ಟೋಕಿಯೋ ಒಲಿಂಪಿಕ್ಸ್‌ ಹಾಕಿ ಗೆಲುವು, ಎಲ್ಲಾ ವಿಶ್ವಕಪ್‌ ಗೆಲುವಿಗಿಂತ ದೊಡ್ಡದು: ಗಂಭೀರ್..!

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಬೀಗಿದ ಭಾರತೀಯ ಹಾಕಿ ತಂಡ

* ಭಾರತದ ಅತಿದೊಡ್ಡ ಗೆಲುವಿದು ಎಂದು ಬಣ್ಣಿಸಿದ ಗೌತಮ್‌ ಗಂಭೀರ್

* ಎಲ್ಲಾ ಕ್ರಿಕೆಟ್ ವಿಶ್ವಕಪ್‌ ಗೆಲುವಿಗಿಂತ ಇದು ದೊಡ್ಡ ಗೆಲುವೆಂದ ಗೌತಿ

Former Cricketer Gautam Gambhir Says Tokyo Olympics Hockey Bronze Bigger than Cricket World Cup Wins kvn

ನವದೆಹಲಿ(ಆ.05): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ಬಲಿಷ್ಠ ಜರ್ಮನಿ ತಂಡವನ್ನು 5-4 ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಇದರೊಂದಿಗೆ ಭಾರತ ಪುರುಷರ ಹಾಕಿ ತಂಡವು ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಸಾಧನೆ ಮಾಡಿದೆ.

ತೀವ್ರ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕಡೆ ಕ್ಷಣದ ತನಕ ಕೆಚ್ಚೆದೆಯ ಪ್ರದರ್ಶನ ನೀಡಿದ ಮನ್‌ಪ್ರೀತ್ ಸಿಂಗ್ ಪಡೆ 4 ದಶಕಗಳ ಪದಕದ ಬರವನ್ನು ನೀಗಿಸಿದೆ. ಈ ಮೂಲಕ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್‌ ಗಂಭೀರ್ ಹಾಕಿ ತಂಡದ ಗೆಲುವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಒಲಿಂಪಿಕ್ಸ್‌ ಪದಕ ಗೆದ್ದ ಪಂಜಾಬ್ ಹಾಕಿ ಆಟಗಾರರಿಗೆ 1 ಕೋಟಿ ರುಪಾಯಿ ನಗದು ಬಹುಮಾನ ಘೋಷಣೆ..!

1983, 2007 ಅಥವಾ 2011ರ ಗೆಲುವನ್ನು ಮರೆತುಬಿಡಿ. ಹಾಕಿ ತಂಡದ ಈ ಗೆಲುವು ಎಲ್ಲಾ ವಿಶ್ವಕಪ್ ಗೆಲುವಿಗಿಂತ ದೊಡ್ಡದು ಎಂದು ಟ್ವೀಟ್‌ ಮೂಲಕ ಗೌತಮ್‌ ಗಂಭೀರ್ ಹರ್ಷ ವ್ಯಕ್ತಪಡಿಸಿದ್ದಾರೆ.

2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಅತ್ಯಮೋಘ ಪ್ರದರ್ಶನ ತೋರುವ ಮೂಲಕ ತಂಡ ಚಾಂಪಿಯನ್‌ ಆಗುವಲ್ಲಿ ಗೌತಮ್‌ ಗಂಭೀರ್ ಮಹತ್ವದ ಪಾತ್ರ ವಹಿಸಿದ್ದರು. ಈ ಎರಡೂ ಫೈನಲ್‌ ಪಂದ್ಯಗಳಲ್ಲೂ ಗಂಭೀರ್ ಟೀಂ ಇಂಡಿಯಾ ಪರ ವೈಯುಕ್ತಿಕ ಗರಿಷ್ಠ ಸ್ಕೋರರ್ ಎನಿಸಿದ್ದರು.

ಗೌತಮ್‌ ಗಂಭೀರ್ ಮಾತ್ರವಲ್ಲದೇ ಹಲವು ಕ್ರೀಡಾತಾರೆಯರು ಹಾಗೂ ರಾಜಕಾರಣಿಗಳು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಗತವೈಭವ ಮರುಕಳಿಸುವಂತೆ ಮಾಡಿದ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Latest Videos
Follow Us:
Download App:
  • android
  • ios