ವಿಶ್ವ ಕ್ರಿಕೆಟ್‌ನಲ್ಲಿ ಧೋನಿ ದಿ ಬೆಸ್ಟ್ ಫಿನೀಶರ್ ಕೊನೆ 6 ಓವರ್‌ಗಳಲ್ಲಿ ಧೋನಿ ರನ್ ಸುರಿಮಳೆ ದಿಗ್ಗಜ ಕ್ರಿಕೆಟಿಗರನ್ನು ಹಿಂದಿಕ್ಕಿದ್ದಾರೆ ಧೋನಿ
ಬೆಂಗಳೂರು(ಮಾ.25): ಮಹೇಂದ್ರ ಸಿಂಗ್ ಧೋನಿ. ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ 18 ವರ್ಷವಾಗಿದೆ. ಹಾಗೆ ಇಂಟರ್ ನ್ಯಾಷನಲ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿ ಎರಡು ವರ್ಷವೇ ಉರುಳಿದೆ. ವಯಸ್ಸು ಬರೋಬ್ಬರಿ 40. ಆದರೂ ಅವರ ಖದರ್ ಕಡಿಮೆಯಾಗಿಲ್ಲ. ಕೇವಲ ಟೀಂ ಇಂಡಿಯಾ ಪರ ಮಾತ್ರವಲ್ಲ, ಐಪಿಎಎಲ್ ಟೂರ್ನಿಯ ಡೆತ್ ಓವರ್‌ಗಳಲ್ಲಿ ಧೋನಿಯೇ ಕಿಂಗ್. ಕಾರಣ ಡೆತ್ ಓವರ್‌ಗಳಲ್ಲಿ ಬೌಲರ್‌ಗಳ ಮಾರಣ ಹೋಮ ಮಾಡಿದ್ದಾರೆ.
ಐಪಿಎಲ್‌ನಲ್ಲಿ 15ರಿಂದ 20 ಅಂದರೆ ಕೊನೆ 6 ಓವರ್‌ಗಳಲ್ಲಿ ಅತಿಹೆಚ್ಚು ರನ್ ಹೊಡೆದಿರೋದು ಧೋನಿ. ಒಟ್ಟಾರೆ ಅಲ್ಲ, ಪ್ರತಿ ಓವರ್‌ನಲ್ಲೂ ಮಹಿ ಡಾಮಿನೆಂಟ್ ಮಾಡಿದ್ದಾರೆ. ಡೆತ್ ಓವರ್‌ಗಳಲ್ಲಿ ಸ್ಫೋಟಕ ಮಾಡೋ ಮೂಲಕ ರನ್ ಹೊಳೆಯನ್ನೇ ಹರಿಸಿದ್ದಾರೆ. ಮಹಿ ಮುಂದೆ ಡಿವಿಲಿಯರ್ಸ್, ಪೊಲ್ಲಾರ್ಡ್, ಬ್ರಾವೋ, ಪಾಂಡ್ಯ, ಕೊಹ್ಲಿ, ರೈನಾ ಹೀಗೆ ಘಟಾನುಘಟಿ ಬ್ಯಾಟ್ಸ್‌ಮನ್‌ಗಳೆಲ್ಲಾ ಸೈಡ್ ಲೈನ್ ಆಗಿದ್ದಾರೆ. ಆ ಮಟ್ಟಿಗೆ ಡೆತ್ ಓವರ್ಸ್‌ನಲಲ್ಲಿ ಹವಾ ಎಬ್ಬಿಸಿದ್ದಾರೆ ಧೋನಿ.
MS Dhoni ಬಳಿಕ ಮತ್ತೋರ್ವ ಸ್ಟಾರ್ ಕ್ರಿಕೆಟಿಗ ನಾಯಕತ್ವಕ್ಕೆ ಗುಡ್ ಬೈ..?
15ನೇ ಓವರ್.. 442 ರನ್!
IPLನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪುಣೆ ಪರ ಆಡಿರುವ ಧೋನಿ, ನಂಬರ್ 5 ಸ್ಲಾಟಲ್ಲಿ ಬ್ಯಾಟಿಂಗ್ ಮಾಡ್ತಾರೆ. ಹಾಗಾಗಿ ಮಹಿ ಕ್ರೀಸಿಗಿಳಿಯೋದೇ 10 ಓವರ್‌ಗಳ ನಂತರವೇ. ಅವರು ಕ್ರೀಸಿನಲ್ಲಿ ಸೆಟಲ್ ಆಗೋಕೆ ಒಂದೆರಡು ಓವರ್ ಆದ್ರೂ ಬೇಕಲ್ವಾ..? 15ನೇ ಓವರ್‌ನಿಂದ ಗೇರ್ ಬದಲಿಸೋ ಧೋನಿ, ಆ ಓವರ್‌ನಲಲ್ಲಿ ಬರೋಬ್ಬರಿ 442 ರನ್ ಬಾರಿಸಿದ್ದಾರೆ. IPL ಇತಿಹಾಸದಲ್ಲಿಯೇ 15ನೇ ಓವರ್‌ನಲ್ಲಿ ಮಹಿ ಬಿಟ್ಟು ಬೇರೆ ಯಾರೂ ಅಷ್ಟು ರನ್ ಹೊಡೆದಿಲ್ಲ.
16ನೇ ಓವರ್.. 476 ರನ್
ಒಮ್ಮೆ ಗೇರ್ ಬದಲಿಸಿದ್ರೆ ಧೋನಿಯನ್ನ ಕಂಟ್ರೋಲ್ ಮಾಡೋಕೆ ಸಾಧ್ಯವಿಲ್ಲ ಬಿಡಿ. 15ನೇ ಓವರ್‌ನಲ್ಲಿ ಆರ್ಭಟಿಸಲು ಸ್ಟಾರ್ಟ್ ಮಾಡಿದ್ರೆ ಅದು ಹಾಗೆ ಕಂಟ್ಯುನ್ಯೂ ಆಗುತ್ತೆ. ಹಾಗಾಗಿ 16ನೇ ಓವರ್ ಒಂದರಲ್ಲೇ ಮಹಿ 476 ರನ್ ಸಿಡಿಸಿದ್ದಾರೆ. ಈ ಓವರ್‌ನಲ್ಲಿ ಸ್ಪಿನ್ನರ್ಸ್ ಜೊತೆ ಫಾಸ್ಟ್ ಬೌಲರ್ಸ್ ವಿರುದ್ಧವೂ ಡಾಮಿನೆಂಟ್ ಸಾಧಿಸಿ, ರನ್ ಹೊಳೆಯನ್ನೇ ಹರಿಸಿದ್ದಾರೆ.
ನಾಯಕತ್ವದಿಂದ ಕೆಳಗಿಳಿದ ಧೋನಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ..!
17ನೇ ಓವರ್.. 572 ರನ್
17ನೇ ಓವರ್ ಅಂದ್ರೆ ಮ್ಯಾಚ್ ಮುಗಿಯೋಕೆ ಇನ್ನೂ 4 ಓವರ್ ಬಾಕಿ ಇರುತ್ತವೆ. ಆ ಓವರ್‌ನಲ್ಲಿ ಅದ್ಭುತ ವೇಗದ ಬೌಲರ್ಸ್ ದಾಳಿ ಮಾಡೋದು ಸಹಜ. ಆದ್ರೆ ಅಂತಹ ಬೌಲರ್‌ಗಳ ಮಾರಣ ಹೋಮ ಮಾಡಿದ್ದಾರೆ ಧೋನಿ. 17ನೇ ಓವರ್‌ನಲ್ಲಿ ಬರೋಬ್ಬರಿ 572 ರನ್ ಬಾರಿಸಿದ್ದಾರೆ.
