್ಮ ಅಧಿಕಾರ ಕಳೆದುಕೊಳ್ಳಲು ಕಾರಣವಾದವರನ್ನ ಬಿಟ್ಟು ಅವರ ಮಗನನ್ನ ಬೈಯ್ದಿದ್ದಾನೆ. ಗೌತಿ ಟಾರ್ಗೆಟ್ ಮಾಡಿದ್ದು ಯಾರನ್ನು, ಯಾತಕ್ಕಾಗಿ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.

ಅಮಿತ್ ಶಾ ಮಗನನ್ನ ಬೈಯ್ದ ಬೆನ್ನಲ್ಲೇ ರಾಜಕೀಯ ನಿವೃತ್ತಿ..!

ಗೌತಮ್ ಗಂಭೀರ್, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಎರಡು ವಿಶ್ವಕಪ್ ಗೆದ್ದ ತಂಡದ ಸದಸ್ಯ. ಸದ್ಯ ಹಾಲಿ ಬಿಜೆಪಿ ಸಂಸದ. ಎಂಪಿ ಆದ್ರೂ ಪಾರ್ಲಿಮೆಂಟ್ಗೆ ಹೋಗಿದಕ್ಕಿಂತ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದೇ ಜಾಸ್ತಿ. ವರ್ಷದಲ್ಲಿ 10 ತಿಂಗಳು ಕ್ರಿಕೆಟ್. ಇನ್ನೆರಡು ತಿಂಗಳು ರಾಜಕೀಯ. ಇದು ವರ್ಕ್ ಔಟ್ ಆಗದ ಮಾತು. ಎಂಪಿ ಆಗಿ ಕೆಲಸ ಮಾಡಿದ್ದು ಶೂನ್ಯ. ಬರೀ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ತಿರೋರು. ಅವರ ಕ್ಷೇತ್ರದ ಜನರನ್ನ ಭೇಟಿ ಮಾಡಿದ್ದು ತೀರ ಕಮ್ಮಿ. ಇದರಿಂದ ಬಿಜೆಪಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಹೇಗಿದ್ದರೂ ಈ ಸಲ ಟಿಕೆಟ್ ಸಿಗಲ್ಲ ಅಂತ ಗೊತ್ತಾಯ್ತು. ಅದಕ್ಕಾಗಿ ದಿಢೀರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. 

IPL 2024: ಕಲರ್‌ ಫುಲ್ ಲೀಗ್‌ಗೆ ಇಂಜುರಿ ಕಾಟ..! ಈಗಾಗಲೇ ಮೂವರು ಟೂರ್ನಿಯಿಂದ ಔಟ್

ನನ್ನ ರಾಜಕೀಯ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ನಾನು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಜೀ ಅವರಿಗೆ ಮನವಿ ಮಾಡಿದ್ದೇನೆ. ಇದರಿಂದಾಗಿ ನಾನು ನನ್ನ ಮುಂಬರುವ ಕ್ರಿಕೆಟ್ ಬದ್ಧತೆಗಳ ಮೇಲೆ ಕೇಂದ್ರೀಕರಿಸುತ್ತೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳು. ಜೈ. ಹಿಂದ್. ಎಂದು ಗೌತಮ್ ಗಂಭೀರ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮೊನ್ನೆ ಜೈ ಶಾ ವಿರುದ್ಧ ವಾಗ್ದಾಳಿ, ನಿನ್ನೆ ರಾಜಕೀಯ ನಿವೃತ್ತಿ..!

ರಾಜಕೀಯಕ್ಕೆ ನಿವೃತ್ತಿ ಘೋಷಿಸುವುದಕ್ಕೂ ಒಂದು ದಿನ ಮುಂಚೆ ಗೌತಮ್ ಗಂಭೀರ್, ಬಿಸಿಸಿಐ ಕಾರ್ಯದರ್ಶಿ ಜೈ ಅವರನ್ನ ಬಾಯಿಗೆ ಬಂದಂತೆ ಬೈಯ್ದಿದ್ದಾರೆ. ಜೈ ಶಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ. ಬಿಸಿಸಿಐ ಕೇಂದ್ರ ಗುತ್ತಿ ಪಟ್ಟಿಯಿಂದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನ ಕೈ ಬಿಟ್ಟಿರುವುದಕ್ಕೆ, ಈ ಇಬ್ಬರನ್ನ ಬೆಂಬಲಿಸಿ ಗೌತಿ ಮಾತನಾಡಿದ್ದಾರೆ. ಕ್ರಿಕೆಟ್ ಬ್ಯಾಟ್ ಹಿಡಿಯದವನು. ಒಬ್ಬ ಬ್ಯುಸಿನೆಸ್ ಮ್ಯಾನ್. ಕ್ರಿಕೆಟ್ ಗಂದಗಾಳಿ ಗೊತ್ತಿಲ್ಲದವನು. ಕ್ರಿಕೆಟ್ ಆಡಳಿತನ ನಡೆಸಲು ಬರದವನಿಂದ ಭಾರತೀಯ ಕ್ರಿಕೆಟ್ ಯಾವತ್ತಿಗೂ ಉದ್ದಾರ ಆಗಲ್ಲ ಅಂತ ಬೈಯ್ದಿದ್ದಾರೆ. ಗಂಭೀರ್ ಖಡಕ್ ಮಾತು ಇಲ್ಲಿದೆ ನೋಡಿ.

