ಪ್ಯಾರಿಸ್(ಜೂ.07)‌: ಭಾರತದ ರೋಹನ್‌ ಬೋಪಣ್ಣ ಹಾಗೂ ಕ್ರೊವೇಷಿಯಾದ ಫ್ರಾಂಕೊ ಸ್ಕುಗೊರ್‌ ಜೋಡಿ ಫ್ರೆಂಚ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ನೆದರ್‌ಲೆಂಡ್ಸ್‌ನ ಮಾಟ್ವೆ ಮಿಡಲ್‌ಕೂಪ್‌ ಹಾಗೂ ಎಲ್‌ ಸಾಲ್ವಡೊರ್‌ನ ಮಾರ್ಸೆಲೊ ಅರೆವಾಲೊ ವಿರುದ್ಧ ಭಾನುವಾರ ನಡೆಯಬೇಕಿದ್ದ 3ನೇ ಸುತ್ತಿನ ಪಂದ್ಯದಲ್ಲಿ, ಬೋಪಣ್ಣ ಜೋಡಿಗೆ ವಾಕ್‌ ಓವರ್‌ ದೊರೆಯಿತು.

ಭಾರತದ ರೋಹನ್‌ ಬೋಪಣ್ಣ ಹಾಗೂ ಕ್ರೊವೇಷಿಯಾದ ಫ್ರಾಂಕೊ ಸ್ಕುಗೊರ್‌ ಇದೀಗ ಸೆಮಿಫೈನಲ್ ಪ್ರವೇಶಿಸಲು ಪಾಬ್ಲೋ ಅಂಜುರ್ ಹಾಗೂ ಪೆಡ್ರೊ ಮಾರ್ಟಿನೆಜ್ ಅವರನ್ನು ಎದುರಿಸಲಿದ್ದಾರೆ. ಶ್ರೇಯಾಂಕ ರಹಿತ ರೋಹನ್‌ ಬೋಪಣ್ಣ ಹಾಗೂ ಫ್ರಾಂಕೊ ಸ್ಕುಗೊರ್‌ ಜೋಡಿ ಎರಡನೇ ಸುತ್ತಿನಲ್ಲಿ ಅಮೆರಿಕ ಜೋಡಿಯ ಎದುರು ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿತ್ತು. 

ಫ್ರೆಂಚ್ ಓಪನ್‌ನಿಂದ ದಿಢೀರ್ ಹಿಂದೆ ಸರಿದ ರೋಜರ್ ಫೆಡರರ್!

41 ವರ್ಷದ ರೋಹನ್ ಬೋಪಣ್ಣ ಸದ್ಯ ವಿಶ್ವದ 40ನೇ ಶ್ರೇಯಾಂಕ ಹೊಂದಿದ್ದಾರೆ. ಈ ವರ್ಷದಲ್ಲಿ ಬೋಪಣ್ಣ ಯಾವುದೇ ಅಂಕಗಳನ್ನು ಗಳಿಸಿಲ್ಲ. ಹೀಗಾಗಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕಿದ್ದರೆ ಜೂನ್ 10ರೊಳಗಾಗಿ ರೋಹನ್ ಬೋಪಣ್ಣ ತನ್ನ ರ‍್ಯಾಂಕಿಂಗ್‌ ಉತ್ತಮಪಡಿಸಿಕೊಳ್ಳಬೇಕಿದೆ.