Asianet Suvarna News Asianet Suvarna News

ಟೆಸ್ಟ್‌ನಲ್ಲಿ 10,000 ರನ್‌: ಜೋ ರೂಟ್‌ ಅತಿ ಕಿರಿಯ ಬ್ಯಾಟರ್‌

* ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಬಾರಿಸಿದ ಅತಿ ಕಿರಿಯ ಬ್ಯಾಟರ್ ಎನ್ನುವ ಶ್ರೇಯ ಜೋ ರೂಟ್ ಪಾಲು

* ಆಲಿಸ್ಟರ್ ಕುಕ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡ ಜೋ ರೂಟ್

* ನ್ಯೂಜಿಲೆಂಡ್ ಎದುರು ಇಂಗ್ಲೆಂಡ್‌ಗೆ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು

England Former Skipper Joe Root becomes latest member of elusive 10000 Test runs club kvn
Author
Bengaluru, First Published Jun 6, 2022, 11:18 AM IST

ಲಂಡನ್(ಜೂ.06)‌: ಇಂಗ್ಲೆಂಡ್‌ ಮಾಜಿ ನಾಯಕ ಜೋ ರೂಟ್‌ (Joe Root) ಟೆಸ್ಟ್‌ ಕ್ರಿಕೆಟ್‌ನಲ್ಲಿ 10000 ರನ್‌ ಪೂರ್ತಿಗೊಳಿಸಿದ ಅತಿ ಕಿರಿಯ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಭಾನುವಾರ ನ್ಯೂಜಿಲೆಂಡ್‌ ವಿರುದ್ಧ ಶತಕ ಸಿಡಿಸಿ 10 ಸಾವಿರ ರನ್‌ ಮೈಲಿಗಲ್ಲು ತಲುಪುವಾಗ ರೂಟ್‌ ವಯಸ್ಸು 31 ವರ್ಷ 157 ದಿನಗಳು. ಇದಕ್ಕೂ ಮೊದಲು ಇಂಗ್ಲೆಂಡ್‌ ಮಾಜಿ ನಾಯಕ ಅಲೇಸ್ಟರ್‌ ಕುಕ್‌ ಕೂಡಾ ಇಷ್ಟೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ರೂಟ್‌ ಈ ಮೈಲಿಗಲ್ಲು ತಲುಪಲು 218 ಇನ್ನಿಂಗ್ಸ್‌ ಬಳಸಿಕೊಂಡಿದ್ದಾರೆ. ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ 10 ಸಾವಿರ ರನ್‌ ಪೂರ್ತಿಗೊಳಿಸಿದ ದಾಖಲೆ ಬ್ರಿಯಾನ್‌ ಲಾರಾ, ಸಚಿನ್‌ ತೆಂಡುಲ್ಕರ್‌, ಸಂಗಕ್ಕರ ಹೆಸರಲ್ಲಿದೆ. ಈ ಮೂವರು ಕೇವಲ 195 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ಮೊದಲ ಟೆಸ್ಟ್‌: ಕಿವೀಸ್‌ ವಿರುದ್ಧ ಇಂಗ್ಲೆಂಡ್‌ಗೆ ಜಯ

ಲಂಡನ್‌: ಭಾರೀ ರೋಚಕತೆ ಸೃಷ್ಟಿಸಿದ್ದ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ 5 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಗೆಲುವಿಗೆ 277 ರನ್‌ ಗುರಿ ಪಡೆದಿದ್ದ ಇಂಗ್ಲೆಂಡ್‌ ಭಾನುವಾರ 5 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 216 ರನ್‌ ಗಳಿಸಿದ್ದ ಇಂಗ್ಲೆಂಡ್‌ ಭಾನುವಾರ ಯಾವುದೇ ವಿಕೆಟ್‌ ಕಳೆದುಕೊಳ್ಳದೇ ಗುರಿ ತಲುಪಿತು. ಜೋ ರೂಟ್‌ ಔಟಾಗದೆ 115 ರನ್‌ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜೇಮಿಸನ್‌ 4 ವಿಕೆಟ್‌ ಕಿತ್ತರು. ಇದಕ್ಕೂ ಮೊದಲು ಪ್ರಥಮ ಇನ್ನಿಂಗ್ಸ್‌ನಲ್ಲಿ 132 ರನ್‌ಗೆ ಆಲೌಟಾಗಿದ್ದ ಕಿವೀಸ್‌, ಇಂಗ್ಲೆಂಡನ್ನು 141ಕ್ಕೆ ನಿಯಂತ್ರಿಸಿತ್ತು. ಬಳಿಕ 2ನೇ ಇನ್ನಿಂಗ್‌್ಸನಲ್ಲಿ 285 ರನ್‌ ಕಲೆ ಹಾಕಿತ್ತು.

