Asianet Suvarna News Asianet Suvarna News

IPL Auction 2022: ಅನ್ ಸೋಲ್ಡ್ ಆಗೋ ಲಿಸ್ಟ್ ನಲ್ಲಿದ್ದಾರೆ ಈ ದಿಗ್ಗಜರು!

ಶುರುವಾಗಿದೆ ಮುಂಬರುವ ಐಪಿಎಲ್ ಆಕ್ಷನ್ ಲೆಕ್ಕಾಚಾರ
ಸುರೇಶ್ ರೈನಾ, ಕ್ರಿಸ್ ಗೇಲ್ ಅನ್ ಸೋಲ್ಡ್ ಆಗಬಹುದಂತೆ
ಆಟಗಾರರ ವಯಸ್ಸು ಹಾಗೂ ಕಳಪೆ ಫಾರ್ಮ್ ಕಾರಣ

IPL Big stars who may go unsold at 2022 ipl mega auction san
Author
Bengaluru, First Published Dec 10, 2021, 2:03 PM IST

ಬೆಂಗಳೂರು (ಡಿ.10): ಹೊಸ ಸೀಸನ್ ಗೂ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ(Indian Premier League) ದೊಡ್ಡದೊಂದು ಆಕ್ಷನ್ ವೇದಿಕೆ ಸಜ್ಜಾಗಿದೆ. ಹೊಸ ಎರಡು ತಂಡಗಳ ಸೇರ್ಪಡೆಯೊಂದಿಗೆ ಈ ಬಾರಿಯ ಐಪಿಎಲ್ ಆಕ್ಷನ್ (IPL Auction) ಕೂಡ ಹಿಂದಿನ ಎಲ್ಲಾ ಆವೃತ್ತಿಗಳ ಆಕ್ಷನ್ ಗಿಂತ ಭಿನ್ನವಾಗಿರಲಿದೆ. ಬಹುತೇಕ ಎಲ್ಲಾ ತಂಡಗಳು ಹೊಸದಾಗಿ ತಂಡವನ್ನು ಕಟ್ಟಬೇಕಾಗಿದೆ. ಈ ಕುರಿತಾಗಿ ಟೀಮ್ ಮ್ಯಾನೇಜ್ ಮೆಂಟ್ ಸಾಲು ಸಾಲು ಮೀಟಿಂಗ್ ಗಳು, ಲೆಕ್ಕಾಚಾರಗಳಲ್ಲಿ ಭಾಗಿಯಾಗಿವೆ. ಈಗಾಗಲೇ ಲೀಗ್ ನಲ್ಲಿರುವ ಎಂಟು ತಂಡಗಳು ತನ್ನ ರಿಟೇನ್ ಆಟಗಾರರ ಲಿಸ್ಟ್ ಅನ್ನು ಪ್ರಕಟಿಸಿದ್ದರೆ, ಐಪಿಎಲ್ ಗೆ (IPL) ಹೊಸದಾಗಿ ಸೇರ್ಪಡೆಯಾಗಿರುವ ಅಹಮದಾಬಾದ್ (Ahmedabad) ಹಾಗೂ ಲಕ್ನೋ (Lucknow) ಫ್ರಾಂಚೈಸಿಗಳು ರಿಟೇನ್ ಆಗದ ಪ್ಲೇಯರ್ ಗಳ ಪೂಲ್ ನಿಂದ ತಲಾ ಮೂವರು ಪ್ಲೇಯರ್ ಗಳನ್ನು ಆಯ್ಕೆ ಮಾಡಬಹುದಾದ ಅವಕಾಶ ಹೊಂದಿದೆ.

