ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್ಸ್‌ಗೆ ಚರ್ಮದ ಕ್ಯಾನ್ಸರ್ ದೃಢಕಳೆದ ವರ್ಷ 2 ಬಾರಿ ಎದೆಯ ಭಾಗ​ದ ಚರ್ಮದ ಶಸ್ತ್ರ​ಚಿ​ಕಿ​ತ್ಸೆಗೆ ಒಳಗಾಗಿದ್ದ ಬಿಲ್ಲಿಂಗ್ಸ್ಬಿಸಿಲಿನ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಬಿಲ್ಲಿಂಗ್ಸ್‌

ಲಂಡ​ನ್‌(ಮೇ.10): ಇಂಗ್ಲೆಂಡ್‌ನ ವಿಕೆ​ಟ್‌​ಕೀ​ಪರ್‌ ಬ್ಯಾಟರ್‌ ಸ್ಯಾಮ್‌ ಬಿಲ್ಲಿಂಗ್‌ ತಾವು ಚರ್ಮದ ಕ್ಯಾನ್ಸ​ರ್‌​ನಿಂದ ಬಳ​ಲು​ತ್ತಿ​ರು​ವು​ದಾಗಿ ಬಹಿ​ರಂಗ​ಪ​ಡಿ​ಸಿ​ದ್ದಾರೆ. ಈ ಬಗ್ಗೆ ಅವರು ಮಂಗಳವಾರ ಸಾಮಾ​ಜಿಕ ತಾಣ​ಗ​ಳಲ್ಲಿ ಮಾಹಿತಿ ನೀಡಿದ್ದು, ಕಳೆದ ವರ್ಷ 2 ಬಾರಿ ಎದೆಯ ಭಾಗ​ದ ಚರ್ಮದ ಶಸ್ತ್ರ​ಚಿ​ಕಿ​ತ್ಸೆಗೆ ಒಳ​ಗಾ​ಗಿ​ದ್ದಾಗಿ ತಿಳಿ​ಸಿ​ದ್ದಾರೆ. ಅಲ್ಲದೇ ‘ಬಿಸಿ​ಲಿ​ನಲ್ಲಿ ತುಂಬಾ ಸಮಯ ಕಳೆ​ಯು​ವುದು ಅಪಾ​ಯ​ಕಾರಿ. ನನ್ನ ಸ್ಥಿತಿ ನೋಡಿ​ಯಾ​ದರೂ ಯೋಚಿ​ಸಿ’ ಎಂದು ಆಟ​ಗಾ​ರ​ರ​ರಲ್ಲಿ ವಿನಂತಿ​ಸಿ​ದ್ದಾ​ರೆ.

ನನಗೆ ಚರ್ಮದ ಮೇಲೆ ಮಚ್ಚೆಯಂತ ಕಲೆಗಳು ಕಾಣಿಸಿಕೊಂಡಿತ್ತು. ಅದು 0.6 ಮಿಲಿಮೀಟರ್‌ನಷ್ಟು ಆಳವಾಗಿತ್ತು. ಅದು 0.7 ಮಿಲಿಮೀಟರ್‌ ಆಳಕ್ಕೆ ಇಳಿದಾಗ ಮತ್ತಷ್ಟು ಗಂಭೀರವಾಯಿತು. "ನಾನು ಅದನ್ನು ನಿರ್ಲಕ್ಷಿಸಿದ್ದರೇ, ಮುಂದಿನ ಆರೇಳು ತಿಂಗಳಿನಲ್ಲಿ ಮತ್ತಷ್ಟು ಗಂಭೀರವಾಗುತ್ತಿತ್ತು. ಅಂತರ ಕಡಿಮೆಯಿದ್ದರೂ, ಸಾಕಷ್ಟು ಪರಿಣಾಮಕಾರಿಯಾಗುತ್ತಿತ್ತು ಎಂದು 31 ವರ್ಷದ ಸ್ಯಾಮ್ ಬಿಲ್ಲಿಂಗ್ಸ್ ಹೇಳಿದ್ದಾರೆ.

