* ಆಂಧ್ರ ಸಿಎಂ ಜಗನ್‌ ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ* ಆಂಧ್ರಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಕ್ರೀಡಾ ವಿಶ್ವವಿದ್ಯಾಲಯದ ಕುರಿತಂತೆ ಚರ್ಚೆ* ಕ್ರೀಡಾ ಪರಿಕರನ್ನು ಉತ್ಫಾದನೆ ಮಾಡುವ ಪ್ಯಾಕ್ಟರಿಗಳನ್ನು ಸ್ಥಾಪಿಸುವಂತೆ ಸಲಹೆ

ಅಮರಾವತಿ(ಜು.06): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಸೋಮವಾರ(ಜು.05) ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರನ್ನು ಭೇಟಿ ಮಾಡಿದರು. ಆಂಧ್ರಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಕ್ರೀಡಾ ವಿಶ್ವವಿದ್ಯಾಲಯ ಹಾಗೂ ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿ ಬಗ್ಗೆ ಜಗನ್‌ ಹಾಗೂ ಕುಂಬ್ಳೆ ಚರ್ಚೆ ನಡೆಸಿದರು ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ಆಂಧ್ರಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಅನಿಲ್‌ ಕುಂಬ್ಳೆ, ಸಿಎಂ ಜಗನ್‌ ಮೋಹನ್‌ ರೆಡ್ಡಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆಂಧ್ರದಲ್ಲಿ ಕ್ರೀಡಾ ಪರಿಕರನ್ನು ಉತ್ಫಾದನೆ ಮಾಡುವ ಪ್ಯಾಕ್ಟರಿಗಳನ್ನು ಸ್ಥಾಪಿಸುವಂತೆ ಮಾಜಿ ಕ್ರಿಕೆಟಿಗ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ. ಎಲ್ಲಾ ರೀತಿಯ ಕ್ರೀಡಾ ಉತ್ಫನ್ನಗಳನ್ನು ತಯಾರಿಸುವ ಪ್ಯಾಕ್ಟರಿಗಳು ಹೆಚ್ಚಿನದಾಗಿ ಮೀರತ್ ಹಾಗೂ ಜಲಂದರ್ ನಗರದಲ್ಲಿವೆ. ಒಂದು ವೇಳೆ ಇಲ್ಲಿ ಅಂತಹ ಕಾರ್ಖಾನೆಗಳನ್ನು ಸ್ಥಾಪಿಸಿದರೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಆಂಧ್ರ ಸಿಎಂಗೆ ಕುಂಬ್ಳೆ ಕಿವಿಮಾತು ಹೇಳಿದ್ದಾರೆ.

ಶಿಖರ್ ಧವನ್ ಪಡೆಯನ್ನು 'ಭಾರತ ಬಿ' ಟೀಂ ಎಂದ ರಣತುಂಗ; ನೆಟ್ಟಿಗರು ಗರಂ

Scroll to load tweet…

ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಭಾರತ ಪರ 132 ಟೆಸ್ಟ್ ಹಾಗೂ 271 ಪಂದ್ಯಗಳನ್ನಾಡಿದ್ದು ಕ್ರಮವಾಗಿ 619 ಹಾಗೂ 337 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಭಾರತ ಪರ ಈ ಎರಡೂ ಮಾದರಿಯಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ.