ಬೆಂಗಳೂರು(ನ.19): ಐಪಿಎಲ್ ಟೂರ್ನಿ ಆರಂಭದಿಂದ ಇಲ್ಲೀವರೆಗೂ ತಂಡ ಬದಲಾಯಿಸಿದ ಆಟಾಗಾರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ಪರ ಮಾತ್ರ ಆಡಿ ವಿದಾಯ ಹೇಳಿದ್ದರು. ಆದರೆ ಬಹುತೇಕ ಎಲ್ಲಾ ಕ್ರಿಕೆಟಿಗರು ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಬಿಕರಿಯಾಗಿದ್ದಾರೆ. ಆದರೆ ಕೆಲವು ಗರಿಷ್ಠ ಬಾರಿ ತಂಡ ಬದಲಾಯಿಸಿದ್ದಾರೆ.

ಇದನ್ನೂ ಓದಿ: IPL 2020: ಹರಾಜಿಗೂ ಮುನ್ನ RCB ಮಾಡಿದ ಅತಿದೊಡ್ಡ ಎಡವಟ್ಟುಗಳಿವು..!

1) ಆರೋನ್ ಫಿಂಚ್:
ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ಚು ಬಾರಿ ತಂಡ ಬದಲಾಯಿಸಿದ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಆ್ಯರೋನ್ ಫಿಂಚ್ ಮೊದಲ ಸ್ಥಾನದಲ್ಲಿದ್ದಾರೆ. 2010ರಲ್ಲಿ ಐಪಿಎಲ್‌ಗೆ ಕಾಲಿಟ್ಟ ಫಿಂಚ್ 10 ವರ್ಷದಲ್ಲಿ 7 ತಂಡದಲ್ಲಿ ಆಡಿದ್ದಾರೆ. 

ಫಿಂಚ್ ಪ್ರತಿನಿಧಿಸಿದ ತಂಡ:
ರಾಜಸ್ಥಾನ ರಾಯಲ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಲಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್

ಇದನ್ನೂ ಓದಿ: IPL 2020: 9 ಕ್ರಿಕೆಟಿಗರಿಗೆ ಶಾಕ್; ನಿಮ್ಮ ಸೇವೆ ಸಾಕು ಎಂದ ಡೆಲ್ಲಿ ಕ್ಯಾಪಿಟಲ್ಸ್!

2) ದಿನೇಶ್ ಕಾರ್ತಿಕ್:
ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಗರಿಷ್ಠ ತಂಡದಲ್ಲಿ ಆಡಿದ  ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಕಾರ್ತಿಕ್ ಒಟ್ಟು  6 ಐಪಿಎಲ್ ತಂಡದಲ್ಲಿ ಆಡಿದ್ದಾರೆ. 

ಕಾರ್ತಿಕ್ ಪ್ರತಿನಿಧಿಸಿದ ತಂಡ:
ಡೆಲ್ಲಿ ಡೇರ್‌ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತಾ ನೈಟ್ ರೈಡರ್ಸ್

3) ತಿಸರಾ ಪರೇರಾ
ಶ್ರೀಲಂಕಾ ಆಲ್ರೌಂಡರ್ ತಿಸರಾ ಪರೇರಾ, 2010ರಲ್ಲಿ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದರು. 2010ರಿಂದದ 2016ರ ವರೆಗಿನ 7 ವರ್ಷದ ಅವದಿಯಲ್ಲಿ 6 ತಂಡದಲ್ಲಿ ಆಡಿದ್ದಾರೆ.

ಪರೇರಾ ಪ್ರತಿನಿಧಿಸಿದ ತಂಡ:
ಚೆನ್ನೈ ಸೂಪರ್ ಕಿಂಗ್ಸ್, ಕೊಚ್ಚಿ ಟಸ್ಕರ್ಸ್ ಕೇರಳ, ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವೆನ್ ಪಂಜಾಬ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್

4) ಪಾರ್ಥೀವ್ ಪಟೇಲ್:
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥೀವ್ ಪಟೇಲ್ ಮೊದಲ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ವಿಶೇಷ ಅಂದರೆ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಪಟೇಲ್, ಬಳಿಕ ಮುಂಬೈ ಸೇರಿಕೊಂಡಿದ್ದರು. 2018ರಲ್ಲಿ ಮತ್ತೆ ಆರ್‌ಸಿಬಿ ಸೇರಿಕೊಂಡರು. ಈ  ಮೂಲಕ 6 ತಂಡಗಳಲ್ಲಿ ಪಾರ್ಥೀವ್ ಪಟೇಲ್ ಆಡಿದ್ದಾರೆ.

ಪಾರ್ಥೀವ್ ಪ್ರತಿನಿಧಿಸಿದ ತಂಡ:
ಚೆನ್ನೈ ಸೂಪರ್ ಕಿಂಗ್ಸ್, ಕೊಚ್ಚಿ ಟಸ್ಕರ್ಸ್, ಡೆಕ್ಕನ್ ಚಾರ್ಜಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು(2 ಬಾರಿ)