Asianet Suvarna News Asianet Suvarna News

MS Dhoni ಬಳಿಕ ಮತ್ತೋರ್ವ ಸ್ಟಾರ್ ಕ್ರಿಕೆಟಿಗ ನಾಯಕತ್ವಕ್ಕೆ ಗುಡ್‌ ಬೈ..?

* ಚೆನ್ನೈ ಸೂಪರ್ ಕಿಂಗ್ಸ್‌ ನಾಯಕತ್ವದಿಂದ ಕೆಳಗಿಳಿದ ಮಹೇಂದ್ರ ಸಿಂಗ್ ಧೋನಿ

* ಧೋನಿ ರೀತಿಯಲ್ಲಿ ಇದೀಗ ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನಿಸಿದ ಸ್ಟಾರ್ ಕ್ರಿಕೆಟಿಗ

* ಕೆಲವೇ ದಿನಗಳಲ್ಲಿ ನಾಯಕತ್ವದಿಂದ ಜೋ ರೂಟ್ ಕೆಳಗಿಳಿಯುವ ಸಾಧ್ಯತೆ

Joe Root Admits That 3rd Test Against West Indies Could Be His Last As England Cricket Captain kvn
Author
Bengaluru, First Published Mar 25, 2022, 4:33 PM IST

ನವದೆಹಲಿ(ಮಾ.25): ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೆ ಎರಡು ದಿನ ಭಾಕಿ ಇರುವಾಗಲೇ ಮಹೇಂದ್ರ ಸಿಂಗ್ ಧೋನಿ (MS Dhoni) ದಿಢೀರ್ ಎನ್ನುವಂತೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದೀಗ ಅದೇ ರೀತಿ ಮತ್ತೋರ್ವ ಸ್ಟಾರ್ ಕ್ರಿಕೆಟಿಗ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ವೆಸ್ಟ್‌ ಇಂಡೀಸ್ ಹಾಗೂ ಇಂಗ್ಲೆಂಡ್ (West Indies vs England) ತಂಡಗಳ ನಡುವೆ ಗ್ರೆನೆಡಾದಲ್ಲಿ ನಡೆಯಲಿರುವ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಜೋ ರೂಟ್ (Joe Root) ಪಾಲಿಗೆ ನಾಯಕನಾಗಿ ಕೊನೆಯ ಟೆಸ್ಟ್ ಪಂದ್ಯವಾಗುವುದು ಬಹುತೇಕ ದಟ್ಟವಾಗಿದೆ.

ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವು (England Cricket Team) ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದ್ದು, ಈಗಾಗಲೇ ಎರಡು ಟೆಸ್ಟ್ ಪಂದ್ಯಗಳು ಮುಕ್ತಾಯವಾಗಿದೆ. ಮೊದಲೆರಡು ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಮುಕ್ತಾಯವಾಗಿದ್ದು, ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಜೋ ರೂಟ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ. ಕೆಲ ತಿಂಗಳ ಹಿಂದಷ್ಟೇ 2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯನ್ನಾಡಲು (Ashes Test Series) ಇಂಗ್ಲೆಂಡ್ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರವಾಸವನ್ನು ಮಾಡಿತ್ತು. 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವು 0-4 ಅಂತರದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಶರಣಾಗಿತ್ತು. ಈ ಹೀನಾಯ ಸೋಲಿನ ಬಳಿಕ ತಂಡದಲ್ಲಿ ಮೇಜರ್ ಸರ್ಜರಿ ಮಾಡಲು ಇಂಗ್ಲೆಂಡ್ ಆಡಳಿತ ಮಂಡಳಿ ತೀರ್ಮಾನಿಸಿದೆ. 

