Asianet Suvarna News Asianet Suvarna News

IPL Auction 2022 : ಮುಂದಿನ ಐಪಿಎಲ್ ನಲ್ಲಿ ಇವರೆಲ್ಲಾ ಕ್ಯಾಪ್ಟನ್ ಆಗೋದು ಖಂಡಿತ!

ನಾಯಕತ್ವದ ಜವಾಬ್ದಾರಿ ತಿಳಿದಿರುವ ಟಾಪ್-5 ಆಟಗಾರರು
ಈ ಆಟಗಾರರ ಮೇಲೆ ಕಣ್ಣಿಟ್ಟಿದೆ ಐಪಿಎಲ್ ನ ಎಲ್ಲಾ ತಂಡಗಳು
ಸೂಪರ್ ಸ್ಟಾರ್ ಪ್ಲೇಯರ್ ಗಳನ್ನು ಖರೀದಿಸಲು ನಡೆಯಲಿದೆ ಮೆಗಾ ಪೈಪೋಟಿ

Five Top Players Who Can become Captains in IPL 2022 san
Author
Bengaluru, First Published Dec 11, 2021, 2:24 PM IST
  • Facebook
  • Twitter
  • Whatsapp

ಬೆಂಗಳೂರು (ಡಿ.11): ಟಿ20 ಕ್ರಿಕೆಟ್ ಮಾದರಿಯಲ್ಲಿ ಮನರಂಜನೆ ಅಂದರೆ ಮೊದಲಿಗೆ ನೆನಪಿಗೆ ಬರೋದು ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League). ಭಾರತೀಯ ಕ್ರಿಕೆಟ್ ಅನ್ನು ನೋಡುವ ರೀತಿಯನ್ನೇ ಬದಲಿಸಿದ ಲೀಗ್ ಇದು. ಕೇವಲ ಭಾರತೀಯ ಕ್ರಿಕೆಟಿಗರ ಮಾತ್ರವಲ್ಲ, ವಿದೇಶದ ಕ್ರಿಕೆಟಿಗರ ಸೂಪರ್ ನಿರ್ವಹಣೆಯನ್ನೂ ಐಪಿಎಲ್ ವೇದಿಕೆಯಲ್ಲಿ ನೋಡಿದ್ದಾಗಿದೆ. ಐಪಿಎಲ್ 2022 (IPL 2022)ಮಾತುಕತೆಗಳು ಈಗಾಗಲೇ ಆರಂಭವಾಗಿದ್ದು, ಅದಕ್ಕೂ ಮುನ್ನ ಎಲ್ಲರ ಕಣ್ಣು ಮೆಗಾ ಆಕ್ಷನ್ ನ ಮೇಲೆ ನೆಟ್ಟಿದೆ.  ಲೀಗ್ ನಲ್ಲಿರುವ ಎಲ್ಲಾ 10 ತಂಡಗಳು ಟ್ರೋಫಿ ಜಯಿಸುವ ನಿಟ್ಟಿನಲ್ಲಿ ಅತ್ಯುತ್ತಮ ಎನಿಸುವ ಪ್ಲೇಯರ್ ಗಳನ್ನು ಖರೀದಿಸಲು ಇರುವ ಸ್ಥಳ ಐಪಿಎಲ್ ಹರಾಜು (IPL Auction). ಅಹಮದಾಬಾದ್ ಹಾಗೂ ಲಕ್ನೋ ತಂಡಗಳ ಸೇರ್ಪಡೆಯೊಂದಿಗೆ ಹರಾಜು ಪ್ರಕ್ರಿಯೆ ಕೂಡ ಸೂಪರ್ ಆಗಿರುವ ಲಕ್ಷಣ ಕಂಡಿದೆ. ಮುಂಬರುವ ಮೆಗಾ ಆಕ್ಷನ್ ನಲ್ಲಿತಂಡದ ನಾಯಕರಾಗುವ ನಿಟ್ಟಿನಲ್ಲಿಯೇ ಇರುವ ಐವರು ಪ್ಲೇಯರ್ ಗಳನ್ನು ಇಲ್ಲಿ ನೀಡಲಾಗಿದೆ. ಯಾವ ತಂಡಗಳು ಇವರನ್ನು ಖರೀದಿ ಮಾಡಲಿವೆಯೋ ಆ ತಂಡಕ್ಕೆ ಇವರು ಕ್ಯಾಪ್ಟನ್ ಆಗೋದು ಖಂಡಿತ.

