ಮೊದಲ ರಣಜಿ ಪಂದ್ಯದಲ್ಲಿಯೇ ಸೆಂಚುರಿ ಸಿಡಿಸಿ, ದಾಖಲೆ ಬರೆದ ಬೆಂಗಳೂರು ಬಿಆರ್‌ ಶರತ್‌ ತಮ್ಮ ಕ್ರಿಕೆಟ್‌  ಜರ್ನಿ ಬಗ್ಗೆ ಸುವರ್ಣ ನ್ಯೂಸ್‌. ಕಾಂ ಜೊತೆ ಮಾತನಾಡಿದ್ದಾರೆ.

ವೈಷ್ಣವಿ ಚಂದ್ರಶೇಖರ್

- ಕೊರೋನಾದಿಂದ ಎಲ್ಲಿರಗೂ ಸಮಸ್ಯೆಯಾಗಿದೆ. ನೀವೊಬ್ಬ ಯುವ ಕ್ರಿಕೆಟಿಗನಾಗಿ ಯಾವ ರೀತಿ ಸಮಸ್ಯೆ ಎದುರಿಸಿದ್ರಿ? ನಿಮ್ಮ ಕರಿಯರ್ ಮೇಲೆ ಹೇಗೆ ಪರಿಣಾಮ ಬೀರಿದೆ?

ವೈಯಕ್ತಿಕವಾಗಿ ಕೊರೋನಾದಿಂದ ಯಾವುದೇ ಸಮಸ್ಯೆಗಳು ಹೆಚ್ಚಾಗಿ ಎದುರಾಗಿಲ್ಲ. ಮುಖ್ಯವಾದದ್ದು ಫಿಟ್ನೆಸ್‌. ಜಿಮ್‌ ಎಲ್ಲಾ ಕ್ಲೋಸ್‌ ಆಗಿದ್ದರಿಂದ ನಾವು ಫಿಟ್‌ ಆಗಿರಲು ಸ್ವಲ್ಪ ಕಷ್ಟವಾಯ್ತು. ಒಂದೆರಡು ವಾರ ಪ್ರಾಕ್ಟೀಸ್‌ ಮಾಡಿದ್ರೆ ಸ್ಕಿಲ್ ಮೇಲೆ ಹಿಡಿತ ಸಿಗುತ್ತದೆ.

- ಸದ್ಯ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ, ಧೋನಿ ನಿಮ್ಮ ಕರಿಯರ್‌ ಮೇಲೆ ಹೇಗೆ ಪ್ರಭಾವ ಬೀರಿದ್ದಾರೆ? ಅವರ ಬಗ್ಗೆ ಏನು ಹೇಳಲು ಇಚ್ಛಿಸುತ್ತೀರಿ?

ಬಾಲ್ಯದಿಂದಲೂ ಮಹೇಂದ್ರ ಸಿಂಗ್ ಧೋನಿ ನನ್ನ ಸ್ಫೂರ್ತಿ. ಕ್ರಿಕೆಟ್‌ ಬಗ್ಗೆ ಚಿಂತಿಸುವುದು, ಹೇಗೆ ಮ್ಯಾಚ್‌ ಫಿನಿಷ್ ಮಾಡುವುದು, ಹೇಗೆಲ್ಲಾ ಪ್ಲಾನ್ ಮಾಡಬೇಕು...ಎಂಬುದನ್ನು ಧೋನಿ ಆಡುವುದನ್ನು ನೋಡಿ ಕಲಿತಿದ್ದೇನೆ.

- ಧೋನಿ ಭೇಟಿಯಾಗುವ ಅಥವಾ ಮಾತನಾಡುವ ಅವಕಾಶ ಸಿಕ್ಕಿತ್ತಾ? 

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ಇಂಡಿಯಾ ಮ್ಯಾಚ್‌ ನಡೆಯುತ್ತಿತ್ತು. ಆಗ ಭೇಟಿ ಮಾಡಿದ್ದೆ. ಅದು ನಾನು ಚಿಕ್ಕವನಿದ್ದಾಗ ಕ್ರಿಕೆಟ್‌ಗೆ ಕಾಲಿಟ್ಟ ನಂತರ ಮಾತನಾಡಿಸುವ ಅವಕಾಶ ಸಿಕ್ಕಿಲ್ಲ.

- ಕರ್ನಾಟಕ ರಣಜಿ ತಂಡದ ಡೆಬ್ಯೂ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದೀರಿ. ಮೊದಲ ಪಂದ್ಯದ ಒತ್ತಡ ನಿಭಾಯಿಸಿಕೊಂಡಿದ್ದು ಹೇಗೆ?

ಯಾವುದೇ ಒತ್ತಡ ಇರಲಿಲ್ಲ. ನಾನು ಮ್ಯಾಚ್‌ ಗೆಲ್ಲಬೇಕು, ಎಂಬುದನ್ನು ಮಾತ್ರ ಯೋಚಿಸುತ್ತಿದ್ದೆ. ಸೆಂಚುರಿ ಬಾರಿಸಿದ ಮೇಲೆಯೇ ನನಗೆ ಗೊತ್ತಾಯಿತು ಅದು ರೆಕಾರ್ಡ್ ಎಂದು. ನನ್ನ ಜೀವನದ ಸ್ಪೆಷಲ್‌ ಕ್ಷಣ ಇದಾಗಿದ್ದು, ಪದಗಳಲ್ಲಿ ವರ್ಣಿಸುವುದು ಕಷ್ಟ.

- KPL ಟೂರ್ನಿ ಅನುಭವ ಹೇಗಿತ್ತು? 

