ಕ್ರಿಕೆಟ್‌ ಹಾಗೂ ಹಾಕಿ ಎರಡೂ ಕ್ರೀಡೆಗಳಲ್ಲಿ ಆಸ್ಪ್ರೇಲಿಯಾವನ್ನು ಪ್ರತಿನಿಧಿಸಿದ್ದ ಬ್ರಿಯಾನ್‌ ಬೂಥ್‌89ನೇ ವಯಸ್ಸಿಗೆ ಕೊನೆಯುಸಿರೆಳೆದ ದಿಗ್ಗಜ ಕ್ರೀಡಾ ತಾರೆಆಸ್ಟ್ರೇಲಿಯಾ ಪರ 29 ಟೆಸ್ಟ್‌ಗಳನ್ನಾಡಿ 1,773 ರನ್‌ ಗಳಿಸಿದ್ದ ಬೂಥ್

ಸಿಡ್ನಿ(ಮೇ.21): ಕ್ರಿಕೆಟ್‌ ಹಾಗೂ ಹಾಕಿ ಎರಡೂ ಕ್ರೀಡೆಗಳಲ್ಲಿ ಆಸ್ಪ್ರೇಲಿಯಾವನ್ನು ಪ್ರತಿನಿಧಿಸಿದ್ದ ಬ್ರಿಯಾನ್‌ ಬೂಥ್‌(89) ಶನಿವಾರ ನಿಧನರಾಗಿದ್ದಾರೆ. ಬೂಥ್‌ 1960ರ ಸಮಯದಲ್ಲಿ 29 ಟೆಸ್ಟ್‌ಗಳನ್ನಾಡಿ 1,773 ರನ್‌ ಗಳಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಮೂರು ವಿಕೆಟ್ ಕಬಳಿಸಿದ್ದಾರೆ. 2 ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಇನ್ನು 1956ರ ಮೆಲ್ಬರ್ನ್‌ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಆಸೀಸ್‌ ಹಾಕಿ ತಂಡದ ಸದಸ್ಯರಾಗಿದ್ದರು.

ಮೊದಲಿಗೆ ಆಸ್ಟ್ರೇಲಿಯಾ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಬ್ರಿಯಾನ್‌ ಬೂಥ್‌, ಇದಾದ ಬಳಿಕ 1961ರಲ್ಲಿ ಆಷಸ್ ಸರಣಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ದೇಶದ ಪರ ಎರಡು ಕ್ರೀಡೆಗಳನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಸೌಭಾಗ್ಯ ಎಂದು ಭಾವಿಸುತ್ತೇನೆ ಎಂದು ಕ್ರಿಕೆಟ್ ಸಂದರ್ಶನವೊಂದರಲ್ಲಿ ಬೂಥ್ ಹೇಳಿದ್ದರು.

ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರೂ ಸಹಾ ಬ್ರಿಯಾನ್‌ ಬೂಥ್‌, ತವರಿನಲ್ಲಿ ಕ್ರಿಕೆಟ್‌ ಆಡಲು ಬರೋಬ್ಬರಿ 16 ತಿಂಗಳುಗಳ ಕಾಲ ಕಾಯಬೇಕಾಯಿತು. 1962ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಆಡಿದ ಪಂದ್ಯದಲ್ಲಿ ಬ್ರಿಯಾನ್‌ ಬೂಥ್‌, ಇಂಗ್ಲೆಂಡ್ ಎದುರು 112 & ಅಜೇಯ 19 ರನ್ ಬಾರಿಸಿ ಮಿಂಚಿದ್ದರು. ಇನ್ನು ದಕ್ಷಿಣ ಆಫ್ರಿಕಾ ಎದುರು ಬ್ರಿಯಾನ್‌ ಬೂಥ್‌ ಬಾರಿಸಿದ ಎರಡು ಶತಕಗಳು, ಅವರ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಪ್ರಮುಖವೆನಿಸಿವೆ.

ಸಿಗದ ವೇತನ: ಪಾಕಿಸ್ತಾನ ಹಾಕಿ ಕೋಚ್‌ ರಾಜೀನಾಮೆ!

