ತಿರುವನಂತಪುರಂ(ನ.22): ಟೀಂ ಇಂಡಿಯಾ ಸದ್ಯ ಐತಿಹಾಸಿಕ ಪಿಂಕ್ ಬಾಲ್ ಪಂದ್ಯದಲ್ಲಿ ಬ್ಯುಸಿಯಾಗಿದೆ. ಬಾಂಗ್ಲಾದೇಶ ವಿರುದ್ದದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದದ ದ್ವಿಪಕ್ಷೀಯ ಸರಣಿ ಆಡಲಿದೆ. ಆದರೆ 2ನೇ ಟಿ20 ಪಂದ್ಯಕ್ಕೆ ಪ್ರತಿಭಟನೆ ಬಿಸಿ ಹೆಚ್ಚಾಗಿದೆ. ಫ್ಯಾನ್ಸ್ ಬೇಡಿಕೆ ಈಡೇರಿಸಲು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: 

3 ಟಿ20 ಹಾಗೂ ಏಕದಿನ ಪಂದ್ಯದ ಸರಣಿಗಾಗಿ ಆಯ್ಕೆ ಸಮಿತಿ, ನ.21ರಂದು ತಂಡದ  ಆಯ್ಕೆ ನಡೆಸಿತ್ತು. ಬಳಿಕ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಗೆ ತಂಡ ಪ್ರಕಟಿಸಿತ್ತು. ತಂಡ ನೋಡಿದ ಕೇರಳ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಬಾಂಗ್ಲಾ ವಿರುದ್ದದ ಟಿ20 ಸರಣಿಗೆ ಆಯ್ಕೆಯಾಗಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಕೈಬಿಡಲಾಗಿದೆ. ಇದು ಕೇರಳ ಅಭಿಮಾನಿಗಳ ಕಣ್ಣು ಕಂಪಾಗಿಸಿದೆ. ಇಷ್ಟೇ ಅಲ್ಲ ಭಾರತ ಹಾಗೂ ವಿಂಡೀಸ್ ನಡುವಿನ 2ನೇ ಟಿ20 ಪಂದ್ಯ ಬ್ಯಾನ್ ಮಾಡುವಂತೆ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: 

ಸಂಜು ಸಾಮ್ಸನ್ ಇಲ್ಲದೆ ತಿರುವನಂತಪುರಂನಲ್ಲಿ ಆಯೋಜಿಸಲಾಗಿರುವ 2ನೇ ಟಿ20 ಪಂದ್ಯ ಹೇಗೆ ನಡೆಯುತ್ತೆ? ಸಂಜು ಇಲ್ಲದ ಪಂದ್ಯ ನಮಗೆ ಬೇಡ ಎಂದಿದ್ದಾರೆ. 2ನೇ ಟಿ20 ಪಂದ್ಯವನ್ನು ಬಹಿಷ್ಕರಿಸುವುದಾಗಿ ಅಭಿಮಾನಿಗಳು ಎಚ್ಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 2ನೇ ಪಂದ್ಯಕ್ಕೆ ಬಹಿಷ್ಕಾರ ಅಭಿಯಾನ ಆರಂಭಿಸಿದ್ದಾರೆ.