* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡ* ಪದಕ ಗೆದ್ದ ಪಂಜಾಬ್ ಆಟಗಾರರಿಗೆ ಬಂಪರ್‌ ಬಹುಮಾನ ಘೋಷಣೆ* ತಲಾ ಒಂದು ಕೋಟಿ ರುಪಾಯಿ ನಗದು ಬಹುಮಾನ ಘೋಷಿಸಿದ ಪಂಜಾಬ್ ಸರ್ಕಾರ

ಚಂಢೀಗಡ(ಆ.05): ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ಜರ್ಮನಿ ತಂಡವನ್ನು 5-4 ಗೋಲುಗಳ ಅಂತರದಲ್ಲಿ ರೋಚಕವಾಗಿ ಮಣಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡವು ಪದಕ ಗೆದ್ದ ಸಾಧನೆ ಮಾಡಿದೆ. ಇದರ ಬೆನ್ನಲ್ಲೇ ಪಂಜಾಬ್ ಸರ್ಕಾರವು ತನ್ನ ರಾಜ್ಯದ ಪದಕ ವಿಜೇತ ಹಾಕಿ ಆಟಗಾರರಿಗೆ ತಲಾ ಒಂದು ಕೋಟಿ ರುಪಾಯಿ ನಗದು ಬಹುಮಾನ ಘೋಷಿಸಿದೆ.

ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಭಾರತೀಯ ಹಾಕಿ ತಂಡವು ಕೊನೆಯ ಕ್ಷಣದವರೆಗೂ ಛಲಬಿಡದೇ ಹೋರಾಡಿದ ರೀತಿಯೇ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಪಂಜಾಬ್‌ ಕ್ರೀಡಾ ಸಚಿನ್‌ ರಾಣಾ ಗುರ್ಮಿಟ್‌ ಸೋದಿ ತನ್ನ ರಾಜ್ಯದ ಹಾಕಿ ಆಟಗಾರರಿಗೆ ತಲಾ ಒಂದು ಕೋಟಿ ರುಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ. 

Scroll to load tweet…
Scroll to load tweet…

ನಾಯಕ ಮನ್‌ಪ್ರೀತ್ ಸಿಂಗ್ ಸೇರಿದಂತೆ 8 ಆಟಗಾರರು ಪಂಜಾಬ್‌ ರಾಜ್ಯದವರಾಗಿದ್ದು, ಈ ಎಲ್ಲಾ 8 ಆಟಗಾರರು ಪಂಜಾಬ್‌ ರಾಜ್ಯ ಸರ್ಕಾರದಿಂದ ತಲಾ ಒಂದು ಕೋಟಿ ರುಪಾಯಿ ಬಹುಮಾನ ಪಡೆಯಲಿದ್ದಾರೆ. ಇನ್ನುಳಿದ ಏಳು ಪಂಜಾಬ್‌ ಹಾಕಿ ಆಟಗಾರರೆಂದರೆ ಅದು, ಹರ್ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಹಾರ್ದಿಕ್ ಸಿಂಗ್, ಸಂಶೀರ್ ಸಿಂಗ್, ದಿಲ್ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಹಾಗೂ ಮನ್ದೀಪ್ ಸಿಂಗ್.

ಭಾರತಕ್ಕಿಂದು ಐತಿಹಾಸಿಕ ದಿನ: ಹಾಕಿ ಗೆಲುವನ್ನು ಸುಂದರವಾಗಿ ಬಣ್ಣಿಸಿದ ಪ್ರಧಾನಿ ಮೋದಿ

ಭಾರತೀಯ ಹಾಕಿ ತಂಡವು 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಕಡೆಯ ಬಾರಿಗೆ ಚಿನ್ನದ ಪದಕವನ್ನು ಜಯಿಸಿತ್ತು. ಇದಾದ ಬಳಿಕ ಭಾರತ ಹಾಕಿ ತಂಡವು ಒಮ್ಮೆಯೂ ಒಲಿಂಪಿಕ್ಸ್‌ ಪದಕ ಗೆಲ್ಲಲು ಯಶಸ್ವಿಯಾಗಿರಲಿಲ್ಲ.