18ನೇ ಓವರ್.. 596 ರನ್
ಧೋನಿ ಕೊನೆಯಲ್ಲಿ ಬ್ಯಾಟಿಂಗ್ ಮಾಡೋಕೆ ಬರೋದ್ರಿಂದ ಅವರು ನಾಟೌಟ್ ಆಗಿ ಉಳಿಯೋದೇ ಹೆಚ್ಚು. ಹಾಗಾಗಿ ಅವರು ಡೆತ್ ಓವರ್ ಪೂರ್ತಿ ಬ್ಯಾಟಿಂಗ್ ಮಾಡ್ತಾರೆ. 14 ಓವರ್‌ನಲ್ಲಿ ಸ್ಟಾರ್ಟ್ ಆಗೋ ಮಹಿ ಆರ್ಭಟ, ಪ್ರತಿ ಓವರ್ಗೆ ಹೆಚ್ಚುತ್ತಲೇ ಹೋಗುತ್ತೆ. 18ನೇ ಓವರ್‌ನಲ್ಲಿ ಧೋನಿ 596 ರನ್ ಹೊಡೆದಿದ್ದಾರೆ.
19ನೇ ಓವರ್.. 599 ರನ್..
ಇನ್ನಿಂಗ್ಸ್ ಮುಗಿಯೋಕೆ ಕೇವಲ ಎರಡು ಓವರ್ ಬಾಕಿ ಇರುತ್ತವೆ. ಮ್ಯಾಚ್ ಫಿನಿಶ್ ಮಾಡಬೇಕು. ಹಾಗಾಗಿ ಯಾವ್ದೇ ಫಿನಿಶರ್ ಆದ್ರೂ ಕೊನೆ ಎರಡು ಓವರ್ ಆರ್ಭಟಿಸೋದು ಸಹಜ. ಧೋನಿಯೂ ಅಷ್ಟೆ 19ನೇ ಓವರ್‌ನಲ್ಲಿ ಮತ್ತೊಮ್ಮೆ ಗೇರ್ ಬದಲಿಸಿ, ಬೌಂಡ್ರಿ-ಸಿಕ್ಸರ್ಗಳ ಸುರಿಮಳೆಗೈಯ್ದು 599 ರನ್ ಬಾರಿಸಿದ್ದಾರೆ. 600ರಕ್ಕೆ ಜಸ್ಟ್ ಒಂದು ರನ್ ಕಮ್ಮಿ.
20ನೇ ಓವರ್.. 610 ರನ್..
ಇದು ಮ್ಯಾಚ್ ಫಿನಿಶ್ ಮಾಡೋ ಓವರ್. ಕೊನೆಯ ಓವರ್ ಕೂಡ. ಯಾವ ಓವರ್‌ನಲ್ಲೂ ಹೊಡೆದಿರದಷ್ಟು ರನ್ಗಳನ್ನ ಈ ಒಂದು ಓವರ್‌ನಲ್ಲಿ ಧೋನಿ ಹೊಡೆದಿದ್ದಾರೆ. 20ನೇ ಓವರ್‌ನಲ್ಲಿ ಬರೋಬ್ಬರಿ 610 ರನ್ ಬಾರಿಸಿದ್ದಾರೆ. ಮೊದಲ 14 ಓವರ್‌ನಲ್ಲೂ ಯಾರೂ ಇಷ್ಟು ರನ್ ಹೊಡೆದಿಲ್ಲ. ಕೊನೆ ಓವರ್‌ನಲ್ಲಿ ಮಹಿಯನ್ನ ಕಂಟ್ರೋಲ್ ಮಾಡೋಕೆ ಯಾವ ಬೌಲರ್ಗಳಿಂದಲೂ ಸಾಧ್ಯವಾಗಿಲ್ಲ. ಹಾಗಾಗಿ ಇಷ್ಟು ರನ್ಗಳು ಹರಿದು ಬಂದಿವೆ.
ಮೊದಲ 14 ಓವರ್‌ಗಳಲ್ಲಿ ಐವರು ಬ್ಯಾಟ್ಸ್‌ಮನ್ ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ ಕೊನೆ 6 ಓವರ್‌ನಲ್ಲಿ ಧೋನಿಯೇ ಕಿಂಗ್. ಅವರ ಮುಂದೆ ಉಳಿದವರೆಲ್ಲಾ ಶೂನ್ಯ. ಅದಕ್ಕೆ ಧೋನಿಯನ್ನ ದಿ ಬೆಸ್ಟ್ ಫಿನಿಶರ್ ಅನ್ನೋದು.