ತಂಡದ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಕಾರಣ, ಭಾರತ ಹಾಗೂ ವಿದೇಶದ ಸೂಪರ್ ಸ್ಟಾರ್ ಕ್ರಿಕೆಟಿಗರು ಈ ಬಾರಿ ಐಪಿಎಲ್ ಆಟಗಾರರ ಹರಾಜಿನ ವೇಳೆ ಬಂಪರ್ ಹಣದ ನಿರೀಕ್ಷೆಯಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ತಾವಯ ಹರಾಜಿಗೆ ಬಿಡುಗಡೆ ಮಾಡಿರುವ ಪ್ಲೇಯರ್ ಗಳನ್ನೇ ಹೆಚ್ಚಾಗಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳುವ ಗುರಿಯಲ್ಲಿದ್ದರೆ, ಇನ್ನೂ ಹಲವು ಪ್ಲೇಯರ್ ಗಳು ಬೇರೆ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಇಷ್ಟೆಲ್ಲದರ ನಡುವೆ, ಐಪಿಎಲ್ ನ ದಿಗ್ಗಜರೆನಿಸಿಕೊಂಡ ಕೆಲ ಪ್ಲೇಯರ್ ಗಳು ಈ ಬಾರಿ ಅನ್ ಸೋಲ್ಡ್ ಆಗಬಹುದಾದ ಸೂಚನೆ ಜಾಸ್ತಿ ಕಾಣ್ತಾ ಇದೆ. ಕಳಪೆ ಫಾರ್ಮ್ ಹಾಗೂ ವಯಸ್ಸಿನ ಕಾರಣದಿಂದಾಗಿ ಈ ಪ್ಲೇಯರ್ ಗಳನ್ನು ಹರಾಜಿನಲ್ಲಿ ಯಾವ ತಂಡಗಳೂ ಕೂಡ ಬಿಡ್ ಮಾಡದೇ ಇರಬಹುದು.

ಸುರೇಶ್ ರೈನಾ
ಐಪಿಎಲ್ ನ ದಿಗ್ಗಜ ಪ್ಲೇಯರ್ ಎಂದಾಗ ಸುರೇಶ್ ರೈನಾ (Suresh Raina) ಹೆಸರಿಲ್ಲದೆ ಮುಂದುವರಿಯುವುದು ಸಾಧ್ಯವಿಲ್ಲ. 2008ರಿಂದಲೂ ಐಪಿಎಲ್ ನ ಭಾಗವಾಗಿರುವ ರೈನಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿ ಇದ್ದವರು. ಐಪಿಎಲ್ ನಲ್ಲಿ 205 ಪಂದ್ಯಗಳಿಂದ 5528 ರನ್ ಬಾರಿಸಿರುವ 35 ವರ್ಷದ ರೈನಾ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ (International Cricket) ನಿವೃತ್ತರಾಗಿದ್ದಾರೆ. ಆದರೆ, ಐಪಿಎಲ್ ನಲ್ಲಿ ಕೆಲ ವರ್ಷಗಳಿಂದ ರನ್ ಗಾಗಿ ಪರದಾಡುತ್ತಿದ್ದಾರೆ. ಹಾಗೇನಾದರೂ ಸಿಎಸ್ ಕೆ (CSK) ತಂಡ ಇವರನ್ನು ಮರಳಿ ಖರೀದಿಸದೇ ಇದ್ದಲ್ಲಿ ಅನ್ ಸೋಲ್ಡ್ (Unsold)ಆಗುವ ಸಾಧ್ಯತೆ ಹೆಚ್ಚಿದೆ.

IPL Auction 2022: ಈ ಐದು ಆರಂಭಿಕರು ಮೆಗಾ ಹರಾಜಿನಲ್ಲಿ ಕೋಟಿ-ಕೋಟಿ ಬಾಚಿಕೊಳ್ಳಬಹುದು..!
ಕ್ರಿಸ್ ಗೇಲ್

ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ (Chris Gayle) ತಮ್ಮ ಕ್ರಿಕೆಟ್ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. 2022ರ ಐಪಿಎಲ್ ಹರಾಜಿಗೆ ಅನ್ ಸೋಲ್ಡ್ ಆಗುವ ಲಿಸ್ಟ್ ನಲ್ಲಿದ್ದಾರೆ. 142 ಪಂದ್ಯಗಳಿಂದ 4965 ರನ್ ಬಾರಿಸಿರುವ ಗೇಲ್, 2018ರ ಐಪಿಎಲ್ ಹರಾಜಿನಲ್ಲಿಯೇ ಬಹುತೇಕವಾಗಿ ಅನ್ ಸೋಲ್ಡ್ ಆಗಿದ್ದರು. ಆದರೆ, ಕೊನೇ ಹಂತದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ಇವರಿಗೆ ಬಿಡ್ ಮಾಡಿತ್ತು. ಆದರೆ, ಈ ಬಾರಿ ಈ ಲಕ್ಷಣಗಳು ಕಾಣುತ್ತಿಲ್ಲ.

