* ವಿನೂತನ ವಿಷಯದ ಮೂಲಕ ಸುದ್ದಿಯಾದ ಕಮ್ರಾನ್‌ ಅಕ್ಮಲ್* ಬಕ್ರೀದ್‌ ಹಬ್ಬಕ್ಕಾಗಿ ತಂದಿದ್ದ ಕುರಿ ಕಳ್ಳತನ* 90,000 ರು. ನೀಡಿ ಖರೀದಿಸಿದ್ದ ಕುರಿ ಕಳ್ಳತನ

ಲಾಹೋರ್(ಜು.10)‌: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಹೊಸ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಬಕ್ರೀದ್‌ ಹಬ್ಬಕ್ಕಾಗಿ ಖರೀದಿಸಿ ತಂದಿದ್ದ ಕುರಿಗಳನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆಂದು ಸುದ್ದಿಯಾಗಿದೆ. ಮನೆಯ ಹೊರಗಡೆ ಕಟ್ಟಲಾಗಿದ್ದ ಕುರಿಗಳನ್ನು ಕದ್ದೊಯ್ದಿದ್ದಾರೆಂದು ಕಮ್ರಾನ್ ಅಕ್ಮಲ್ ಅವರ ತಂದೆ ದೂರಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್‌ ಅಕ್ಮಲ್‌ ಅವರ ಮನೆಯಲ್ಲಿ ಬಕ್ರೀದ್‌ಗೆ ಎಂದು ತಂದಿದ್ದ ಕುರಿ ಕಳ್ಳತನವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಬಕ್ರೀದ್‌ಗೆಂದು ಒಟ್ಟು 6 ಕುರಿಗಳನ್ನು ತಂದಿದ್ದೆವು. ಆ ಪೈಕಿ ಬಹಳ ದಷ್ಟಪುಷ್ಟವಾಗಿದ್ದ, 90,000 ರು. ನೀಡಿ ಖರೀದಿಸಿದ್ದ ಕುರಿಯನ್ನು ಕದ್ದಿದ್ದಾರೆ’ ಎಂದು ಕಮ್ರಾನ್‌ರ ತಂದೆ ಮಾಧ್ಯಮಗಳು ತಿಳಿಸಿದ್ದಾರೆ. ಕುರಿ ಕದ್ದವರನ್ನು ಪತ್ತೆ ಮಾಡುವಂತೆ ಕಮ್ರಾನ್‌ ಕುಟುಂಬ ಪೊಲೀಸರಿಗೆ ದೂರು ನೀಡಿದೆ ಎನ್ನಲಾಗಿದೆ. ಆರು ಉತ್ತಮ ಗುಣಮಟ್ಟದ ಕುರಿಗಳನ್ನು ತಂದು ಮನೆಯಿಂದ ಹೊರಗೆ ಕಟ್ಟಿದ್ದೆವು. ಮನೆಯ ಸೇವಕರು ನಿದ್ರೆಗೆ ಜಾರಿದ ಬಳಿಕ ಮುಂಜಾನೆ 3 ಗಂಟೆಯ ಸುಮಾರಿಗೆ ತಮ್ಮ ಕುರಿಗಳ ಕಳ್ಳತನವಾಗಿದೆ. ಕಳ್ಳರನ್ನು ಆದಷ್ಟು ಬೇಗ ಪತ್ತೆಹಚ್ಚುವ ವಿಶ್ವಾಸವನ್ನು ಮನೆಯ ಭದ್ರತಾ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆಂದು ಕಮ್ರಾನ್ ಅಕ್ಮಲ್ ತಂದೆ ತಿಳಿಸಿದ್ದಾರೆ.

ಕಮ್ರಾನ್ ಅಕ್ಮಲ್‌, ಪಾಕಿಸ್ತಾನ ಕ್ರಿಕೆಟ್ ತಂಡದ ಪರ 53 ಟೆಸ್ಟ್ ಪಂದ್ಯಗಳನ್ನಾಡಿ 6 ಶತಕ ಹಾಗೂ 12 ಅರ್ಧಶತಕ ಸಹಿತ 2,648 ರನ್‌ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಪಾಕಿಸ್ತಾನ ಕ್ರಿಕೆಟ್ ತಂಡದ ಪರ 157 ಏಕದಿನ ಪಂದ್ಯಗಳನ್ನಾಡಿ 3,236 ರನ್ ಬಾರಿಸಿದ್ದಾರೆ. ಅಕ್ಮಲ್ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 5 ಶತಕ ಹಾಗೂ 10 ಅರ್ಧಶತಕ ಚಚ್ಚಿದ್ದಾರೆ. ಇನ್ನು 58 ಟಿ20 ಪಂದ್ಯಗಳಿಂದ 987 ರನ್‌ ಬಾರಿಸಿದ್ದಾರೆ.. 