ಸ್ಯಾಮ್ ಬಿಲ್ಲಿಂಗ್ಸ್‌, ಇಂಗ್ಲೆಂಡ್ ಪರ 3 ಟೆಸ್ಟ್‌, 28 ಏಕದಿನ ಹಾಗೂ 37 ಟಿ20 ಪಂದ್ಯಗಳನ್ನಾಡಿದ್ದಾರೆ. ಸದ್ಯ ಸ್ಯಾಮ್ ಬಿಲ್ಲಿಂಗ್ಸ್‌ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಕ್ಯಾನ್ಸರ್ ಎದುರಿನ ಹೋರಾಟದ ಬಗ್ಗೆ ಇದನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಬಿಲ್ಲಿಂಗ್ಸ್‌ ಹೇಳಿದ್ದಾರೆ.

Scroll to load tweet…

ನಮ್ಮದು ಮಾತ್ರವಲ್ಲ, ಅದು ಕ್ಲಬ್ ಕ್ರಿಕೆಟರ್ ಆಗಿರಲಿ ಅಥವಾ ಪಂದ್ಯವನ್ನು ವೀಕ್ಷಿಸುವ ಅಭಿಮಾನಿಗಳೇ ಆಗಿರಲಿ, ಅತಿಯಾದ ಬಿಸಿಲಿನಲ್ಲಿ ಇರುವುದು ಒಳ್ಳೆಯದಲ್ಲ. ನಾನು ಇತ್ತೀಚೆಗಷ್ಟೇ ಲಾರ್ಡ್ಸ್‌ನಲ್ಲಿ ಪಂದ್ಯವನ್ನಾಡಿದೆ, ಆಗ ಸೂರ್ಯನ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ನಷ್ಟೂ ಇರಲಿಲ್ಲ. ಹೆಚ್ಚೆಂದರೆ 18 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು, ಹೀಗಿದ್ದೂ ಸೂರ್ಯನ ಶಾಖ ತಡೆಯಲಾಗಲಿಲ್ಲ ಎಂದು ಬಿಲ್ಲಿಂಗ್ಸ್ ಹೇಳಿದ್ದಾರೆ.

IPL 2023 ಬೃಹತ್ ಮೊತ್ತ ಸಿಡಿಸಿದರೂ ಆರ್‌ಸಿಬಿಗೆ ಸೋಲು, ಪ್ಲೇ ಆಫ್‌ಗೆ ಇದೆಯಾ ಅವಕಾಶ?

ನಾವು ಬಿಸಿಲಿಗೆ ಸನ್‌ಕ್ರೀಮ್ ಹಚ್ಚಿಕೊಳ್ಳುತ್ತೇವೆ. ಆದರೆ ಅದು ತಾತ್ಕಾಲಿಕವಷ್ಟೇ. ಆದರೆ ಸನ್‌ಬರ್ನ್‌ ಕುರಿತಾಗಿ ಆಸ್ಟ್ರೇಲಿಯಾದಂತ ದೇಶಗಳಲ್ಲಿ ಸಿಗುತ್ತಿರುವ ಶಿಕ್ಷಣ/ಮಾಹಿತಿ ಬೇರೆ ಕಡೆ ಸರಿಯಾಗಿ ಸಿಗುತ್ತಿಲ್ಲ. ಈ ಕುರಿತಂತೆ ಎಲ್ಲಾ ಕ್ರಿಕೆಟಿಗರು ಒಟ್ಟಾಗಿ ಜಾಗೃತಿ ಮೂಡಿಸಬೇಕಿದೆ. ಸೂರ್ಯ ಹೊರಬಂದಿದ್ದಾನೆ ಎಂದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ ಎಂದು ಸ್ಯಾಮ್ ಬಿಲ್ಲಿಂಗ್ಸ್ ಮನವಿ ಮಾಡಿಕೊಂಡಿದ್ದಾರೆ.

ಆರ್ಚರ್‌ ಔಟ್‌: ಮುಂಬೈ​ಗೆ ಕ್ರಿಸ್‌ ಜೋರ್ಡನ್‌ ಸೇರ್ಪ​ಡೆ

ಮುಂಬೈ: ಅನು​ಭವಿ ವೇಗಿ​ಗಳ ಕೊರತೆ ಎದು​ರಿ​ಸು​ತ್ತಿರುವ ಮುಂಬೈ ಇಂಡಿ​ಯನ್ಸ್‌ಗೆ ಮತ್ತೊಂದು ಆಘಾತ ಎದು​ರಾ​ಗಿದ್ದು, ಪ್ರಮುಖ ವೇಗಿ ಜೋಫ್ರಾ ಆರ್ಚರ್‌ 16ನೇ ಆವೃತ್ತಿ ಐಪಿ​ಎ​ಲ್‌​ನಿಂದಲೇ ಹೊರ​ಬಿ​ದ್ದಿ​ದ್ದಾರೆ. ಅವ​ರ ಬದಲು ಇಂಗ್ಲೆಂಡ್‌​ನ​ವರೇ ಆದ ವೇಗಿ ಕ್ರಿಸ್‌ ಜೊರ್ಡನ್‌ರನ್ನು ತಂಡಕ್ಕೆ ಸೇರ್ಪ​ಡೆ​ಗೊ​ಳಿ​ಸಿದೆ.