ಕೆಎಲ್ ರಾಹುಲ್
ಸ್ಥಿರ ಆಟ ಎಂದಾಗ ನಮಗೆ ಮೊದಲಿಗೆ ನೆನಪಿಗೆ ಬರೋದು ಕರ್ನಾಟಕದ ಕೆಎಲ್ ರಾಹುಲ್ (KL Rahul). ಟಿ20 ಹಾಗೂ ಏಕದಿನ ಮಾದರಿಯಲ್ಲಿ ವಿಶ್ವದ ವಿಧ್ವಂಸಕ ಬ್ಯಾಟ್ಸ್ ಮನ್ ಗಳ ಸಾಲಿನಲ್ಲಿ ಒಬ್ಬರು. 2018ರ ಐಪಿಎಎಲ್ ಋತುವಿನಿಂದಲೂ 500ಕ್ಕಿಂತ ಅಧಿಕ ರನ್ ಗಳನ್ನು ಬಾರಿಸಿದ ಆಟಗಾರ ಕೆಎಲ್ ರಾಹುಲ್. ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಉತ್ತಮ ನಿರ್ವಹಣೆ ತೋರಲು ಸಾಧ್ಯವಾಗದಿದ್ದರೂ, ವೈಯಕ್ತಿಕ ನಿರ್ವಹಣೆಯಲ್ಲಿ ಯಾವ ಸಮಸ್ಯೆ ಆಗದಂತೆ ನೋಡಿಕೊಂಡಿದ್ದಾರೆ. ಎಲ್ಲಾ ನಿಟ್ಟಿನಲ್ಲಿ ನೋಡಿದರೂ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟವಾಗಬಲ್ಲ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಕೂಡ ಇದ್ದಾರೆ. ಮೂಲಗಳ ಪ್ರಕಾರ ಲಕ್ನೋ (Lucknow)ಫ್ರಾಂಚೈಸಿಗೆ ನಾಯಕರಾಗಿ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಡೇವಿಡ್ ವಾರ್ನರ್
ಮೈದಾನದ ಹೊರಗೆ ಹಾಗೂ ಮೈದಾನ ಒಳಗೆ ಅತ್ಯಂತ ರಂಜನೀಯ ಪ್ಲೇಯರ್ ಎಂದರೆ ಅದು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (David Warner). 2021ರ ಐಪಿಎಲ್ ನಲ್ಲಿ (2021 IPL )ಸನ್ ರೈಸರ್ಸ್ (Sunrisers Hyderabad ) ತಂಡದ ಪರವಾಗಿ ಬಹುತೇಕವಾಗಿ ಬೆಂಚ್ ಕಾಯಿಸಿದ್ದರೂ, ಕೆಲವೇ ತಿಂಗಳ ಅಂತರದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಲು ಕಾರಣರಾಗಿದ್ದರು.

IPL Auction 2022: ಅನ್ ಸೋಲ್ಡ್ ಆಗೋ ಲಿಸ್ಟ್ ನಲ್ಲಿದ್ದಾರೆ ಈ ದಿಗ್ಗಜರು
ಟೂರ್ನಿಯಲ್ಲಿ ಸರಣಿಶ್ರೇಷ್ಠರಾಗಿದ್ದ ಡೇವಿಡ್ ವಾರ್ನರ್ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತದೊಂದಿಗೆ ನಾಯಕ ಸ್ಥಾನದ ನಿರೀಕ್ಷೆಯಲ್ಲೂ ಇದ್ದಾರೆ. 2016ರಲ್ಲಿ ಡೇವಿಡ್ ವಾರ್ನರ್ ನೇತೃತ್ವದಲ್ಲಿಯೇ ಸನ್ ರೈಸರ್ಸ್ ತಂಡ ಚಾಂಪಿಯನ್ ಆಗಿತ್ತು. ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಹಾಗೂ ನಾಯಕ ಸ್ಥಾನದ ಜವಾಬ್ದಾರಿಯಿಂದ ಗುರುತಿಸಿಕೊಂಡಿರುವ ವಾರ್ನರ್ ಗೆ ಐಪಿಎಲ್ ಹರಾಜಿನ  ವೇಳೆ ದೊಡ್ಡ ಫ್ರಾಂಚೈಸಿಗಳು ಕಣ್ಣಿಟ್ಟಿವೆ.