ಕರಾಚಿ: ಕಳೆದೊಂದು ವರ್ಷದಿಂದ ಪಾಕಿಸ್ತಾನ ಹಾಕಿ ಫೆಡರೇಶನ್‌(ಪಿಎಚ್‌ಎಫ್‌) ವೇತನ ಪಾವತಿಸಿದ್ದಕ್ಕೆ ಬೇಸತ್ತು ರಾಷ್ಟ್ರೀಯ ಪುರುಷರ ಹಾಕಿ ತಂಡದ ಕೋಚ್‌ ಸೀಫ್ರೈಡ್‌ ಐಕ್ಮನ್‌ ರಾಜೀನಾಮೆ ನೀಡಿದ್ದಾರೆ. ವರ್ಷದ ಹಿಂದೆ ಹುದ್ದೆಗೇರಿದ್ದ ಐಕ್ಮನ್‌, ಸಾಮಾಜಿಕ ತಾಣಗಳಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. 

ಇಂದು ಬೆಂಗ್ಳೂರು 10ಕೆ ಮ್ಯಾರಥಾನ್‌ಗೆ ಚಾಲನೆ

ಕಳೆದ ವರ್ಷಾಂತ್ಯದಲ್ಲೇ ಪಾಕಿಸ್ತಾನದಿಂದ ತಮ್ಮ ತವರು ನೆದರ್‌ಲೆಂಡ್‌್ಸಗೆ ವಾಪಸಾಗಿದ್ದ ಐಕ್ಮನ್‌ ರಾಜೀನಾಮೆ ಸಲ್ಲಿಸಿರಲಿಲ್ಲ. ಇವರ ಸ್ಥಾನವನ್ನು ನೆದರ್‌ಲೆಂಡ್‌್ಸನ ಮತ್ತೊಬ್ಬ ಕೋಚ್‌ ರೋಲೆಂಟ್‌ ಓಲ್ಟ್‌ಮನ್ಸ್‌ ತುಂಬಲಿದ್ದಾರೆ.

ಹಾಕಿ: ಭಾರತಕ್ಕೆ ಸೋಲು

ಅಡಿಲೇಡ್‌: ಭಾರತ ಮಹಿಳಾ ಹಾಕಿ ತಂಡ ಕಳೆದ ಪಂದ್ಯಕ್ಕೆ ಹೋಲಿಸಿದರೆ ಉತ್ತಮ ಪೈಪೋಟಿ ನೀಡಿದರೂ, ಆಸ್ಪ್ರೇಲಿಯಾ ವಿರುದ್ಧದ 2ನೇ ಪಂದ್ಯದಲ್ಲಿ 2-3 ಗೋಲುಗಳ ವೀರೋಚಿತ ಸೋಲು ಅನುಭವಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಆಸೀಸ್‌ 2-0ಯಲ್ಲಿ ವಶಪಡಿಸಿಕೊಂಡಿತು. 3ನೇ ಪಂದ್ಯ ಭಾನುವಾರ ನಡೆಯಲಿದೆ. ಬಳಿಕ ಭಾರತ ತಂಡ ಆಸ್ಪ್ರೇಲಿಯಾ ‘ಎ’ ವಿರುದ್ಧ 2 ಪಂದ್ಯ ಆಡಲಿದೆ. ಏಷ್ಯನ್‌ ಗೇಮ್ಸ್‌ ಸಿದ್ಧತೆಗಾಗಿ ಭಾರತ ಈ ಪ್ರವಾಸ ಕೈಗೊಂಡಿದೆ.

ಸಾಯ್‌ ಕೋಚ್‌ ವಿರುದ್ಧ ಲೈಂಗಿಕ ಕಿರುಕುಳ ಕೇಸ್‌

ಗುವಾಹಟಿ: ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌) ಕೇಂದ್ರದ ಮುಖ್ಯಸ್ಥ, ಈಜು ಕೋಚ್‌ ಮೃನಾಲ್‌ ಬಾಸು ವಿರುದ್ಧ ಲೈಂಗಿಕ ಕಿರುಕುಳ ಕೇಸ್‌ ದಾಖಲಾಗಿದೆ. ದೂರು ನೀಡಿರುವ ಅಥ್ಲೀಟ್‌ಗಳ ಪೈಕಿ ಹಲವರು ಅಪ್ತಾಪ್ರ ಬಾಲಕಿಯರಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾಯ್‌ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.