ಜೋರ್ಡನ್‌ರನ್ನು ಕಳೆದ ವಾರ​ವೇ ತಂಡಕ್ಕೆ ಸೇರಿ​ಸಿ​ಕೊಂಡಿ​ದ್ದಾಗಿ ಫ್ರಾಂಚೈಸಿ ಮಾಹಿತಿ ನೀಡಿತ್ತು. ಆದರೆ ಯಾವ ಆಟ​ಗಾ​ರನ ಬದಲಿಗೆ ಕ್ರಿಸ್ ಜೊರ್ಡನ್‌ ಮುಂಬೈ ಇಂಡಿಯನ್ಸ್‌ ತಂಡ ಕೂಡಿ​ಕೊಂಡಿ​ದ್ದಾರೆ ಎಂಬು​ದನ್ನು ಬಹಿ​ರಂಗ​ಪ​ಡಿ​ಸಿರಲಿಲ್ಲ. ಜೊರ್ಡನ್‌ ಐಪಿ​ಎ​ಲ್‌​ನಲ್ಲಿ ಆರ್‌​ಸಿಬಿ ಸೇರಿ​ದಂತೆ ವಿವಿಧ ತಂಡ​ಗಳ ಪರ 28 ಪಂದ್ಯ​ಗ​ಳಲ್ಲಿ 27 ವಿಕೆಟ್‌ ಪಡೆ​ದಿ​ದ್ದಾರೆ.

ಕೆಕೆ​ಆರ್‌ ನಾಯಕ ನಿತೀ​ಶ್‌ ರಾಣಾಗೆ 12 ಲಕ್ಷ ರುಪಾಯಿ ದಂಡ

ನವ​ದೆ​ಹ​ಲಿ: ಪಂಜಾಬ್‌ ಕಿಂಗ್‌್ಸ ವಿರು​ದ್ಧದ ಪಂದ್ಯ​ದಲ್ಲಿ ನಿಧಾ​ನ​ಗತಿ ಬೌಲಿಂಗ್‌ ಮಾಡಿ​ದ್ದಕ್ಕೆ ಕೋಲ್ಕತಾ ನೈಟ್‌ ರೈಡ​ರ್ಸ್‌ ನಾಯಕ ನಿತೀಶ್‌ ರಾಣಾಗೆ 12 ಲಕ್ಷ ರುಪಾಯಿ ದಂಡ ವಿಧಿ​ಸ​ಲಾ​ಗಿದೆ. ಇದು ಟೂರ್ನಿ​ಯಲ್ಲಿ ಕೆಕೆ​ಆ​ರ್‌ನ ಮೊದಲ ನಿಯಮ ಉಲ್ಲಂಘ​ನೆ​ಯಾ​ಗಿದ್ದು, ಮತ್ತೊಮ್ಮೆ ಉಲ್ಲಂಘಿ​ಸಿ​ದರೆ ದಂಡದ ಮೊತ್ತ ದುಪ್ಪ​ಟ್ಟಾ​ಗ​ಲಿದೆ. 3ನೇ ಬಾರಿ ನಿಯಮ ಉಲ್ಲಂಘಿ​ಸಿ​ದರೆ ನಾಯ​ಕ​ನಿಗೆ ದಂಡದ ಜೊತೆ ಒಂದು ಪಂದ್ಯ ನಿಷೇಧ ಹೇರ​ಲಾ​ಗು​ತ್ತದೆ. ಸೋಮ​ವಾ​ರದ ಪಂದ್ಯ​ದಲ್ಲಿ ಕೆಕೆ​ಆರ್‌ ಕೊನೆ ಬಾಲ್‌​ನಲ್ಲಿ ಗೆಲುವು ತನ್ನ​ದಾ​ಗಿ​ಸಿ​ಕೊಂಡಿ​ತ್ತು.