Asianet Suvarna News Asianet Suvarna News

'ಕ್ರಿಕೆಟ್ ದೇವತೆ' ಸ್ಮೃತಿ ಮಂಧನಾ ನೋಡಲು ಬೀಜಿಂಗ್‌ನಿಂದ ಹಾಂಗ್ಝೂಗೆ ಬಂದ ಚೀನಿ ಅಭಿಮಾನಿ..!

ಚೀನಾದ ಯುವ ಅಭಿಮಾನಿಯೊಬ್ಬ ಕ್ರಿಕೆಟ್ ದೇವತೆ ಸ್ಮೃತಿ ಮಂಧನಾರನ್ನು ನೋಡಲು ಬೀಜಿಂಗ್‌ನಿಂದ ಏಷ್ಯನ್ ಗೇಮ್ಸ್ ನಡೆಯುತ್ತಿರುವ ಹಾಂಗ್ಝೂಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಸ್ಮೃತಿ ಮಂಧನಾ ಅವರ ಅಪ್ಪಟ ಅಭಿಮಾನಿಯಾಗಿರುವ ಜುನ್ ಯು ಎಂಬಾ ಬೀಜಿಂಗ್‌ನಿಂದ 1200 ಕಿಲೋಮೀಟರ್ ದೂರದಲ್ಲಿರುವ ಹಾಂಗ್ಝೂಗೆ ಬಂದು ತಮ್ಮ ಕ್ರಿಕೆಟ್‌ ದೇವತೆಯನ್ನು ಕಣ್ತುಂಬಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

For Goddess Smriti Mandhana Chinese Fan Travels From Beijing To Hangzhou Story Is Viral kvn
Author
First Published Sep 26, 2023, 6:23 PM IST

ಹಾಂಗ್ಝೂ(ಸೆ.26): ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧನಾಗೆ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಸದ್ಯ ಭಾರತ ಮಹಿಳಾ ಕ್ರಿಕೆಟ್ ತಂಡವು ಸೋಮವಾರ(ಸೆ.25)ವಷ್ಟೇ ನಡೆದ ಏಷ್ಯನ್ ಗೇಮ್ಸ್‌ ಮಹಿಳಾ ಕ್ರಿಕೆಟ್ ಫೈನಲ್‌ನಲ್ಲಿ ಶ್ರೀಲಂಕಾವನ್ನು 19 ರನ್‌ಗಳಿಂದ ಮಣಿಸಿ ಐತಿಹಾಸಿಕ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ. ಚೀನಾದ ಯುವ ಅಭಿಮಾನಿಯೊಬ್ಬ ಕ್ರಿಕೆಟ್ ದೇವತೆ ಸ್ಮೃತಿ ಮಂಧನಾರನ್ನು ನೋಡಲು ಬೀಜಿಂಗ್‌ನಿಂದ ಏಷ್ಯನ್ ಗೇಮ್ಸ್ ನಡೆಯುತ್ತಿರುವ ಹಾಂಗ್ಝೂಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಸ್ಮೃತಿ ಮಂಧನಾ ಅವರ ಅಪ್ಪಟ ಅಭಿಮಾನಿಯಾಗಿರುವ ಜುನ್ ಯು ಎಂಬಾ ಬೀಜಿಂಗ್‌ನಿಂದ 1200 ಕಿಲೋಮೀಟರ್ ದೂರದಲ್ಲಿರುವ ಹಾಂಗ್ಝೂಗೆ ಬಂದು ತಮ್ಮ ಕ್ರಿಕೆಟ್‌ ದೇವತೆಯನ್ನು ಕಣ್ತುಂಬಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಈ ಕುರಿತಂತೆ ಈ ಅಭಿಮಾನಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾನೆ. "ನಾನು 2019ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಜಸ್ಪ್ರೀತ್ ಬುಮ್ರಾ ಅವರು ಬೌಲಿಂಗ್ ಮಾಡಿದ್ದನ್ನು ನೋಡಿದ್ದೇನೆ. ನಾನು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಫಾಲೋ ಮಾಡುತ್ತಿದ್ದೇನೆ. ಅವರಿಬ್ಬರು ಸದ್ಯ ಈ ಕ್ರೀಡೆಗೆ ದಿಗ್ಗಜ ಆಟಗಾರರಾಗಿದ್ದಾರೆ. ಇದಾದ ಬಳಿಕ ಸೂರ್ಯಕುಮಾರ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಇದ್ದಾರೆ. 2019ರ ವಿಶ್ವಕಪ್‌ನಲ್ಲಂತೂ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ಎದುರು ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದರು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಜುನ್ ಯು ತಿಳಿಸಿದ್ದಾರೆ.

