ಟೀಮ್‌ ಇಂಡಿಯಾ ಮಾಜಿ ಆಲ್ರೌಂಡರ್‌ ಯುವರಾಜ್‌ ಸಿಂಗ್‌ ಪಾಲಿಗೆ ವರ ಮಹಾಲಕ್ಮೀ ಹಬ್ಬದ ದಿನವೇ ಲಕ್ಷ್ಮೀಯ ಆಗಮನವಾಗಿದೆ. ಅವರ ಪತ್ನಿ ಹಜೆಲ್‌ ಕೀಚ್‌ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನವದೆಹಲಿ (ಆ.25): ಟೀಮ್‌ ಇಂಡಿಯಾ ಮಾಜಿ ಆಲ್ರೌಂಡರ್‌ ಹಾಗೂ 2011ರ ಏಕದಿನ ವಿಶ್ವಕಪ್‌ ಗೆಲುವಿನ ಹೀರೋ ಯುವರಾಜ್‌ ಸಿಂಗ್‌ 2ನೆ ಬಾರಿ ತಂದೆಯಾಗಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದೇ ಅವರ ಪತ್ನಿ ಹಜೆಲ್‌ ಕೀಚ್‌ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಯುವರಾಜ್‌ ಸಿಂಗ್‌ ಖುಷಿ ಸುದ್ದಿಯನ್ನು ತಮ್ಮ ಅಭಿಮಾನಿಗಳು ಹಾಗೂ ಸೋಶಿಯಲ್‌ ಮೀಡಿಯಾ ಫಾಲೋವರ್ಸ್‌ಗಳಿಗೆ ಇನ್ಸ್‌ಟಾಗ್ರಾಮ್‌ ಮೂಲಕ ತಿಳಿಸಿದ್ದಾರೆ. ಹೆಚ್ಚಿನವರು ದಂಪತಿಗಳಿಗೆ ಶುಭ ಕೋರಿದ್ದು, ನಿಮ್ಮ ಮುಂದಿನ ದಿನಗಳು ಮತ್ತಷ್ಟು ಖುಷಿ ಖುಷಿಯಾಗಿರಲಿ ಎಂದು ಹಾರೈಸಿದ್ದಾರೆ."ನಮ್ಮ ಪುಟ್ಟ ರಾಜಕುಮಾರಿ ಔರಾ ಅವರನ್ನು ಸ್ವಾಗತಿಸಿ ನಮ್ಮ ಕುಟುಂಬವನ್ನು ಪೂರ್ಣಗೊಳಿಸುವುದರೊಂದಿಗೆ ನಮ್ಮ ನಿದ್ದೆಯಿಲ್ಲದ ರಾತ್ರಿಗಳು ಹೆಚ್ಚು ಸಂತೋಷದಾಯಕವಾಗಿವೆ" ಎಂದು ಯುವರಾಜ್ ಸಿಂಗ್ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ಅದರೊಂದಿಗೆ ತಮ್ಮ ತೋಳುಗಳಲ್ಲಿ ಹೆಣ್ಣು ಮಗುವನ್ನು ಎತ್ತಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇನ್ನೊಂದೆಡೆ ಹಜೆಲ್‌ ಕೀಚ್‌ ಪುತ್ರ ಒರಿಯಾನ್‌ ಕೀಚ್‌ ಸಿಂಗ್‌ ಅವರಿಗೆ ಹಾಲು ಕುಡಿಸುತ್ತಿರುವುದನ್ನು ಕಾಣಬಹುದಾಗಿದೆ.

ಕೆಲವೇ ಹೊತ್ತಿನ ಮುನ್ನ ಈ ಪೋಸ್ಟ್‌ಅನ್ನು ಯುವರಾಜ್‌ ಸಿಂಗ್‌ ಶೇರ್‌ ಮಾಡಿಕೊಂಡಿದ್ದಾರೆ. ಆದರೆ, ಇನ್ಸ್‌ಟಾಗ್ರಾಮ್‌ನಲ್ಲಿ ಇದನ್ನು ಶೇರ್‌ ಮಾಡಿಕೊಂಡಡ ಕೆಲವೇ ಹೊತ್ತಿನಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಲೈಕ್‌ ಮಾಡಿದ್ದಾರೆ. ಅದರೊಂದಿಗೆ ಸಾವಿರಾರು ಕಾಮೆಂಟ್ಸ್‌ಗಳು ಬಂದಿದೆ.

ಅಭಿನಂದನೆಗಳು ಯುವಿ, ನಿಮಗೆ ದೇವರ ಹಾರೈಕೆಯಿರಲಿ ಎಂದು ಹೆಚ್ಚಿನವರು ಬರೆದಿದ್ದರೆ, ಇನ್ನೊಬ್ಬರು ದೇವರು ನಿಮ್ಮ ಕುಟುಂಬವನ್ನು ಹರಸಲಿ ಎಂದಿದ್ದಾರೆ. ಕೆಲವರು ಇದು ಬಹಳ ಅಚ್ಚರಿಯ ವಿಷಯ ಎಂದೂ ಕಾಮೆಂಟ್‌ ಮಾಡಿದ್ದಾರೆ. ಹಾರ್ಟ್‌ ಇಮೋಜಿಗಳೊಂದಿಗೆ ಹೆಚ್ಚಿನವರು ಕಾಮೆಂಟ್ಸ್‌ ಮಾಡಿದ್ದಾರೆ.

