Asianet Suvarna News Asianet Suvarna News

ಕ್ರಿಕೆಟಿಗರ ಸಂಸ್ಥೆ ಚುನಾವಣೆ ಶಾಂತಾ ಅವಿರೋಧ ಆಯ್ಕೆ?

ಭಾರತೀಯ ಕ್ರಿಕೆಟಿಗರ ಸಂಸ್ಥೆ ಚುನಾವಣೆಗೆ ಕರ್ನಾಟಕ ಶಾಂತಾ ರಂಗಸ್ವಾಮಿ ಸ್ಪರ್ಧಿಸಿದ್ದಾರೆ. ಇತ್ತೀಚೆಗಷ್ಟೇ ಸ್ವಹಿತಾಸಕ್ತಿ ಆರೋಪದ ಹಿನ್ನಲೆಯಲ್ಲಿ ಬಿಸಿಸಿಐ ಸಲಹಾ ಸಮಿತಿಗೆ ರಾಜಿನಾಮೆ ನೀಡಿದ್ದ ಶಾಂತಾ ಇದೀಗ ಚುನಾವಣೆಗೆ ಧುಮುಕಿದ್ದಾರೆ.

bcci election 2019 shanta rangaswamy contest Indian cricketers association
Author
Bengaluru, First Published Oct 11, 2019, 12:31 PM IST

ನವ​ದೆ​ಹ​ಲಿ(ಅ.11): ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಕರ್ನಾಟಕದ ಶಾಂತಾ ರಂಗ​ಸ್ವಾಮಿ ಪ್ರತಿ​ನಿ​ಧಿ​ಯಾ​ಗಿ ಬಿಸಿ​ಸಿಐ ಸಮಿತಿ ಸೇರಿ​ಕೊ​ಳ್ಳುವ ಸಾಧ್ಯ​ತೆ​ಯಿ​ದೆ. ಶುಕ್ರ​ವಾರದಿಂದ ಇಲ್ಲಿ 3 ದಿನಗಳ ಕಾಲ ನಡೆಯಲಿರುವ ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿ​ಎ) ಚುನಾವಣೆಯಲ್ಲಿ ಪ್ರತಿನಿಧಿಗಳ ಮಹಿಳಾ ವಿಭಾ​ಗ​ದಲ್ಲಿ ಶಾಂತಾ ರಂಗ​ಸ್ವಾಮಿ ಸ್ಪರ್ಧಿಸಿದ್ದರು.

 ಇದನ್ನೂ ಓದಿ: ಬಿಸಿ​ಸಿಐ ಚುನಾ​ವ​ಣೆಗೆ 8 ರಾಜ್ಯ ಸಂಸ್ಥೆಗಳು ಅನ​ರ್ಹ!

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಾನಾ ಎಸ್‌. ಡಾಬಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದಾಗಿ ಶಾಂತಾ ರಂಗಸ್ವಾಮಿ ಅವಿ​ರೋಧವಾಗಿ ಆಯ್ಕೆ​ಯಾ​ಗ​ಲಿ​ದ್ದಾರೆ. ಸುಪ್ರೀಂ ಕೋರ್ಟ್‌ ನೇಮಿತ ಆರ್‌.​ಎಂ ಲೋಧಾ ಸಮಿತಿ ಶಿಫಾ​ರಸು ಮೇರೆಗೆ 9 ಸದ​ಸ್ಯರ ಬಿಸಿ​ಸಿಐ ಸಮಿತಿಯನ್ನು ಆಯ್ಕೆ ಮಾಡ​ಲಾ​ಗು​ತ್ತಿದೆ. 

 ಇದನ್ನೂ ಓದಿ: ಬಿಸಿಸಿ ನೊಟೀಸ್; ಉತ್ತರಕ್ಕೂ ಮೊದಲೇ ರಾಜಿನಾಮೆ ನೀಡಿದ ಶಾಂತಾ!

ಐಸಿಎ ಪ್ರತಿ​ನಿ​ಧಿ​ಗ​ಳನ್ನು ಬಿಸಿ​ಸಿಐ ಸಮಿ​ತಿಗೆ ಆಯ್ಕೆ ಮಾಡ​ಲಿದ್ದು, ಮಹಿಳಾ ವಿಭಾ​ಗದ ಚುನಾ​ವಣಾ ಕಣ​ದಲ್ಲಿ ಶಾಂತಾ ರಂಗ​ಸ್ವಾ​ಮಿ ಏಕೈಕ ಅಭ್ಯರ್ಥಿಯಾಗಿದ್ದಾರೆ. ಪುರು​ಷರ ವಿಭಾ​ಗ​ದ ಪ್ರತಿ​ನಿಧಿಯಾಗ​ಲು ಕರ್ನಾಟಕದ ದೊಡ್ಡ ಗಣೇಶ್‌, ಮಾಜಿ ಕ್ರಿಕೆ​ಟಿ​ಗ​ರಾದ ಕೀರ್ತಿ ಆಜಾದ್‌ ಹಾಗೂ ಅನ್ಶು​ಮಾನ್‌ ಗಾಯ​ಕ್ವಾಡ್‌ ಸ್ಪರ್ಧಾ ಕಣದಲ್ಲಿದ್ದಾರೆ.

 ಇದನ್ನೂ ಓದಿ: BCCI ನೊಟೀಸ್ ಬೆನ್ನಲ್ಲೇ CACಗೆ ಕಪಿಲ್ ದೇವ್ ರಾಜಿನಾಮೆ!

ಸ್ವಹಿತಾಸಕ್ತಿ ಆರೋಪದ ಹಿನ್ನಲೆಯಲ್ಲಿ ಶಾಂತಾ ರಂಗಸ್ವಾಮಿ, ಬಿಸಿಸಿಐ ಕ್ರಿಕೆಟ್  ಸಲಹಾ ಸಮಿತಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಸಮಿತಿ ಮುಖ್ಯಸ್ಥ ಕಪಿಲ್ ದೇವ್ ಕೂಡ ರಾಜಿನಾಮೆ ನೀಡಿದ್ದರು. ಬಳಿಕ ಪ್ರತಿಕ್ರಿಸಿದ್ದ ಕಪಿಲ್ ದೇವ್, ಗೌರ​ವದಿಂದ ಒಂದು ಸಭೆ​ಯಲ್ಲಿ ಹುದ್ದೆ ಅಲಂಕ​ರಿ​ಸು​ವುದು ಸ್ವಹಿ​ತಾ​ಸ​ಕ್ತಿಯ​ಲ್ಲ ಎಂದಿದ್ದಾರೆ.

Follow Us:
Download App:
  • android
  • ios