Asianet Suvarna News Asianet Suvarna News

ಖ್ಯಾತ ಕ್ರಿಕೆಟ್ ಅಂಕಿ-ಅಂಶ ತಜ್ಞ ಎಚ್.ಆರ್. ಗೋಪಾಲಕೃಷ್ಣ 75ರ ಸಂಭ್ರಮ

5 ದಶಕಗಳ ಕಾಲ ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್‌.ಆರ್‌.ಗೋಪಾಲಕೃಷ್ಣ ಇಂದು 75ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Famous Cricket Statistician Gopala Krishna Ramaswamy turns 75 Today
Author
Bengaluru, First Published Aug 12, 2020, 11:45 AM IST

ಬೆಂಗಳೂರು(ಆ.12): ಕ್ರಿಕೆಟ್‌ನಲ್ಲಿ ಆಟಗಾರರ ಸಾಧನೆಯನ್ನು ಅಳೆಯುವುದೇ ಅವರ ಅಂಕಿ-ಅಂಶಗಳ ಆಧಾರದ ಮೇಲೆ. ಆಟಗಾರರಿಗೆ ತಮ್ಮ ಅಂಕಿ-ಅಂಶ, ದಾಖಲೆಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ. ಕಂಪ್ಯೂಟರ್‌, ಮೊಬೈಲ್‌ ಆ್ಯಪ್‌ಗಳು ಇತ್ತೀಚಿನ ವರ್ಷಗಳಲ್ಲಿ ಪರಿಚಿತಗೊಂಡಿದ್ದು, ದಶಕಗಳಿಂದ ಅಂಕಿ-ಅಂಶ, ದಾಖಲೆಗಳನ್ನು ಸಂಗ್ರಹಿಸಿ ಕ್ರಿಕೆಟಿಗರ ಸಾಧನೆಗಳನ್ನು ಅಭಿಮಾನಿಗಳಿಗೆ ಪರಿಚಯಿಸಿದ ಕರ್ನಾಟಕದ ಹಿರಿಯ ಸಂಖ್ಯಾಶಾಸ್ತ್ರಜ್ಞರಲ್ಲಿ ಎಚ್‌.ಆರ್‌.ಗೋಪಾಲಕೃಷ್ಣ ಪ್ರಮುಖರು. ಆ.12, 1946ರಂದು ಜನಿಸಿದ ಅವರು, ಬುಧವಾರ 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 5 ದಶಕಗಳಿಂದ ಕ್ರಿಕೆಟ್‌ಗೆ ಸೇವೆ ಸಲ್ಲಿಸಿರುವ ಅವರಲ್ಲಿ ಉತ್ಸಾಹ ಇವತ್ತಿಗೂ ಕಡಿಮೆಯಾಗಿಲ್ಲ.

ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್‌ನತ್ತ ಆಕರ್ಷಿತರಾದ ಗೋಪಾಲಕೃಷ್ಣ ಅವರು ಶಾಲಾ, ಕಾಲೇಜು ದಿನಗಳಲ್ಲಿ ಒಬ್ಬ ಕ್ರಿಕೆಟಿಗನಾಗಿ, ಬಳಿಕ ಅಂಪೈರ್‌ ಆಗಿ ನಂತರ ಸ್ಕೋರರ್‌ ವೃತ್ತಿ ಆಯ್ದುಕೊಂಡು, ಸಂಖ್ಯಾಶಾಸ್ತ್ರಜ್ಞರಾಗಿ, ವೀಕ್ಷಕ ವಿವರಣೆಗಾರರಾಗಿ, ಕ್ರಿಕೆಟ್‌ ತಜ್ಞರಾಗಿ ಕ್ರಿಕೆಟ್‌ನಲ್ಲಿ ಎಲ್ಲಾ ರೀತಿಯ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಹೇಗೂ ಟೀಂ ಇಂಡಿಯಾ ಗೆಲ್ಲಲ್ಲ, ನಂಗೆ ವಿಕೆಟ್ ಒಪ್ಪಿಸು ಎಂದಿದ್ದರಂತೆ ಮುರುಳಿ..!

ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡರೂ, ಗೋಪಾಲಕೃಷ್ಣ ಒಬ್ಬ ಸ್ಕೋರರ್‌ ಹಾಗೂ ಸಂಖ್ಯಾಶಾಸ್ತ್ರಜ್ಞರಾಗಿ ಹೆಚ್ಚು ಜನಪ್ರಿಯತೆ ಸಂಪಾದಿಸಿದರು. 1975-76ರ ಸಮಯದಲ್ಲಿ ಕರ್ನಾಟಕದ ಮಾಜಿ ಆಟಗಾರ, ಬಿ.ರಘುನಾಥ್‌ ಅವರ ಸಲಹೆಯಂತೆ ಕ್ರಿಕೆಟ್‌ ಸಂಖ್ಯಾಶಾಸ್ತ್ರಜ್ಞರಾದ ಗೋಪಾಲಕೃಷ್ಣ, ಅನೇಕ ವಿಶ್ವ ದಾಖಲೆಗಳನ್ನು ಹುಡುಕಿ, ಕ್ರಿಕೆಟ್‌ ಜಗತ್ತಿನ ಮುಂದಿಟ್ಟಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ವಲಯದಲ್ಲಿ ಇವರನ್ನು ಬಲ್ಲದವರೇ ಇಲ್ಲ. ಕ್ರಿಕೆಟ್‌ಗೆ ಅವರ ನಿಸ್ವಾರ್ಥ ಸೇವೆ ಬಗ್ಗೆ ದಿಗ್ಗಜ ಕ್ರಿಕೆಟಿಗರಾದ ಜಿ.ಆರ್‌.ವಿಶ್ವನಾಥ್‌, ಸುನಿಲ್‌ ಗವಾಸ್ಕರ್‌, ಇಎಎಸ್‌ ಪ್ರಸನ್ನ, ಬಿ.ಎಸ್‌.ಚಂದ್ರಶೇಖರ್‌, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌ ಸೇರಿದಂತೆ ಇಂದಿನ ಯುವ ಕ್ರಿಕೆಟಿಗರವರೆಗೂ ಪ್ರತಿಯೊಬ್ಬರೂ ಹಲವು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 75ನೇ ವಸಂತಕ್ಕೆ ಕಾಲಿಟ್ಟಿರುವ ಅವರಿಗೆ ಕ್ರಿಕೆಟಿಗರು, ಸ್ಕೋರರ್‌, ಅಂಪೈರ್‌ಗಳು ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.

ಗೋಪಾಲಕೃಷ್ಣ ಅವರ ಸಾಧನೆ

* ಸ್ಕೋರರ್‌, ಸಂಖ್ಯಾಶಾಸ್ತ್ರಜ್ಞರಾಗಿ 100ಕ್ಕೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೆಲಸ.

* ಹಲವು ವರ್ಷಗಳ ಕಾಲ ಆಕಾಶವಾಣಿ/ದೂರದರ್ಶನದಲ್ಲಿ ಸ್ಕೋರರ್‌, ಸಂಖ್ಯಾಶಾಸ್ತ್ರಜ್ಞರಾಗಿ ಕಾರ್ಯನಿರ್ವಹಣೆ.

* ಬಿಸಿಸಿಐ ಸಂಖ್ಯಾಶಾಸ್ತ್ರ ಜ್ಞರ ಸಮಿತಿಯಲ್ಲಿ ಕಾರ್ಯನಿರ್ವಹಣೆ.

*1986-87ರಲ್ಲಿ ಹೊರಬಂದ ಗವಾಸ್ಕರ್‌ರ ಆತ್ಮಕಥೆಗೆ ಅಂಕಿ-ಅಂಶಗಳ ನೆರವು.

* 1989ರಲ್ಲಿ ಕರ್ನಾಟಕ ಸರ್ಕಾರದಿಂದ ದಸರಾ ಕ್ರೀಡಾ ಪ್ರಶಸ್ತಿಗೆ ಪಾತ್ರ.
 

Follow Us:
Download App:
  • android
  • ios