ಅಜಿಂಕ್ಯ ರಹಾನೆ
ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ(Ajinkya Rahane), ಡೆಲ್ಲಿ ಕ್ಯಾಪಿಟಲ್ಸ್ (Delhi Capitals)ಪರವಾಗಿ ಕಳೆದ ಎರಡು ವರ್ಷದಲ್ಲಿ ಕೇವಲ 11 ಪಂದ್ಯವಾಡಿದ್ದಾರೆ. ಈ ಪಂದ್ಯಗಳಲ್ಲೂ ಇವರ ನಿರ್ವಹಣೆ ನಿರಾಶಾದಾಯಕವಾಗಿದೆ. 2008ರಿಂದಲೂ ಐಪಿಎಲ್ ನ ಭಾಗವಾಗಿರುವ ರಹಾನೆ ಇತ್ತೀಚೆಗೆ ಕಳಪೆ ಫಾರ್ಮ್ ನಲ್ಲಿದ್ದು ಟೆಸ್ಟ್ ತಂಡದ ಉಪನಾಯಕ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.


RCB Biggest Mistakes: ಈ ಮೂವರು ಆಟಗಾರರನ್ನು ಕೈಬಿಟ್ಟು ಯಡವಟ್ಟು ಮಾಡಿಕೊಂಡ ಆರ್‌ಸಿಬಿ..!
ದಿನೇಶ್ ಕಾರ್ತಿಕ್

ಐಪಿಎಲ್ ನಲ್ಲಿ ಈಗಾಗಲೇ 200ಕ್ಕೂ ಅಧಿಕ ಪಂದ್ಯವಾಡಿರುವ ಕೆಲವೇ ಪ್ಲೇಯರ್ ಗಳಲ್ಲಿ ಒಬ್ಬರು ದಿನೇಶ್ ಕಾರ್ತಿಕ್ (Dinesh Karthik ). 2018 ಹಾಗೂ 2019ರಲ್ಲಿ ಕೆಕೆಆರ್ (KKR) ತಂಡವನ್ನು ನಾಯಕರಾಗಿ ಮುನ್ನಡೆಸಿದ್ದ ದಿನೇಶ್ ಕಾರ್ತಿಕ್, 2020ರ ಋತುವಿನ ಮಧ್ಯದಲ್ಲೇ ನಾಯಕತ್ವನ್ನು ಮಾರ್ಗನ್ ಗೆ (Eoin Morgan) ಬಿಟ್ಟುಕೊಟ್ಟಿದ್ದರು. ಇದಕ್ಕೆ ಕಾರಣ ಕಳಪೆ ಫಾರ್ಮ್. ಕಳೆದ ಎರಡು ಋತುವಿನಿಂದ ಆಡಿದ 14 ಹಾಗೂ 17 ಪಂದ್ಯಗಳಿಂದ ಕ್ರಮವಾಗಿ 169 ಹಾಗೂ 223 ರನ್ ಬಾರಿಸಿದ್ದಾರೆ. ಈ ಬಾರಿ ಕೆಕೆಆರ್ ತಂಡ ಇವರನ್ನು ಹರಾಜಿಗೆ ಬಿಟ್ಟಿದ್ದು ಬೇರೆ ತಂಡ ಇವರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ

ಪೀಯುಷ್ ಚಾವ್ಲಾ
ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಬೌಲರ್ ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಪೀಯುಷ್ ಚಾವ್ಲಾಗೆ (Piyush Chawla ) ಕೂಡ ಈ ಬಾರಿ ಬಿಡ್ ಮಾಡುವ ಸಾಧ್ಯತೆ ಕಡಿಮೆ. ಐಪಿಎಲ್ ನಲ್ಲಿ ಆಡಿದ 165 ಪಂದ್ಯಗಳಿಂದ 157 ವಿಕೆಟ್ ಸಾಧನೆ ಮಾಡಿದ್ದಾರೆ. 2012 ಹಾಗೂ 2014ರಲ್ಲಿ ಕೆಕೆಆರ್ ತಂಡದದ ಐಪಿಎಲ್ ನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಪೀಯುಷ್, 2021ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಆಡಿದ ಒಂದು ಪಂದ್ಯದಿಂದ ಕೇವಲ 1 ವಿಕೆಟ್ ಸಾಧನೆ ಮಾಡಿದ್ದರು. ಕಳೆದ 2 ವರ್ಷಗಳ ಐಪಿಎಲ್ ನಿಂದ ಕೇವಲ 8 ಪಂದ್ಯವಾಡಿರುವ ಪೀಯುಷ್, 7 ವಿಕೆಟ್ ಉರುಳಿಸಿದ್ದಾರೆ.

Follow Us:
Download App:
  • android
  • ios