ಮನೋ​ವೈ​ದ್ಯರ ಮೊರೆ ಹೋದ ವೇಗಿ ಸ್ಟುವರ್ಟ್ ಬ್ರಾಡ್‌!

ಲಾಕ್‌ಡೌನ್ ಬಳಿಕ ಕ್ರಿಕೆಟ್ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೆ ಇನ್ನೊಂದು ವಾರ ಬಾಕಿ ಇರುವಾಗಲೇ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಮನೋವೈದ್ಯರ ಮೊರೆ ಹೋಗಿದ್ದಾರೆ. ಯಾಕೆ? ಏನಾಯ್ತು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

England Pacer Stuart Broad uses sports psychologist to prepare for Tests without spectator

ಸೌಥಾಂಪ್ಟನ್‌(ಜೂ.30): ಮುಂದಿನ ವಾರದಿಂದ ವೆಸ್ಟ್‌ಇಂಡೀಸ್‌ ವಿರುದ್ಧ ಟೆಸ್ಟ್‌ ಸರಣಿ ಆರಂಭ​ಗೊ​ಳ್ಳಲಿದ್ದು, ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆ​ಯಲಿವೆ. ಪ್ರೇಕ್ಷ​ಕರಿ​ಲ್ಲದೆ ಆಡಲು ಮಾನ​ಸಿಕವಾಗಿ ಸಿದ್ಧಗೊಳ್ಳಲು ಇಂಗ್ಲೆಂಡ್‌ನ ತಾರಾ ವೇಗಿ ಸ್ಟುವರ್ಟ್‌ ಬ್ರಾಡ್‌, ಕ್ರೀಡಾ ಮನೋ​ವೈ​ದ್ಯರ ಮೊರೆ ಹೋಗಿ​ದ್ದಾರೆ. 

‘ಅಂತಾ​ರಾಷ್ಟ್ರೀಯ ​ಕ್ರಿ​ಕೆಟ್‌ ಪಂದ್ಯ​ಗ​ಳಲ್ಲಿ ಪ್ರೇಕ್ಷ​ಕರ ಪಾತ್ರ ಮಹತ್ವದಿರ​ಲಿದೆ. ಅವರು ನೀಡುವ ಪ್ರೋತ್ಸಾಹ ಆಟ​ಗಾ​ರ​ರಲ್ಲಿ ಹುಮ್ಮಸ್ಸು ಹೆಚ್ಚಿ​ಸ​ಲಿದೆ. ಕೊರೋನಾ ಸಂಕ​ಷ್ಟ​ದಿಂದಾಗಿ ಖಾಲಿ ಕ್ರೀಡಾಂಗಣಗಳ​ಲ್ಲಿ ಆಡ​ಬೇ​ಕಾದ ಪರಿ​ಸ್ಥಿತಿ ಇದ್ದು, ಅದಕ್ಕೆ ಹೊಂದಿ​ಕೊ​ಳ್ಳಲು ಮನೋ​ವೈ​ದ್ಯರ ಸಲಹೆ ಪಡೆ​ದಿ​ದ್ದೇನೆ’ ಎಂದು ಬ್ರಾಡ್‌ ಹೇಳಿ​ಕೊಂಡಿ​ದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಇದೇ ಮೊದಲ ಬಾರಿಗೆ ಬೆನ್‌ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ಸ್ಟೋಕ್ಸ್‌ಗೆ ಉತ್ತಮ ಕ್ರಿಕೆಟ್ ಜ್ಞಾನವಿದ್ದು, ಜೋ ರೂಟ್ ಅವರಂತೆಯೇ ಇಂಗ್ಲೆಂಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸವಿದೆ ಎಂದು ಬ್ರಾಡ್ ಹೇಳಿದ್ದಾರೆ. ಜೋ ರೂಟ್ ಪತ್ನಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಪತ್ನಿಯ ಜತೆಯಿರಲು ರೂಟ್ ಮೊದಲ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ.

ನನಗೆ ಜನವರಿ​ಯಲ್ಲೇ ಕೊರೋನಾ ಬಂದಿ​ತ್ತು ಎಂದ ಮಾಜಿ ಸ್ಟಾರ್ ಕ್ರಿಕೆಟಿಗ..!

ಮಾರ್ಚ್‌ ಬಳಿಕ ಇದೇ ಮೊದಲ ಬಾರಿಗೆ ಕ್ರಿಕೆಟ್ ಚಟುವಟಿಕೆಗಳು ಗರಿಗೆದರಿವೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಜುಲೈ 08ರಿಂದ ಆರಂಭವಾಗಲಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದ್ದು, ಕ್ರೀಡಾಭಿಮಾನಿಗಳ ಚಿತ್ತ ಈ ಸರಣಿಯತ್ತ ನೆಟ್ಟಿದೆ. ಖಾಲಿ ಮೈದಾನದಲ್ಲಿ ಸರಣಿ ನಡೆಯಲಿದೆ.

Latest Videos
Follow Us:
Download App:
  • android
  • ios