ಶ್ರೇಯಸ್ ಅಯ್ಯರ್
ಕ್ರಿಕೆಟ್ ನ ಕುರಿತಾಗಿ ತಮ್ಮ ಬದ್ಧತೆ ಹಾಗೂ ಪ್ಯಾಷನ್ ನಿಂದ ಗುರುತಿಸಿಕೊಂಡಿರುವ ಆಟಗಾರ ಶ್ರೇಯಸ್ ಅಯ್ಯರ್ (Shreyas Iyer). 2019ರಿಂದಲೂ ಕ್ಯಾಪ್ಟನ್ ಆಗಿ ಡೆಲ್ಲಿ (Delhi Capitals) ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.  ಸತತ ಎರಡು ವರ್ಷ ಶ್ರೇಯಸ್ ನೇತೃತ್ವದಲ್ಲಿಯೇ ಡೆಲ್ಲಿ ತಂಡ ಪ್ಲೇ ಆಫ್ ಹಂತಕ್ಕೇರಿದ್ದರೆ, 2020ರಲ್ಲಿ ಡೆಲ್ಲಿ ತಂಡ ಮೊಟ್ಟಮೊದಲ ಬಾರಿಗೆ ಫೈನಲ್ ಗೇರಿದ್ದಾಗ ಶ್ರೇಯಸ್ ಕ್ಯಾಪ್ಟನ್ ಆಗಿದ್ದರು.  ಹರಾಜಿನಲ್ಲಿರುವ ಪ್ರಮುಖ ಪ್ಲೇಯರ್ ಗಳ ಸಾಲಿನಲ್ಲಿ ಶ್ರೇಯಸ್ ಕೂಡ ಇದ್ದು, ಆರ್ ಸಿಬಿ (RCB), ಅಹಮದಾಬಾದ್ ಹಾಗೂ ಪಂಜಾಬ್ ಕಿಂಗ್ಸ್ (Punjab Kings) ತಂಡದಿಂದ ದೊಡ್ಡ ಬಿಡ್ ನ ನಿರೀಕ್ಷೆಯಲ್ಲಿದ್ದಾರೆ.

RCB Biggest Mistakes: ಈ ಮೂವರು ಆಟಗಾರರನ್ನು ಕೈಬಿಟ್ಟು ಯಡವಟ್ಟು ಮಾಡಿಕೊಂಡ ಆರ್‌ಸಿಬಿ..!
ಆರನ್ ಫಿಂಚ್

ಆಸ್ಟ್ರೇಲಿಯಾದ ಸೀಮಿತ ಓವರ್ ಗಳ ತಂಡದ ನಾಯಕ ಆರನ್ ಫಿಂಚ್ (Aaron Finch), ಈವರೆಗೂ ಬ್ಯಾಟಿಂಗ್ ನಿಂದ ದೊಡ್ಡ ಮಟ್ಟದ ನಿರಾಸೆ ಉಂಟು ಮಾಡಿಲ್ಲ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡ ಇವರ ನೇತೃತ್ವದಲ್ಲಿ ಟಿ20 ವಿಶ್ವಕಪ್ ನಲ್ಲಿ (T20 World Cup) ಚಾಂಪಿಯನ್ ಆಗಿತ್ತು. ಐಪಿಎಲ್ ನಲ್ಲಿ ಆಡಿದ ಅನುಭವವೂ ಇವರಿಗಿದ್ದು, ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಪ್ಲಸ್ ಪಾಯಿಂಟ್ ಆಗಿದೆ. ಐಪಿಎಲ್ ನಲ್ಲಿ 8 ಫ್ರಾಂಚೈಸಿಗಳ ಪರವಾಗಿ ಆಡಿರುವ ಆರನ್ ಫಿಂಚ್ ಅವರ ಮೇಲೆ ಕೆಕೆಆರ್ (KKR)ತಂಡ ಕಣ್ಣಿಟ್ಟಿದೆ.

ಶಿಖರ್ ಧವನ್
ಕ್ರಿಕೆಟ್ ಅಭಿಮಾನಿಗಳಿಂದ ಗಬ್ಬರ್ ಎನ್ನುವ ಹೆಸರಿನಲ್ಲಿ ಪರಿಚಿತರಾಗಿರುವ ಶಿಖರ್ ಧವನ್ (Shikhar Dhawan), ಐಪಿಎಲ್ ನಲ್ಲಿ 192 ಪಂದ್ಯ ಆಡಿದ್ದಾರೆ.  35ರ ಸರಾಸರಿಯಲ್ಲಿ5784 ರನ್ ಬಾರಿಸಿದ್ದು, 2014ರಲ್ಲಿ ಸನ್ ರೈಸರ್ಸ್ ತಂಡದದ ನಾಯಕರಾದ ಅನುಭವವೂ ಇವರಿಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಇವರನ್ನು ಹರಾಜಿಗೆ ಬಿಟ್ಟಿದ್ದು, ನಾಯಕನ ಅಗತ್ಯವಿರುವ ತಂಡಗಳು ಖಂಡಿತ ಬಿಡ್ ಮಾಡಲಿದೆ.
 

Follow Us:
Download App:
  • android
  • ios