ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ, ಬ್ರಿಜೇಶ್‌ ಪಟೇಲ್‌ಗೆ ಐಪಿಎಲ್ ಹೊಣೆ?

ಬಿಸಿಸಿಐ ಅಧ್ಯಕ್ಷರಾಗಿ ಮಾಜಿ ನಾಯಕ, ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಕರ್ನಾಟಕ ಕ್ರೆಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಐಪಿಎಲ್ ಅಧ್ಯಕ್ಷರಾಗಲಿದ್ದಾರೆ. ಭಾನುವಾರ ತಡ ರಾತ್ರಿ ನಡೆದ ನಾಟಕೀಯ ಬೆಳವಣಿಗೆ ಮಾಹಿತಿ ಇಲ್ಲಿದೆ.

former cricket captain Sourav ganguly set to become BCCI president

ಮುಂಬೈ(ಅ.14): ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷೀಯ ಚುನಾವಣೆಗೆ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ತಡೆ ರಾತ್ರಿ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷೀಯ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದ, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ  ಬ್ರಿಜೇಶ್ ಪಟೇಲ್ ಹಿಂದೆ ಸರಿಯುವದರೊಂದಿಗೆ, ಗಂಗೂಲಿ ಬಿಸಿಸಿಐ ಅಧ್ಯ.ಕ್ಷರಾಗುವುಗು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: ಬಿಸಿ​ಸಿಐ ಚುನಾ​ವ​ಣೆಗೆ 8 ರಾಜ್ಯ ಸಂಸ್ಥೆಗಳು ಅನ​ರ್ಹ!

ಬಿಸಿಸಿಐ ಅಧ್ಯಕ್ಷ ಹುದ್ದೆ ರೇಸ್‌ನಿಂದ ಹಿಂದೆ ಸರಿದ ಬ್ರಿಜೇಶ್ ಪಟೇಲ್, ಅವರು ಐಪಿಎಲ್‌ನ ನೂತನ ಅಧ್ಯಕ್ಷತರಾಗಿ ಆಯ್ಕೆಯಾಗಲಿದ್ದಾರೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಒಮ್ಮತದ ಅಭ್ಯರ್ಥಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಸಹೋದರ ಅರುಣ್ ಧುಮಲ್ ಖಜಾಂಚಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಕ್ರಿಕೆಟಿಗರ ಸಂಸ್ಥೆ ಚುನಾವಣೆ ಶಾಂತಾ ಅವಿರೋಧ ಆಯ್ಕೆ?

ಎಲ್ಲಾ ಹುದ್ದೆಗಳಿಗೆ ಮಾನಪತ್ರ ಸಲ್ಲಿಸಲು ಸೋಮವಾರ ಕೊಮೆಯ ದಿನವಾಗಿದೆ. ಆದರೆ ಎಲ್ಲಾ ಹುದ್ದೆಗಳಿಗೆ ಅವಿರೋಧ ಆಯ್ಕೆ ಸಾಧ್ಯತೆ ನಿಚ್ಚಳವಾಗಿರುವ ಹಿನ್ನಲೆಯಲಲ್ಲಿ ಅ.23 ರಂದು ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಬಿಸಿ​ಸಿಐ ಚುನಾ​ವ​ಣೆಗೆ 8 ರಾಜ್ಯ ಸಂಸ್ಥೆಗಳು ಅನ​ರ್ಹ!

ಶನಿವಾರ ಮುಂಬೈನಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರತಿನಿಧಿಗಳ ಅನೌಪಚಾರಿಕ ಸಭೆ ನಡೆದಿತ್ತು. ಸಭೆಯ ಬಳಿಕ  ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ, ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯ್ ಶಾ ಹಾಗೂ ಬ್ರಿಜೇಶ್ ಪಟೇಲ್ ನಡುವೆ ಅಧ್ಯಕ್ಷ ಗಾದಿಗೇರುವುದಕ್ಕೆ ಭಾರಿ ಸ್ಪರ್ಧೆ ಎರ್ಪಟ್ಟಿತ್ತು. ಇವರಿಬ್ಬರ ಜೊತೆಗೆ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಫೇವರಿಟ್ ಎನಿಸಿದ್ದರು.

Latest Videos
Follow Us:
Download App:
  • android
  • ios