Asianet Suvarna News Asianet Suvarna News

ಟೆಸ್ಟ್‌ನಲ್ಲಿ 600 ವಿಕೆಟ್‌ ಕಿತ್ತು ದಾಖಲೆ ಬರೆದ ಆ್ಯಂಡರ್‌ಸನ್‌

ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ಪಾಕಿಸ್ತಾನ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ 600 ವಿಕೆಟ್ ಕಬಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 

England Pacer James Anderson creates history by joining 600 Test wicket club
Author
Manchester, First Published Aug 26, 2020, 8:56 AM IST

ಸೌಥಾಂಪ್ಟನ್‌(ಆ.26): ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್‌ಸನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 600 ವಿಕೆಟ್‌ ಕಬ​ಳಿ​ಸಿದ ಮೊದಲ ವೇಗದ ಬೌಲರ್‌ ಎನ್ನುವ ದಾಖಲೆ ಬರೆ​ದಿ​ದ್ದಾರೆ. ಮಂಗ​ಳ​ವಾರ ಇಲ್ಲಿ ಡ್ರಾನಲ್ಲಿ ಮುಕ್ತಾಯಗೊಂಡ ಪಾಕಿ​ಸ್ತಾ​ನದ ವಿರು​ದ್ಧದ 3ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಅಜರ್‌ ಅಲಿ ವಿಕೆಟ್‌ ಕಬ​ಳಿಸಿದ ಆ್ಯಂಡರ್‌ಸನ್‌‌, ತಾವಾ​ಡಿದ 156ನೇ ಟೆಸ್ಟ್‌ನಲ್ಲಿ ಈ ಮೈಲಿ​ಗಲ್ಲು ತಲುಪಿದರು. 

ಟೆಸ್ಟ್‌ನಲ್ಲಿ ಸ್ಪಿನ್ನರ್‌ಗಳಾದ ಶ್ರೀಲಂಕಾದ ಮುತ್ತಯ್ಯ ಮುರ​ಳೀ​ಧ​ರನ್‌ 800, ಆಸ್ಪ್ರೇ​ಲಿ​ಯಾದ ಶೇನ್‌ ವಾರ್ನ್‌ 708, ಭಾರ​ತದ ಅನಿಲ್‌ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿ​ಯಲ್ಲಿ ಮೊದಲ 3 ಸ್ಥಾನ​ದ​ಲ್ಲಿ​ದ್ದಾರೆ.

ಫ್ರೀ ಹಿಟ್‌ ರೀತಿ ಫ್ರೀ ಬಾಲ್‌ ಐಡಿಯಾ ಕೊಟ್ಟ ಅಶ್ವಿನ್‌

2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾ​ರ್ಪಣೆ ಮಾಡಿದ್ದ ಆ್ಯಂಡರ್‌ಸನ್‌‌, 33745 ಎಸೆ​ತ​ಗ​ಳನ್ನು ಬೌಲ್‌ ಮಾಡಿ​ದ್ದಾರೆ. 42 ರನ್‌ಗೆ 7 ವಿಕೆಟ್‌ ಕಬ​ಳಿ​ಸಿದ್ದು, ಇನ್ನಿಂಗ್ಸ್‌ವೊಂದ​ರಲ್ಲಿ ಅವರ ಶ್ರೇಷ್ಠ ಬೌಲಿಂಗ್‌ ಪ್ರದ​ರ್ಶ​ನ. ತಮ್ಮ ವೃತ್ತಿ​ಬ​ದುಕಿನಲ್ಲಿ 29 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಕಬ​ಳಿ​ಸಿದ ಸಾಧ​ನೆ ಮಾಡಿ​ದ್ದಾರೆ.

ಆ್ಯಂಡರ್‌ಸನ್‌ 600 ವಿಕೆಟ್‌ ಸಾಧನೆಯನ್ನು ವಿರಾಟ್‌ ಕೊಹ್ಲಿ ಸೇರಿ​ದಂತೆ ಹಲವು ಕ್ರಿಕೆ​ಟಿ​ಗರು ಕೊಂಡಾ​ಡಿ​ದ್ದಾರೆ. 38ನೇ ವಯಸ್ಸಿನಲ್ಲೂ ಅವರ ಫಿಟ್ನೆಸ್‌ ಹಾಗೂ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದ್ದಾರೆ.
 

Follow Us:
Download App:
  • android
  • ios