Asianet Suvarna News Asianet Suvarna News

ಕೊನೆಯುಸಿರೆಳೆದ ಭಾರತ ತಂಡದ ಮಾಜಿ ಕ್ರಿಕೆಟಿಗ ಸದಾಶಿವ ಪಾಟೀಲ್

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಸ್. ಪಾಟೀಲ್(86) ಮಹಾರಾಷ್ಟ್ರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Former Team India cricketer Sadashiv Patil passes away aged 86 kvn
Author
Mumbai, First Published Sep 16, 2020, 10:17 AM IST
  • Facebook
  • Twitter
  • Whatsapp

ಮುಂಬೈ(ಸೆ.16): ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸದಾಶಿವ ರಾವೋಜಿ ಪಾಟೀಲ್‌ ಮಂಗಳವಾರ ನಿಧನರಾಗಿದ್ದಾರೆ. ಮೃತರಿಗೆ 86 ವರ್ಷ ವಯಸ್ಸಾಗಿತ್ತು. 

ಮಹಾರಾಷ್ಟ್ರದ ಕೊಲ್ಲಾಪುರ ಮೂಲದವರಾದ ಸದಾಶಿವ ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮಧ್ಯಮ ವೇಗಿಯಾಗಿದ್ದ ಪಾಟೀಲ್‌ ಅವರು ಭಾರತ ತಂಡದ ಪರ 1955ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಮುಂಬೈನಲ್ಲಿ ಆಲ್ರೌಂಡರ್‌ ಆಗಿ ಒಂದು ಟೆಸ್ಟ್‌ ಪಂದ್ಯವಾಡಿದ್ದರು. ಆ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದ ಅವರು 14 ರನ್ ಬಾರಿಸಿ ಅಜೇಯರಾಗುಳಿದಿದ್ದರು. ಇದರ ಜತೆಗೆ 51 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಜಯಗಳಿಸಿತ್ತು. 

ಉಳಿದಂತೆ 1952ರಿಂದ 1964ರ ಅವಧಿಯಲ್ಲಿ 36 ಪ್ರಥಮ ದರ್ಜೆಯ ಪಂದ್ಯಗಳನ್ನಾಡಿ 27ರ ಸರಾಸರಿಯಲ್ಲಿ 866 ರನ್‌, 83 ವಿಕೆಟ್‌ ಪಡೆದಿದ್ದರು. ಇನ್ನು ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

IPL 2020: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮತ್ತೆ ಆಘಾತ..!

ಸದಾಶಿವ ರಾವೋಜಿ ಪಾಟೀಲ್ ನಿಧನಕ್ಕೆ ಬಿಸಿಸಿಐ ಕಂಬನಿ ಮಿಡಿದಿದೆ. 

Follow Us:
Download App:
  • android
  • ios