ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ತಂದೆ ಗೆಡ್ ಸ್ಟೋಕ್ಸ್ ನಿಧನರಾಗಿದ್ದಾರೆ. ತಂದೆಯನ್ನು ಉಳಿಸಿಕೊಳ್ಳಲು ಹೋರಾಡಿದ ಪುತ್ರ ಬೆನ್ ಸ್ಟೋಕ್ಸ್ ನೋವು ಹೇಳತೀರದು.
ನ್ಯೂಜಿಲೆಂಡ್(ಡಿ.08): ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ತಂದೆ ನಿಧನರಾಗಿದ್ದಾರೆ. ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸ್ಟೋಕ್ಸ್ ತಂದೆ ಗೆಡ್ ಸ್ಟೋಕ್ಸ್ ಸತತ ಒಂದು ವರ್ಷದಿಂದ ಹಲವು ಬಾರಿ ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ತಂದೆಯನ್ನು ಉಳಿಸಲು ಸ್ಟೋಕ್ಸ್ ಮಾಡಿದ ಎಲ್ಲಾ ಪ್ರಯತ್ನ ಕೈಗೂಡಲಿಲ್ಲ. ಇಂದು(ಡಿ.08) ಗೆಡ್ ಸ್ಟೋಕ್ಸ್ ನಿಧನರಾಗಿದ್ದಾರೆ.
ಮುಂಬೈ ವಿರುದ್ಧದ ಶತಕವನ್ನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತಂದೆಗೆ ಅರ್ಪಿಸಿದ ಬೆನ್ ಸ್ಟೋಕ್ಸ್.
ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಸ್ಟೋಕ್ಸ್, ದಿಢೀರ್ ವಾಪಾಸ್ಸಾಗಲು ಕೊರೋನಾ ಪ್ರೋಟೋಕಾಲ್ ಅನುಮತಿ ನೀಡುತ್ತಿಲ್ಲ. ಕಠಿಣ ಸಮಯದಲ್ಲಿ ಸ್ಟೋಕ್ಸ್ ಕುಟುಂಬದ ಜೊತೆ ಕಳೆಯಲು ಸಾಧ್ಯವಾಗುತ್ತಿಲ್ಲ. ಈ ವರ್ಷದ ಆರಂಭದಲ್ಲೇ ಸ್ಟೋಕ್ಸ್ ತಂದೆ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಹೀಗಾಗಿ ಸ್ಟೋಕ್ಸ್ ಇಂಗ್ಲೆಂಡ್‌ನ ತವರಿನ ಸರಣಿ ಮೊಟಕು ಗೊಳಿಸಿ ನ್ಯೂಜಿಲೆಂಡ್‌ಗೆ ತೆರಳಿದ್ದರು.
ಇತ್ತೀಚೆಗೆ ದುಬೈನಲ್ಲಿ ಆಯೋಜಿಸಿದ್ದ ಐಪಿಎಲ್ ಟೂರ್ನಿಗೂ ಸ್ಟೋಕ್ಸ್ ತಡವಾಗಿ ಆಗಮಿಸಿದ್ದರು. ತಂದೆ ತೀವ್ರ ನಿಘಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಐಪಿಎಲ್ ಟೂರ್ನಿಗೆ ತಡವಾಗಿ ಆಗಮಿಸಿದ್ದರು. ಇದೀಗ ನ್ಯೂಜಿಲೆಂಡ್‌ನಲ್ಲಿ ಗೆಡ್ ಸ್ಟೋಕ್ಸ್ ಅಸುನೀಗಿದ್ದಾರೆ.
ಮಾಜಿ ರಗ್ಬಿ ಆಟಗಾರನಾಗಿರುವ ಗೆಡ್ ಸ್ಟೋಕ್ಸ್, ನ್ಯೂಜಿಲೆಂಡ್‌ನ ವರ್ಕಿಂಗ್‌ಟನ್ ಟೌನ್ ರಗ್ಬಿ ತಂಡದ ಪರ ಆಡಿದ್ದಾರೆ. ಬಳಿಕ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದೀಗ ವರ್ಕಿಂಗ್‌ಟೌನ್ ರಗ್ಬಿ ಕ್ಲಬ್ ಸಂತಾಪ ಸೂಚಿಸಿದೆ.
