Asianet Suvarna News Asianet Suvarna News

IPL Auction 2022: ವಿವಿಧ ಫ್ರಾಂಚೈಸಿಗಳಿಂದ ಪ್ರತಿಭಾನ್ವೇಷಣೆ ಶುರು..!

* 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಫ್ರಾಂಚೈಸಿಗಳು

* ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರರ ಪ್ರದರ್ಶನದ ಮೇಲೆ ಫ್ರಾಂಚೈಸಿಗಳ ಕಣ್ಣು

* ಜನವರಿ ತಿಂಗಳಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯುವ ಸಾಧ್ಯತೆ

Franchise eyes on domestic circuits ahead of IPL Mega Auction 2022 kvn
Author
Bengaluru, First Published Dec 13, 2021, 9:33 AM IST

ನವದೆಹಲಿ(ಡಿ.13): 2022ರ ಐಪಿಎಲ್‌ಗೂ ಮುನ್ನ ಮೆಗಾ ಹರಾಜು (IPL Mega Auction) ಪ್ರಕ್ರಿಯೆ ಮುಂದಿನ ತಿಂಗಳು ನಡೆಯಲಿದ್ದು, ಪ್ರತಿಭಾವಂತ ಆಟಗಾರರನ್ನು ಹುಡುಕುತ್ತಿರುವ ಫ್ರಾಂಚೈಸಿಗಳು (IPL Franchises) ವಿವಿಧ ದೇಸಿ ಟೂರ್ನಿಗಳ ಮೇಲೆ ಕಣ್ಣಿಟ್ಟಿವೆ. ಸದ್ಯ ವಿಜಯ್‌ ಹಜಾರೆ ಏಕದಿನ ಟೂರ್ನಿ (Vijay Hazare Trophy), ಆಸ್ಪ್ರೇಲಿಯಾದ ಬಿಗ್‌ ಬ್ಯಾಶ್‌ ಟಿ20 ಲೀಗ್‌ (Big Bash League) ಹಾಗೂ ಲಂಕಾ ಪ್ರೀಮಿಯರ್‌ ಲೀಗ್‌ (Lanka Premier League) ನಡೆಯುತ್ತಿದ್ದು, ಇದರಲ್ಲಿ ಮಿಂಚುತ್ತಿರುವ ಯುವ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲು ಫ್ರಾಂಚೈಸಿಗಳು ಎದುರು ನೋಡುತ್ತಿರುವುದಾಗಿ ತಿಳಿದುಬಂದಿದೆ. ಈಗಾಗಲೇ ತಂಡಗಳು ಕೆಲ ಆಟಗಾರರನ್ನು ರಿಟೈನ್‌ ಮಾಡಿಕೊಂಡಿದ್ದು, ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಬೇಕಿದೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ಫ್ರಾಂಚೈಸಿಯು ವಿರಾಟ್ ಕೊಹ್ಲಿ (Virat Kohli), ಗ್ಲೆನ್‌ ಮ್ಯಾಕ್ಸ್‌ವೆಲ್ (Glenn Maxwell) ಹಾಗೂ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಮೆಗಾ ಹರಾಜಿಗೂ ಮುನ್ನ ರೀಟೈನ್‌ ಮಾಡಿಕೊಂಡಿದೆ. ಇನ್ನು ಪಂಜಾಬ್ ಕಿಂಗ್ಸ್‌ (Punjab Kings) ಫ್ರಾಂಚೈಸಿಯು ಮಯಾಂಕ್ ಅಗರ್‌ವಾಲ್‌ (Mayank Agarwal) ಹಾಗೂ ಆರ್ಶದೀಪ್ ಸಿಂಗ್ ಅವರನ್ನು ರೀಟೈನ್ ಮಾಡಿಕೊಂಡಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ರವೀಂದ್ರ ಜಡೇಜಾ(Ravindra Jadeja), ಮಹೇಂದ್ರ ಸಿಂಗ್ ಧೋನಿ, ಋತುರಾಜ್ ಗಾಯಕ್ವಾಡ್ ಹಾಗೂ ಮೋಯಿನ್ ಅಲಿ (Moeen Ali) ಅವರನ್ನು ರೀಟೈನ್ ಮಾಡಿಕೊಂಡಿದೆ.

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಹೊಸದಾಗಿ ಲಖನೌ ಹಾಗೂ ಅಹಮದಾಬಾದ್ ತಂಡಗಳು ಸೇರ್ಪಡೆಯಾಗಿದ್ದು, ಒಟ್ಟು 10 ತಂಡಗಳು ಐಪಿಎಲ್ ಪ್ರಶಸ್ತಿಗಾಗಿ ಕಾದಾಡಲಿವೆ. ಹೀಗಾಗಿ ದೇಸಿ ಕ್ರಿಕೆಟ್‌ನಲ್ಲಿ ಮಿಂಚಿ ಐಪಿಎಲ್ ತಂಡ ಕೂಡಿಕೊಳ್ಳಲು ಹಲವು ಪ್ರತಿಭಾನ್ವಿತ ಆಟಗಾರರು ಎದುರು ನೋಡುತ್ತಿದ್ದಾರೆ. ವಿಜಯ್ ಹಜಾರೆ ಕ್ರಿಕೆಟ್‌ ಟೂರ್ನಿಯಲ್ಲಿ ಋತುರಾಜ್ ಗಾಯಕ್ವಾಡ್‌ ಹ್ಯಾಟ್ರಿಕ್ ಶತಕ ಸಿಡಿಸಿ ಅಬ್ಬರಿಸಿದರೆ, ವೆಂಕಟೇಶ್ ಐಪಿಎಲ್ ಎರಡು ಶತಕ ಸಹಿತ ಬೌಲಿಂಗ್‌ನಲ್ಲೂ ಮಿಂಚಿದ್ದಾರೆ. ಗಾಯಕ್ವಾಡ್ ಅವರನ್ನು ಸಿಎಸ್‌ಕೆ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿದ್ದರೇ, ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತ ನೈಟ್‌ ರೈಡರ್ಸ್‌ ಫ್ರಾಂಚೈಸಿ ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿದೆ. 