ಕೆಪಿಎಲ್‌ನಿಂದ ನನಗೊಂದು ಒಳ್ಳೆ ಎಕ್ಸ್‌ಪೋಷರ್‌ ಸಿಕ್ಕಿದೆ. ಚಿಕ್ಕ ವಯಸ್ಸಿಗೇ ಕ್ಯಾಮೆರಾ, ಆಟದ ಪ್ರೆಷರ್‌ ಎಲ್ಲಾ ಮ್ಯಾನೇಜ್‌ ಮಾಡುವುದು ದೊಡ್ಡ ವಿಚಾರ. ಆ ಅವಕಾಶ ನನಗೆ ಸಿಕ್ಕಿದ್ದು ನನಗೆ ತುಂಬಾ ಖುಷಿ.

- IPL ಟೂರ್ನಿ ಆಡಬೇಕು ಅನ್ನೋದು ಭಾರತ ಮಾತ್ರವಲ್ಲ, ವಿಶ್ವದ ಬಹುತೇಕ ಎಲ್ಲಾ ಕ್ರಿಕೆಟಿಗರ ಕನಸು, ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ, ಅಭ್ಯಾಸ ಯಾವ ರೀತಿ ನಡೆಯುತ್ತಿದೆ?

ಐಪಿಲ್ ಆಡುವುದು ಪ್ರತಿಯೊಬ್ಬ ಕ್ರಿಕೆಟರ್‌ ಡ್ರಿಮ್. ನಾನು ನಮ್ಮ ದೇಶಕ್ಕೆ ಹಾಗೂ ಐಪಿಲ್‌ಗೆ ಆಡಬೇಕು ಎಂದು ಎಲ್ಲಾ ತರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವೆ. ಅದೇ ಆಡಬೇಕು, ಇದೇ ಮಾಡಬೇಕು ಅಂತೇನೂ ಇಲ್ಲ. ನಮ್ಮ ಭಾರತವನ್ನು ಪ್ರತಿನಿಧಿಸಬೇಕು ಎನ್ನುವುದಷ್ಟೇ ನನ್ನ ಗುರಿ.

- ಪೋಷಕರು, ಆಪ್ತರ ಬೆಂಬಲ ಸಹಕಾರ, ಹೇಗಿದೆ?

ನನ್ನ ತಂದೆ ಬಸವನಗುಡಿ ಕ್ರಿಕೆಟ್‌ ಅಕಾಡೆಮಿಯಲ್ಲಿ ಕ್ರಿಕೆಟ್‌ ಕೋಚ್‌. ಚಿಕ್ಕವಯಸ್ಸಿನಿಂದಲೂ ನಾನು ಅವರ ಜೊತೆ ಅನೇಕ ಕ್ರಿಕೆಟ್‌ ಕ್ಯಾಂಪ್‌ಗೆ ಹೋಗುತ್ತಿದ್ದೆ. ನನ್ನ ತಂದೆ-ತಾಯಿ ನನಗೆ ತುಂಬಾ ಸಪೋರ್ಟ್‌ ಮಾಡಿದ್ದಾರೆ.

- ಶಾಲಾ ಕಾಲೇಜು ಮಕ್ಕಳು, ವಿದ್ಯಾರ್ಥಿಗಳು ಕ್ರಿಕೆಟನ್ನು ವೃತ್ತಿಯಾಗಿ ಸ್ವೀಕರಿಸುತ್ತಿದ್ದಾರೆ. ಪ್ರೊಫೆಷನಲ್ ಕ್ರಿಕೆಟ್‌ನತ್ತ ಬರುವ ಮಕ್ಕಳಿಗೆ ನಿಮ್ಮ ಸಲಹೆ, ಸಂದೇಶ ಏನು?

ನಿಮ್ಮ ಡ್ರಿಮ್‌ ಕಡೆ ನಿಮ್ಮ ಗುರಿ ಇರಲಿ. ಅದನ್ನು ಎಂದಿಗೂ ಅರ್ಧದಲ್ಲಿ ಕೈ ಬಿಡಬೇಡಿ. ಸರಿಯಾದ ದಾರಿ ಹುಡುಕಿಕೊಂಡರೆ, ಖಂಡಿತವಾಗಿಯೂ ಜೀವನದಲ್ಲಿ ಸಾಧಿಸಬಹುದು.

- ನಿಮ್ಮ ರೋಲ್ ಮಾಡೆಲ್ ಕ್ರಿಕೆಟರ್?

ರಾಹುಲ್‌ ಡ್ರಾವಿಡ್

- ನಿಮ್ಮ ಫೇವರಿಟ್ ಗ್ರೌಂಡ್

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಮ್.

- ರಣಜಿ ತಂಡದಲ್ಲಿ ಒಬ್ಬರಿಗೆ Prank call ಮಾಡುವುದಾದರೆ ಯಾರಿಗೆ ಮಾಡುತ್ತೀರಿ?

ಪ್ರಸಿದ್ಧ ಕೃಷ್ಣ ಅವರಿಗೆ ಪ್ರ್ಯಾಂಕ್ ಕಾಲ್ ಮಾಡುವೆ.

- ಫೇವರಿಟ್ ಫುಡ್?

ಬಿರಿಯಾನಿ

- ನೀವು ನೋಡಿದ, ಮರೆಯಲಾಗದ ಟೀಂ ಇಂಡಿಯಾದ ಪಂದ್ಯ ಅಥವಾ ಕ್ಷಣ?

2011 ಟೀಂ ಇಂಡಿಯಾ ವಿಶ್ವ ಕಪ್ ಪಂದ್ಯ.