ಏಕದಿನ: ನೆದರ್ಲೆಂಡ್ಸ್‌ ವಿರುದ್ಧ ವಿಂಡೀಸ್‌ ಕ್ಲೀನ್‌ಸ್ವೀಪ್‌

ಆಮ್‌ಸ್ಟೆಲ್ವೀನ್‌(ನೆದರ್ಲೆಂಡ್ಸ್‌): ನೆದರ್ಲೆಂಡ್ಸ್‌ ವಿರುದ್ಧದ 3ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಪ್ರವಾಸಿ ವೆಸ್ಟ್‌ಇಂಡೀಸ್‌ 20 ರನ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 5 ವಿಕೆಟ್‌ ಕಳೆದುಕೊಂಡು 308 ರನ್‌ ಕಲೆ ಹಾಕಿತು. ಕೈಲ್‌ ಮೇಯರ್ಸ್‌(120), ಬ್ರೂಕ್ಸ್‌(101) ಭರ್ಜರಿ ಶತಕ ಸಿಡಿಸಿದರು. 

Karachi Test ಸಚಿನ್ ಗಾಯಗೊಳಿಸುವುದೇ ನನ್ನ ಗುರಿಯಾಗಿತ್ತು, ಶಾಕಿಂಗ್ ಮಾಹಿತಿ ಬಹಿರಂಗ ಪಡಿಸಿದ ಅಕ್ತರ್

ಕಠಿಣ ಸವಾಲು ಬೆನ್ನಟ್ಟಿದ ನೆದರ್ಲೆಂಡ್ಸ್‌ 49.3 ಓವರ್‌ಗಳಲ್ಲಿ 288 ರನ್‌ ಗಳಿಸಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ವಿಕ್ರಂಜಿತ್‌ ಸಿಂಗ್‌ 54, ಮ್ಯಾಕ್ಸ್‌ ಒಡೋವ್ಡ್‌ 89 ರನ್‌ ಗಳಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಮೇಯ​ರ್ಸ್ ಪಂದ್ಯಶ್ರೇಷ್ಠ, ಅಕೇಲ್‌ ಹೊಸೈನ್‌ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಮೊದಲ ಏಕದಿನ: ಜಿಂಬಾಬ್ವೆ ವಿರುದ್ಧ ಆಫ್ಘನ್‌ಗೆ ಗೆಲುವು

ಹರಾರೆ: ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಅಷ್ಘಾನಿಸ್ತಾನ 60 ರನ್‌ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌ 5 ವಿಕೆಟ್‌ ಕಳೆದುಕೊಂಡು 276 ರನ್‌ ಕಲೆ ಹಾಕಿತು. ರಹ್ಮತ್‌ ಶಾ(94) ಶತಕದ ಅಂಚಿನಲ್ಲಿ ಎಡವಿದರೆ, ನಾಯಕ ಹಶ್ಮತುಲ್ಲಾ ಶಾಹಿತಿ 88 ರನ್‌ ಸಿಡಿಸಿದರು. ರಶೀದ್‌ ಖಾನ್‌ 17 ಎಸೆತಗಳಲ್ಲಿ 39 ರನ್‌ ಬಾರಿಸಿದರು. 

ದೊಡ್ಡ ಗುರಿ ಬೆನ್ನತ್ತಿದ ಜಿಂಬಾಬ್ವೆ 50 ಓವರ್‌ಗಳಲ್ಲಿ 216 ರನ್‌ ಗಳಿಸಿ ಆಲೌಟ್‌ ಆಯಿತು. ಸಿಕಂದರ್‌ ರಜಾ 67 ರನ್‌ ಗಳಿಸಿದರೆ, ಇನ್ನೋಸೆಂಟ್‌ ಕಿಯಾ 29 ರನ್‌ ಕೊಡುಗೆ ನೀಡಿದರು. ಮೊಹಮ್ಮದ್‌ ನಬಿ 34 ರನ್‌ಗೆ 4 ವಿಕೆಟ್‌ ಪಡೆದರು.
 

Follow Us:
Download App:
  • android
  • ios