ಬೆಂಗಳೂರು(ಜ.19): ಭಾರತದ ಮಾಜಿ ಕ್ರಿಕೆಟಿಗ ಬಿ.ಎಸ್‌. ಚಂದ್ರಶೇಖರ್‌ ಲಘು ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 75 ವರ್ಷದ ಚಂದ್ರಶೇಖರ್‌ ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪತ್ನಿ ಸಂಧ್ಯಾ ತಿಳಿಸಿದ್ದಾರೆ. 

‘ಶುಕ್ರವಾರ ಸಂಜೆ ಚಂದ್ರಶೇಖರ್‌ ಆಯಾಸಗೊಂಡಿದ್ದರು. ಅವರ ಮಾತು ಸ್ಪಷ್ಟವಾಗಿರಲಿಲ್ಲ. ತಕ್ಷಣ ಆಸ್ಪತ್ರೆಗೆ ದಾಖಲಿಸಿದೆವು. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು ಬುಧವಾರ ಇಲ್ಲವೇ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಸಂಧ್ಯಾ ಅವರು ಮಾಹಿತಿ ನೀಡಿದ್ದಾರೆ. ವಿಶ್ವದ ಶ್ರೇಷ್ಠ ಸ್ಪಿನ್ನರ್‌ಗಳ ಪೈಕಿ ಒಬ್ಬರೆನಿಸಿಕೊಂಡಿರುವ ಚಂದ್ರಶೇಖರ್‌ ಭಾರತ ಪರ 58 ಟೆಸ್ಟ್‌ಗಳಲ್ಲಿ 242 ವಿಕೆಟ್‌ ಪಡೆದಿದ್ದಾರೆ.

ಮಾಜಿ ಹಾಕಿ ಆಟ​ಗಾರ ಕು​ಲ್ದೀ​ಪ್‌ ನಿಧನ

ಸೋಮವಾರಪೇಟೆ: ರಾಷ್ಟ್ರಮಟ್ಟದ ಹಾಕಿ ಆಟಗಾರ, ರಾಜ್ಯ ಕಿರಿಯರ ತಂಡದ ನಾಯಕರಾಗಿದ್ದ ಎಸ್‌.ಎಂ. ಕುಲ್ದೀಪ್‌ (40) ಸೋಮವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. 

ಆಸ್ಪ್ರೇಲಿಯನ್‌ ಓಪನ್‌: 72 ಟೆನಿಸಿಗರು ಕ್ವಾರಂಟೈನ್‌!

ಕೊಡಗು ಜಿಲ್ಲೆ ಸೋಮವಾರಪೇಟೆ ಸಮೀಪದ ಶಾಂತಳ್ಳಿ ಗ್ರಾಮ ನಿವಾಸಿ, ವಿಧಾನಪರಿಷತ್‌ ಮಾಜಿ ಸದಸ್ಯ ಎಸ್‌.ಜಿ.ಮೇದಪ್ಪ ಅವರ ಪುತ್ರರಾದ ಅವರು 1995-96ರಲ್ಲಿ ರಾಜ್ಯ ಕಿರಿಯರ ಹಾಕಿ ತಂಡದ ನಾಯಕರಾಗಿದ್ದರು. ನಂತರ ಏರ್‌ ಇಂಡಿಯಾ ತಂಡದಲ್ಲಿದ್ದ ಕುಲ್ದೀಪ್‌ ರಾಷ್ಟ್ರೀಯ ಮಟ್ಟದ ಹಲವಾರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.