ಆಸೀಸ್ ಎದುರಿನ ಕೊನೆಯ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬೆಂಕಿ-ಬಿರುಗಾಳಿ ಎಂಟ್ರಿ..!

ಕ್ರಿಕೆಟ್‌ ಬಗ್ಗೆ ಏನೆಲ್ಲಾ ಕಲಿತಿದಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಂಧನಾ ಅಭಿಮಾನಿ, "ಬೀಜಿಂಗ್‌ನಲ್ಲಿರುವ ನಮ್ಮ ಯೂನಿವರ್ಸಿಟಿಯಲ್ಲಿ ಕ್ರಿಕೆಟ್ ಪಾಠಗಳನ್ನು ಇಡಲಾಗಿದೆ. ಹೀಗಾಗಿ ಕ್ರಿಕೆಟ್ ಬಗ್ಗೆ ಸ್ವಲ್ಪ ಸ್ವಲ್ಪ ಗೊತ್ತಿದೆ ಎಂದು ಜುನ್ ಯು ಹೇಳಿದ್ದಾರೆ.

"ನಾನು ಕ್ರಿಕೆಟ್ ಆಡಬೇಕು ಎಂದು ಬಯಸಿದರೂ ಆಡಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಸರಿಯಾದ ಕ್ರಿಕೆಟ್ ಮೈದಾನಗಳೇ ಇಲ್ಲ. ಈ ಏಷ್ಯನ್ ಗೇಮ್ಸ್‌ ಆರಂಭಕ್ಕೂ ಮುನ್ನ ಈ ಮೈದಾನವು ಹೂಗಳನ್ನು ಬೆಳೆಯುವ ಪ್ರದೇಶವಾಗಿತ್ತು. ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟ್ ಆಡಿಸುವುದಕ್ಕಾಗಿಯೇ ಇದನ್ನು ಕ್ರಿಕೆಟ್ ಮೈದಾನವಾಗಿ ಅಭಿವೃದ್ದಿಪಡಿಸಲಾಗಿದೆ" ಎಂದು ಜುನ್ ಯು ಹೇಳಿದ್ದಾರೆ.

'ನಾವು ಭಾರತಕ್ಕೆ ಯುದ್ದ ಮಾಡಲು ಹೋಗುತ್ತಿಲ್ಲ' : ಇಂಡೋ-ಪಾಕ್ ವಿಶ್ವಕಪ್‌ ಬಗ್ಗೆ ತುಟಿಬಿಚ್ಚಿದ ಪಾಕ್ ವೇಗಿ ಹ್ಯಾರಿಸ್ ರೌಫ್

"ನಾನು 1000 ಯೆನ್(11,400 ರುಪಾಯಿ) ಖರ್ಚು ಮಾಡಿ ಬೀಜಿಂಗ್‌ನಿಂದ ಇಲ್ಲಿಗೆ ಬಂದಿದ್ದೇನೆ. ನನಗೆ ಇನ್ನೂ ಓದಿಕೊಳ್ಳುವುದಿದೆ. ಹೀಗಾಗಿ ಪುರುಷರ ಕ್ರಿಕೆಟ್ ಪಂದ್ಯಾವಳಿ ಆರಂಭವಾಗುವವರೆಗೆ ಇಲ್ಲಿ ಇರಲು ಸಾಧ್ಯವಿಲ್ಲ. ಹೀಗಾಗಿ ಮಂಗಳವಾರ ನಾನು ಮತ್ತೆ ಬೀಜಿಂಗ್‌ಗೆ ವಾಪಾಸ್ಸಾಗುತ್ತೇನೆ ಎಂದು ಬೀಜಿಂಗ್‌ನಲ್ಲಿ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಜುನ್ ಯು ಹೇಳಿದ್ದಾರೆ.

Follow Us:
Download App:
  • android
  • ios