5ನೇ ಟೆಸ್ಟ್‌ ವೇಳೆ ನಿಂದನೆ:ವ್ಯಕ್ತಿ ಬಂಧನ

ಬರ್ಮಿಂಗ್‌ಹ್ಯಾಮ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮರುನಿಗದಿತ 5ನೇ ಟೆಸ್ಟ್‌ ವೇಳೆ ಭಾರತೀಯ ಅಭಿಮಾನಿಗಳತ್ತ ಜನಾಂಗೀಯ ನಿಂದನೆ ನಡೆಸಿದ ಆರೋಪದ ಮೇಲೆ ಬರ್ಮಿಂಗ್‌ಹ್ಯಾಮ್‌ ಪೊಲೀಸರು 32 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ನಿಂದನೆಗೆ ಒಳಗಾದ ಕೆಲ ಭಾರತೀಯ ಅಭಿಮಾನಿಗಳು ಟ್ವೀಟರ್‌ನಲ್ಲಿ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದರು. 

Ind vs Eng ಇಂಗ್ಲೆಂಡ್‌ಗೆ ಹೀನಾಯ ಸೋಲು, ಟಿ20 ಸರಣಿ ಟೀಂ ಇಂಡಿಯಾ ಪಾಲು..!

ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ತನಿಖೆ ನಡೆಸುವುದಾಗಿ ಹೇಳಿತ್ತು. ಇದೇ ವೇಳೆ ಜನಾಂಗೀಯ ನಿಂದನೆ ಪ್ರಕರಣಗಳು ನಡೆದರೆ ಅವುಗಳನ್ನು ವರದಿ ಮಾಡಲು ಶನಿವಾರದ ಟಿ20 ಪಂದ್ಯಕ್ಕೂ ವಾರ್ವಿಕ್‌ಶೈರ್‌ ಕೌಂಟಿ ಕ್ಲಬ್‌ ಮಾರುವೇಷದಲ್ಲಿ ತನ್ನ ಕೆಲ ಅಧಿಕಾರಿಗಳನ್ನು ಮೈದಾನದಲ್ಲಿ ನಿಯೋಜಿಸಿತ್ತು.

2ನೇ ಟೆಸ್ಟ್‌: ಆಸೀಸ್‌ಗೆ ಶ್ರೀಲಂಕಾ ದಿಟ್ಟ ಉತ್ತರ

ಗಾಲೆ: 2ನೇ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾದ 364 ರನ್‌ಗಳ ಮೊದಲ ಇನ್ನಿಂಗ್‌್ಸ ಮೊತ್ತವನ್ನು ಬೆನ್ನತ್ತಿರುವ ಆತಿಥೇಯ ಶ್ರೀಲಂಕಾ ಉತ್ತಮ ಹೋರಾಟ ಪ್ರದರ್ಶಿಸುತ್ತಿದ್ದು 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 184 ರನ್‌ ಗಳಿಸಿದೆ. ದಿಮುತ್‌ ಕರುಣರತ್ನೆ(86) ಮತ್ತು ಕುಸಾಲ್‌ ಮೆಂಡಿಸ್‌(ಔಟಾಗದೆ 84) 2ನೇ ವಿಕೆಟ್‌ಗೆ 152 ರನ್‌ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಇನ್ನೂ 180 ರನ್‌ ಹಿನ್ನಡೆಯಲ್ಲಿರುವ ಲಂಕಾ ಇನ್ನಿಂಗ್‌್ಸ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ. ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 298 ರನ್‌ ಗಳಿಸಿದ್ದ ಆಸೀಸ್‌, ಶನಿವಾರ ಆ ಮೊತ್ತಕ್ಕೆ 66 ರನ್‌ ಸೇರಿಸಿತು. ಸ್ಟೀವ್‌ ಸ್ಮಿತ್‌ ಔಟಾಗದೆ 145 ರನ್‌ ಗಳಿಸಿದರು.