Asianet Suvarna News Asianet Suvarna News

ಇಂದು ಆಸೀಸ್‌- ಇಂಗ್ಲೆಂಡ್‌ ನಿರ್ಣಾಯಕ ಏಕದಿನ ಕದನ

ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮ್ಯಾಂಚೆಸ್ಟರ್‌ನ ಓಲ್ಡ್ ಟ್ರ್ಯಾಫೋರ್ಡ್ ಮೈದಾನ ಆತಿಥ್ಯ ವಹಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

England vs Australia 3rd ODI in Manchester Match Preview
Author
Manchester, First Published Sep 16, 2020, 12:37 PM IST

ಮ್ಯಾಂಚೆಸ್ಟರ್(ಸೆ.16)‌: ಆಸ್ಪ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವಣ 3ನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯ ಬುಧವಾರ ನಡೆಯಲಿದ್ದು, ಸರಣಿ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ.

3 ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯಗಳನ್ನು ಗೆದ್ದಿದ್ದು ಸಮಬಲ ಸಾಧಿಸಿದೆ. ಹೀಗಾಗಿ 3ನೇ ಹಾಗೂ ಕೊನೆಯ ಏಕದಿನ ಪಂದ್ಯ ನಿರ್ಣಾಯಕವಾಗಿದೆ. ಮೊದಲ ಏಕದಿನ ಪಂದ್ಯವನ್ನು ಆಸ್ಪ್ರೇಲಿಯಾ 5 ವಿಕೆಟ್‌ಗಳಿಂದ ಗೆದ್ದಿದ್ದರೆ, 2ನೇ ಪಂದ್ಯವನ್ನು ಇಂಗ್ಲೆಂಡ್‌ 24 ರನ್‌ಗಳಿಂದ ಜಯಿಸಿತ್ತು. 

ಆರ್ಚರ್ ಮಿಂಚು: ಆಸೀಸ್‌ಗೆ ಆತಿಥೇಯರ ತಿರುಗೇಟು..!

ಇದಕ್ಕೂ ಮುನ್ನ ನಡೆದಿದ್ದ 3 ಟಿ20 ಪಂದ್ಯಗಳ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್‌ 2-1ರಲ್ಲಿ ವಶಪಡಿಸಿಕೊಂಡಿತ್ತು. ಇದೀಗ ಏಕದಿನ ಸರಣಿಯನ್ನು ಗೆಲ್ಲುವ ಉತ್ಸಾಹದೊಂದಿಗೆ ಕಣಕ್ಕಿಳಿಯಲು ಇಯಾನ್‌ ಮಾರ್ಗನ್‌ ಪಡೆ ಸಜ್ಜಾಗಿದೆ.

100 ಪಂದ್ಯಗೆದ್ದ ಇಂಗ್ಲೆಂಡ್‌ನ ಮೊದಲ ನಾಯಕ ಮಾರ್ಗನ್‌

ಲಂಡನ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ಕ್ರಿಕೆಟಿಗ ಇಯಾನ್‌ ಮಾರ್ಗನ್‌ ಮತ್ತೊಂದು ಸಾಧನೆ ಮಾಡಿದ್ದಾರೆ. 100 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್‌ನ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಮಾರ್ಗನ್‌ ಪಾತ್ರರಾಗಿದ್ದಾರೆ. 

ಆಸ್ಪ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯ ಗೆಲ್ಲುವ ಮೂಲಕ ಮಾರ್ಗನ್‌ ಈ ಸಾಧನೆಮಾಡಿದರು. ಅತೀ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯ ಗೆದ್ದ ನಾಯಕರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್‌ (220), ಎಂ.ಎಸ್‌. ಧೋನಿ (178), ಗ್ರೇಮ್‌ ಸ್ಮಿತ್‌ (163), ಆಲನ್‌ ಬಾರ್ಡರ್‌ (139) ಅಗ್ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
 

Follow Us:
Download App:
  • android
  • ios