ಆಸ್ಟ್ರೇಲಿಯಾ ಆಲ್ರೌಂಡರ್, ಮಾಜಿ ಕ್ರಿಕೆಟಿಗ ಗ್ರೇಮ್ ವ್ಯಾಟ್ಸನ್ ನಿಧನ!

ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ಮೀಡಿಯಂ ಫಾಸ್ಟ್ ವೇಗಿಯಾಗಿ ಗುರುತಿಸಿಕೊಂಡಿದ್ದ ಗ್ರೇಮ್ ವ್ಯಾಟ್ಸನ್ ನಿಧನರಾಗಿದ್ದಾರೆ. ಕೊರೋನಾ ವೈರಸ್ ಹಾವಳಿ ನಡುವೆ ವ್ಯಾಟ್ಸನ್ ನಿಧನದ ಕುರಿತ ಹೆಚ್ಚಿ ಮಾಹಿತಿ ಇಲ್ಲಿದೆ.

Former Australian cricketer Graeme Watson has died aged 75

ಸಿಡ್ನಿ(ಏ.25):  ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೇಮ್ ವ್ಯಾಟ್ಸನ್ ನಿಧನರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ 75 ವರ್ಷದ ಗ್ರೇಮ್ ವ್ಯಾಟ್ಸನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗ್ರೇಮ್ ವ್ಯಾಟ್ಸ್‌ನ್ 1966-67 ರಿಂದ 1972ರ ವರೆಗೆ ಆಸ್ಟ್ರೇಲಿಯಾ ತಂಡ ಪ್ರತಿನಿಧಿಸಿದ್ದರು. ಆಸ್ಟ್ರೇಲಿಯಾ ಪರ 5 ಟೆಸ್ಟ್, 2 ಏಕದಿನ ಪಂದ್ಯ ಆಡಿದ್ದರು.  ಸೌತ್ ಆಫ್ರಿಕಾ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಫಲಿಸಲಿಲ್ಲ ಪ್ರಾರ್ಥನೆ, ಕುಟುಂಬ ಸದಸ್ಯರಂತೆ ಕೈಯಾರೆ ಅಂತ್ಯಕ್ರಿಯೆ ಮಾಡಿದ ಗಂಭೀರ್!..

ಮೊದಲ ಪ್ರವಾಸದಲ್ಲೇ ಅರ್ಧಶತಕ ಸೇರಿದಂತೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಗಮನಸೆಳೆದಿದ್ದ ಗ್ರೇಮ್ ವ್ಯಾಟ್ಸನ್ ಕಾಲಿನ ಗಾಯಿಂದ ಮುಂದಿನ ಸರಣಿಯಿಂದ ಹೊರಗುಳಿದರು. ಕೆಲ ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದ ಗ್ರೇಮ್ ವ್ಯಾಟ್ಸನ್ ಬಳಿಕ ವೆಸ್ಟರ್ನ್ ಆಸ್ಟ್ರೇಲಿಯಾಗೆ ತೆರಳಿದರು. ಅಲ್ಲಿ ಶೇಫೀಲ್ಡ್ ಶೀಲ್ಡ್ ಕೌಂಟಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನಸಳೆದರು.

1971-72, 1972-73, ಹಾಗೂ 1974-75 ಆವೃತ್ತಿಗಳಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡಕ್ಕೆ ದೇಸಿ ಪ್ರಶಸ್ತಿ ಗೆಲ್ಲಿಸಿಕೊಟ್ಟ ಕೀರ್ತಿ ಇದೆ. 107 ಪ್ರಥಮ ದರ್ಜೆ ಪಂದ್ಯಗಲಿಂದ 4,674 ರನ್ ಹಾಗೂ 186  ವಿಕೆಟ್ ಕಬಳಿಸಿದ್ದಾರೆ.

ಆಸ್ಟ್ರೇಲಿಯಾ ಫುಟ್ಬಾಲ್ ತಂಡದಲ್ಲೂ ಕಾಣಿಸಿಕೊಂಡಿದ್ದ ಗ್ರೇಮ್ ವ್ಯಾಟ್ಸ್‌ನ್ ನಿವೃತ್ತಿ ಬದುಕಿನಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾದರು. ಕೆಲ ವರ್ಷಗಳಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಗ್ರೇಮ್ ವ್ಯಾಟ್ಸನ್ ಇದೀಗ ನಿಧನರಾಗಿದ್ದಾರೆ. 

Latest Videos
Follow Us:
Download App:
  • android
  • ios