ಇನ್ನುಳಿದಂತೆ ಆರ್‌ಸಿಬಿ ತಂಡದಿಂದ ಹೊರಬಿದ್ದಿರುವ ಯುಜುವೇಂದ್ರ ಚಹಲ್‌ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದು, ಕೇವಲ 4 ಪಂದ್ಯಗಳಿಂದ 11 ವಿಕೆಟ್ ಕಬಳಿಸಿ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಇನ್ನು ಅಂಕಿತ್ ಚೌಧರಿ, ವಾಷಿಂಗ್ಟನ್‌ ಸುಂದರ್ ಹಾಗೂ ಪ್ರದೀಪ್ ಸಂಗ್ವಾನ್ ಕೂಡಾ ಗಮನಾರ್ಹ ಪ್ರದರ್ಶನ ತೋರಿದ್ದಾರೆ. 

India Tour Of South Africa: ಪ್ರವಾಸಕ್ಕೆ ವೆಂಕಟೇಶ್ ಅಯ್ಯರ್, ಋತುರಾಜ್ ಗಾಯಕ್ವಾಡ್ ಆಯ್ಕೆ ಖಚಿತ..?

ಇನ್ನು ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಮೊಯಿಸ್ ಹೆನ್ರಿಕೇಸ್ ಹಾಗೂ ಜೋಶುವಾ ಫಿಲಿಫ್ಪಿ ತಲಾ 3 ಪಂದ್ಯಗಳನ್ನಾಡಿ ಕ್ರಮವಾಗಿ 175 ಹಾಗೂ 160 ರನ್‌ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಕೇನ್ ರಿಚರ್ಡ್‌ಸನ್‌, ಆಂಡ್ರ್ಯೂ ಟೈ, ಟಾಮ್ ಕರ್ರನ್ ತಲಾ ಐದು ವಿಕೆಟ್ ಪಡೆದಿದ್ದಾರೆ. 

ಡೇವಿಡ್ ವಾರ್ನರ್‌ ಟಾಲಿವುಡ್‌ ಸ್ಟೈಲ್‌ ವಿಡಿಯೋ: ಕಾಲೆಳೆದ ಕೊಹ್ಲಿ!

ನವದೆಹಲಿ: ಆಸ್ಪ್ರೇಲಿಯಾ ಆಟಗಾರ ಡೇವಿಡ್‌ ವಾರ್ನರ್‌ (David Warner) ಇನ್‌ಸ್ಟಾಗ್ರಾಂನಲ್ಲಿ (Instagram) ಹೊಸ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ತೆಲುಗು ನಟ ಅಲ್ಲು ಅರ್ಜುನ್‌ (Allu Arjun) ಅಭಿನಯದ ಸಿನಿಮಾವೊಂದರ ದೃಶ್ಯವನ್ನು ಎಡಿಟ್‌ ಮಾಡಿರುವ ವಿಡಿಯೋ ಇದಾಗಿದ್ದು, ನೃತ್ಯ ಮಾಡುತ್ತಿರುವ ಅರ್ಜುನ್‌ ಮುಖದ ಬದಲು ವಾರ್ನರ್‌ ತಮ್ಮ ಮುಖವನ್ನು ಜೋಡಿಸಿದ್ದಾರೆ. 

ಈ ವಿಡಿಯೋಗೆ ಏನಾದರೂ ಅಡಿಬರಹ ಕೊಡಿ ಎಂದು ತಮ್ಮ ಅಭಿಮಾನಿಗಳನ್ನು ಕೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್‌ ಕೊಹ್ಲಿ, ‘ಮೇಟ್‌, ಆರ್‌ ಯು ಓಕೆ (ಗೆಳೆಯ, ಆರಾಮಾಗಿದ್ದಾರೆ ತಾನೇ)’ ಎಂದಿದ್ದಾರೆ. ವಾರ್ನರ್‌ರ ಈ ವಿಡಿಯೋ ವೈರಲ್‌ ಆಗಿದ್ದು, ಕೊಹ್ಲಿಯ ಪ್ರತಿಕ್ರಿಯೆಗೂ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

RCB Biggest Mistakes: ಈ ಮೂವರು ಆಟಗಾರರನ್ನು ಕೈಬಿಟ್ಟು ಯಡವಟ್ಟು ಮಾಡಿಕೊಂಡ ಆರ್‌ಸಿಬಿ..!

ಇನ್ನು ಕೆಲವು ದಿನಗಳ ಹಿಂದಷ್ಟೇ ನಮ್ಮೆಲ್ಲರನ್ನು ಅಗಲಿದ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ (Puneeth Rajkumar) ಅವರ ಫೋಟೋ ಹಾಕಿ #Respect ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡು ವಾರ್ನರ್ ತಮ್ಮ ಗೌರವ ಸೂಚಿಸಿದ್ದರು.

 

 

Follow Us:
Download App:
  • android
  • ios