ಪ್ಯಾರಿಸ್‌(ಜೂ.08): ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಿಂದ ಅಮೆರಿಕದ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಹೊರಬಿದ್ದಿದ್ದಾರೆ. ದಾಖಲೆಯ 24ನೇ ಹಾಗೂ ತಾಯಿಯಾದ ಬಳಿಕ ಮೊದಲ ಗ್ರ್ಯಾನ್‌ ಸ್ಲಾಂ ಗೆಲ್ಲುವ ಸೆರೆನಾ ಕನಸು, ಕನಸಾಗಿಯೇ ಉಳಿದಿದೆ. 

ಮಹಿಳಾ ಸಿಂಗಲ್ಸ್‌ 4ನೇ ಸುತ್ತಿನಲ್ಲಿ ಕಜಕಸ್ತಾನದ ಎಲೆನಾ ರೈಬಾಕಿನಾ ವಿರುದ್ಧ 3-6, 5-7 ಸೆಟ್‌ಗಳಲ್ಲಿ ಸೆರೆನಾ ವಿಲಿಯಮ್ಸ್ ಸೋಲುಂಡರು. ಕಜಕಸ್ತಾನದ 21 ಆಟಗಾರ್ತಿ ಮೊದಲ ಬಾರಿಗೆ ಮಹತ್ವದ ಪಂದ್ಯದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಈ ಪಂದ್ಯವನ್ನು ಜಯಿಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ, ಇದೊಂದು ಅದ್ಭುತ ಅನುಭವ ಎಂದು ಎಲೆನಾ ರೈಬಾಕಿನಾ ಹೇಳಿದ್ದಾರೆ.

ಫ್ರೆಂಚ್‌ ಓಪನ್‌ ಟೆನಿಸ್‌: ಕ್ವಾರ್ಟರ್‌ಗೆ ಬೋಪಣ್ಣ ಜೋಡಿ

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ 17 ವರ್ಷದ ಕೊಕೋ ಗಾಫ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.