ಇಶಾನ್ ಕಿಶನ್‌ಗೆ ಅದೆಷ್ಟು ಸೊಕ್ಕು..? BCCI ನೀಡಿದ ಆಫರ್ ತಿರಸ್ಕರಿಸಿದ ಮುಂಬೈ ಇಂಡಿಯನ್ಸ್ ಕ್ರಿಕೆಟಿಗ..!

MP ಆದ್ಮೇಲೆ ಕ್ಷೇತ್ರದಲ್ಲಿ ಖುದ್ದು ಹಾಜರಿದ್ದು ಕೆಲಸ ಮಾಡ್ಬೇಕು. ಅದನ್ನ ಬಿಟ್ಟು ಮೈಕ್ ಹಿಡಿದುಕೊಂಡು ಕ್ರಿಕೆಟ್ ಬಗ್ಗೆ ಪುಂಖಾಪುಂಖವಾಗಿ ಮಾತನಾಡುತ್ತಿದ್ದರೆ, ಕ್ಷೇತ್ರದಲ್ಲಿ ಕೆಲಸ ಮಾಡೋರು ಯಾರು. ಇದರಿಂದ ಬೇಸತ್ತ ಅಮಿತ್ ಶಾ, ಈ ಸಲ ಗಂಭೀರ್‌ಗೆ ಟಿಕೆಟ್ ತಪ್ಪಿಸಲು ನಿರ್ಧರಿಸಿದ್ದರು. ಟಿಕೆಟ್ ಕೈ ತಪ್ಪುತ್ತೆ ಅಂತ ಗೊತ್ತಾದ್ಮೇಲೆ ರಾಜಕೀಯ ನಿವೃತ್ತಿ ಘೋಷಿಸಿದ್ರು. ಅಮಿತ್ ಶಾ ಬೈಯ್ಯೋಕೆ ಆಗಲ್ವಲ್ಲ. ಅದಕ್ಕೆ ಅವರ ಮಗನನ್ನ ಟಾರ್ಗೆಟ್ ಮಾಡಿದ್ರು ಗೌತಿ. ಇಶಾನ್-ಶ್ರೇಯಸ್ ವಿಷ್ಯ ಸಿಕ್ಕಿತು. ಜೈ ಶಾನನ್ನ ಬಾಯಿಗೆ ಬಂದಂತೆ ಬೈಯ್ದಿದ್ದಾರೆ. ಆದ್ರೆ ಇದು ಇಲ್ಲಿಗೆ ನಿಲ್ಲೋಲ್ಲ. ಯಾಕಂದ್ರೆ ಗಂಭೀರ್, ಕೆಕೆಆರ್ ಮೆಂಟರ್, ಕಾಮೆಂಟ್ರಿ.. ಹೀಗೆ ಕ್ರಿಕೆಟ್ನಲ್ಲಿ ಹಲವು ಹುದ್ದೆಗಳನ್ನ ನಿರ್ವಹಿಸುತ್ತಿದ್ದಾರೆ. ಈಗ ಗಂಭೀರ್ ಎದುರು ಹಾಕಿಕೊಂಡಿರೋದು ಯಾವ್ದೇ ಕಾಲಿ ಪೋಲಿ ಆಟಗಾರನನ್ನಲ್ಲ.. ಗೃಹ ಸಚಿವನ ಮಗ. ಬಿಸಿಸಿಐ ಬಿಗ್ ಬಾಸ್. ಅಲ್ಲಿಗೆ ಗೌತಿಗೆ ಕೇಡುಗಾಲ ಶುರುವಾಗಿದೆ ಅಂತಲೇ ಅರ್ಥ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

Follow Us:
Download App:
  • android
  • ios