ಇದರ ಭಾಗವಾಗಿ ಈಗಾಗಲೇ ಇಂಗ್ಲೆಂಡ್ ಕ್ರಿಕೆಟ್ ತಂಡದ ಹೆಡ್ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಕ್ರಿಸ್ ಸಿಲ್ವರ್‌ವುಡ್ ಅವರ ತಲೆದಂಡವಾಗಿದ್ದು, ಸದ್ಯಕ್ಕೆ ಹಂಗಾಮಿ ಹೆಡ್‌ ಕೋಚ್ ಆಗಿ ಪೌಲ್ ಕಾಲಿಂಗ್‌ವುಡ್‌ ಅವರನ್ನು ನೇಮಕ ಮಾಡಲಾಗಿದೆ. ಇದೀಗ ಜೂನ್‌ ತಿಂಗಳಿನಲ್ಲಿ ತವರಿನಲ್ಲಿ ನ್ಯೂಜಿಲೆಂಡ್‌ ಆರಂಭವಾಗಲಿರುವ ಟೆಸ್ಟ್ ಸರಣಿಗೂ (Test Cricket) ಮುನ್ನ ತಂಡದಲ್ಲಿ ಮೇಜರ್‌ ಸರ್ಜರಿಯಾಗುವ ಸಾಧ್ಯತೆಯಿದೆ.

Joe Root Admits That 3rd Test Against West Indies Could Be His Last As England Cricket Captain kvn

IPL 2022: ಸಿಎಸ್‌ಕೆ ಪಾಲಿಗೆ ಗುಡ್‌ ನ್ಯೂಸ್, ಎರಡನೇ ಪಂದ್ಯಕ್ಕೆ ಸ್ಟಾರ್ ಆಟಗಾರ ಲಭ್ಯ..!

ಜೋ ರೂಟ್‌, ಇಂಗ್ಲೆಂಡ್‌ ತಂಡವನ್ನು ನಾಯಕನಾಗಿ 63 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡವನ್ನು ಅತಿಹೆಚ್ಚು ಬಾರಿ ಮುನ್ನಡೆಸಿದ ನಾಯಕ ಎನ್ನುವ ಕೀರ್ತಿಗೆ ಜೋ ರೂಟ್ ಪಾತ್ರರಾಗಿದ್ದಾರೆ. ಇದೀಗ ವೆಸ್ಟ್ ಇಂಡೀಸ್ ವಿರುದ್ದದ ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಮಾತನಾಡಿದ ಜೋ ರೂಟ್, ನನಗನಿಸುವ ಪ್ರಕಾರ, ತಂಡವನ್ನು ನಾನು ಮುನ್ನಡೆಸಲು ಸರಿಯಾದ ವ್ಯಕ್ತಿಯೆಂದು ಭಾವಿಸಿದ್ದೇನೆ. ಆದರೆ ಹೆಡ್ ಕೋಚ್ ಆಗಿ ತಂಡದೊಳಗೆ ಬಂದವರು, ವಿಭಿನ್ನವಾಗಿ ಆಲೋಚಿಸಿದರೆ, ಅದು ಅವರಿಗೆ ಬಿಟ್ಟ ವಿಚಾರ. ನಾನು ಇಂಗ್ಲೆಂಡ್ ಕ್ರಿಕೆಟ್ ತಂಡದ ದೊಡ್ಡ ಅಭಿಮಾನಿ. ನಮ್ಮ ತಂಡ ಉತ್ತಮವಾಗಿ ಅಡಲಿ ಎಂದು ನಾನೂ ಬಯಸುತ್ತೇನೆ. ಹೀಗಾಗಿ ತಂಡಕ್ಕೆ ಒಳಿತಾಗಲು ನನ್ನಿಂದ ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನು ಮಾಡುತ್ತೇನೆ. ನಾನು ಇದೇ ಸ್ಥಾನದಲ್ಲಿ ಹೆಚ್ಚುಕಾಲ ಮುಂದುವರೆಯುವುದಿಲ್ಲ. ಹೀಗಿದ್ದೂ ನಾನು ತಂಡವನ್ನು ಮೇಲೆತ್ತಲು ಏನು ಮಾಡಲು ಸಾಧ್ಯವೋ ಅದನ್ನು ಮಾಡಲು ಕೊನೆಯ ಕ್ಷಣದವರೆಗೂ ಪ್ರಯತ್ನಿಸುತ್ತೇನೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಜೋ ರೂಟ್ 'ದ ಸನ್‌' ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

Follow Us:
Download App:
  • android
  • ios