ದುಬೈ(ಡಿ.03): ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ವೈಟ್‌ ವಾಷ್‌ ಮಾಡಿದ ಇಂಗ್ಲೆಂಡ್‌, ಐಸಿಸಿ ಟಿ20 ರಾರ‍ಯಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. 

ಟಿ20 ಕ್ರಿಕೆಟ್‌ನಲ್ಲಿ ನಂ.1 ಬ್ಯಾಟ್ಸ್‌ಮನ್‌ ಆಗಿರುವ ಇಂಗ್ಲೆಂಡ್‌ನ ಡಾವಿಡ್‌ ಮಲಾನ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರೇಟಿಂಗ್‌ ಪಡೆದ ಸಾಧನೆ ಮಾಡಿದ್ದಾರೆ. 3 ಪಂದ್ಯಗಳ ಸರಣಿಯಲ್ಲಿ ಮಲಾನ್‌ 2 ಅರ್ಧಶತಕ ಸೇರಿದಂತೆ ಒಟ್ಟು 173 ರನ್‌ಗಳಿಸಿದ್ದಾರೆ. 

ಕೊನೆಯ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ

ಮಲಾನ್‌ 915 ರೇಟಿಂಗ್ಸ್‌ ಸಂಪಾದಿಸಿದ್ದು ಜೀವನ ಶ್ರೇಷ್ಠ ಸಾಧನೆಯಾಗಿದೆ. ಆಸೀಸ್‌ ನಾಯಕ 900+ ರೇಟಿಂಗ್ಸ್‌ ಪಡೆದು 2ನೇ ಸ್ಥಾನ ಪಡೆದಿದ್ದಾರೆ. 25 ಟಿ20 ಪಂದ್ಯಗಳನ್ನಾಡಿರುವ ಇಂಗ್ಲೆಂಡ್‌ 275 ಅಂಕಗಳಿಸಿ ಅಗ್ರಸ್ಥಾನದಲ್ಲಿದೆ. ಆಸೀಸ್‌ ಕೂಡಾ 275 ರೇಟಿಂಗ್ಸ್‌ನೊಂದಿಗೆ 2ನೇ ಸ್ಥಾನದಲ್ಲಿದೆ.

ಇಂಗ್ಲೆಂಡ್ ಎದುರು ಟಿ20 ಸರಣಿ ಕ್ಲೀನ್‌ ಸ್ವೀಪ್  ಮಾಡಿದ ಆಫ್ರಿಕಾ

ಕೇಪ್‌ ಟೌನ್‌: ಡೇವಿಡ್‌ ಮಲನ್‌ (99*) ಭರ್ಜರಿ ಬ್ಯಾಟಿಂಗ್‌ನಿಂದ ಇಂಗ್ಲೆಂಡ್‌ ತಂಡ, ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 9 ವಿಕೆಟ್‌ಗಳ ಗೆಲುವು ಸಾಧಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್‌ 3-0 ಯಿಂದ ವೈಟ್‌ ವಾಷ್‌ ಮಾಡಿದೆ. 

ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ ಡಸ್ಸೇನ್‌ (74*), ಡುಪ್ಲೆಸಿ (52*) ನೆರವಿನಿಂದ 20 ಓವರಲ್ಲಿ 3 ವಿಕೆಟ್‌ಗೆ 191 ರನ್‌ಗಳಿಸಿತು. ಇಂಗ್ಲೆಂಡ್‌ ಮಲನ್‌ ಹಾಗೂ ಬಟ್ಲರ್‌ ಆಕರ್ಷಕ ಅರ್ಧಶತಕದಿಂದ 17.4 ಓವರಲ್ಲಿ 1 ವಿಕೆಟ್‌ಗೆ 192 ರನ್‌ಗಳಿಸಿ ಜಯಿಸಿತು. 

ಸ್ಕೋರ್‌:

ದ.ಆಫ್ರಿಕಾ 191/3 
ಇಂಗ್ಲೆಂಡ್‌ 192/1