2016ರಲ್ಲಿ ಯುವರಾಜ್‌ ಸಿಂಗ್‌ ಹಾಗೂ ಹಜೆಲ್‌ ಕೀಚ್‌ ವಿವಾಹವಾಗಿದ್ದರು. ಮದುವೆಗೂ ಮುನ್ನ ಯುವರಾಜ್‌ ಸಿಂಗ್‌ ಅವರ ಹೆಸರು ಹಲವು ನಟಿಯರ ಜೊತೆ ತಳುಕುಹಾಕಿಕೊಂಡರೂ, ಬಾಲಿವುಡ್‌ನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಬ್ರಿಟನ್‌ ಮೂಲದ ಹಜೆಲ್‌ ಕೀಚ್‌ ಜೊತೆ ಯುವಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ತಮ್ಮ ಮಗುವಿಗೆ ಔರಾ ಎಂದು ಹೆಸರನ್ನು ಯುವಿ ಇಟ್ಟಿದ್ದಾರೆ. ಟೆನಿಸ್‌ ತಾರೆ ಸಾನಿಯಾ ಮಿರ್ಜಾ, ನಟಿ ರಿಚಾ ಚಡ್ಡಾ, ಕುಬ್ರಾ ಸೈತ್‌ ಸೇರಿದಂತೆ ಹಲವರು ದಂಪತಿಗೆ ಶುಭ ಹಾರೈಸಿದ್ದಾರೆ. ಕಳೆದ ವರ್ಷದ ಅಪ್ಪಂದಿರ ದಿನ ಹಜೆಲ್‌ ಕೀಚ್‌ ಪುತ್ರ ಒರಿಯಾನ್‌ ಕೀಚ್‌ ಸಿಂಗ್‌ಗೆ ಜನ್ಮ ನೀಡಿದ್ದರು.

ಪತ್ನಿ ಹೇಜಲ್‌ ಕೀಚ್‌ಗೆ ಮುದ್ದಾದ ಬರ್ತ್‌ ಡೇ ಗಿಫ್ಟ್‌ ನೀಡಿದ ಯುವರಾಜ್ ಸಿಂಗ್..!

ಅಪ್ಪನಾಗುವ ಬಗ್ಗೆ ನಿರ್ಧಾರ ಮಾಡಿದ ದಿನದ ಬಗ್ಗೆ ಮಾತನಾಡಿದ್ದ ಯುವರಾಜ್ ಸಿಂಗ್ ಸಂದರ್ಶನದಲ್ಲಿ ಹೇಜಲ್ ತನ್ನನ್ನು ಪಾತ್ರಕ್ಕಾಗಿ ಸಂಪೂರ್ಣವಾಗಿ ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದ್ದರು. ನಾನು ತಂದೆ ಎಂಬ ವಾಸ್ತವವನ್ನು ಸಂಪೂರ್ಣವಾಗಿ ಗ್ರಹಿಸಲು ಸ್ವಲ್ಪ ಸಮಯ ಹಿಡಿಯಿತು ಎಂದು ಅವರು ಹೇಳಿದ್ದರು. “ನಾನು ಓರಿಯನ್ ಅನ್ನು ನೋಡಿದಾಗಲೆಲ್ಲಾ, ನನ್ನ ಮತ್ತು ನನ್ನ ಹೆಂಡತಿಯ ಭಾಗವಾಗಿರುವ ಯಾರಾದರೂ ಇದ್ದಾರೆ ಎಂಬ ಅದ್ಭುತ ಭಾವನೆ ಮೂಡುತ್ತದೆ. ನಾನು ಯೋಗ್ಯವಾಗಿ ತಂದೆಯಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ. ಹೇಜಲ್ ನನಗೆ ಚೆನ್ನಾಗಿ ತರಬೇತಿ ನೀಡಿದ್ದಾರೆ. ನಾನು ನನ್ನ ಹೆಂಡತಿಯಷ್ಟು ಪರಿಪೂರ್ಣ ಎಂದು ಹೇಳುವುದಿಲ್ಲ, ಆದರೆ ನಾನು ಅವನಿಗೆ ಬಾಟಲಿಯಿಂದ ಹಾಲು ಕುಡಿಸಬಲ್ಲೆ, ಆತನ ಚಡ್ಡಿಯನ್ನು ಬದಲಾಯಿಸಬಲ್ಲೆ ಹಾಗೂ ಅವನಗೆ ಬಟ್ಟೆಗಳನ್ನು ಹಾಕಬಲ್ಲೆ' ಎಂದಿದ್ದರು

ಮಗನ ಫಸ್ಟ್‌ ಫೋಟೋ ಜೊತೆ ಹೆಸರನ್ನೂ ರೀವಿಲ್‌ ಮಾಡಿದ ಕ್ರಿಕೆಟಿಗ Yuvraj Singh