Asianet Suvarna News Asianet Suvarna News

ಆ್ಯಷಸ್ ಸರಣಿ 17 ಆಟಗಾರರನ್ನೊಳಗೊಂಡ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ

* ಆ್ಯಷಸ್ ಸರಣಿಗೆ ಆಸೀಸ್‌ ಪ್ರವಾಸ ಮಾಡಲು ಒಪ್ಪಿಕೊಂಡ ಇಂಗ್ಲೆಂಡ್

* ಆ್ಯಷಸ್ ಸರಣಿಗೆ 17 ಆಟಗಾರರ ಇಂಗ್ಲೆಂಡ್ ತಂಡ ಪ್ರಕಟ

* ಡಿಸೆಂಬರ್ 08ರಿಂದ 5 ಪಂದ್ಯಗಳ ಪ್ರತಿಷ್ಠಿತ ಆ್ಯಷಸ್ ಸರಣಿ ಆರಂಭ

England Cricket Announces 17 Member Squad for Ashes Test Series kvn
Author
London, First Published Oct 11, 2021, 1:57 PM IST
  • Facebook
  • Twitter
  • Whatsapp

ಲಂಡನ್(ಅ.11)‌: ಇಂಗ್ಲೆಂಡ್‌ ಕ್ರಿಕೆಟ್‌ ತಂಡ (England Cricket Team) ಆ್ಯಷಸ್‌ ಸರಣಿ ಆಡಲು ಆಸ್ಪ್ರೇಲಿಯಾಗೆ ಪ್ರವಾಸ ಕೈಗೊಳ್ಳುವುದು ಖಚಿತವಾಗಿದ್ದು, ಭಾನುವಾರ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) 17 ಆಟಗಾರರನ್ನೊಳಗೊಂಡ ಬಲಿಷ್ಠ ತಂಡ ಪ್ರಕಟಿಸಲಾಗಿದೆ. ಅಸ್ಟ್ರೇಲಿಯಾ ವಿರುದ್ದ ಡಿಸೆಂಬರ್ 08ರಿಂದ 5 ಪಂದ್ಯಗಳ ಪ್ರತಿಷ್ಠಿತ ಆ್ಯಷಸ್ ಸರಣಿ ಆರಂಭವಾಗಲಿದೆ

ಆಸ್ಪ್ರೇಲಿಯಾದ ಕಠಿಣ ಬಯೋಬಬಲ್‌ (Bio Bubble Rules) ನಿಯಮಗಳಿಗೆ ಇಂಗ್ಲೆಂಡ್‌ ತಾರಾ ಆಟಗಾರರು ಒಪ್ಪದಿದ್ದರಿಂದ ಉಂಟಾಗಿದ್ದ ಬಿಕ್ಕಟ್ಟು ಕೊನೆಗೂ ಅಂತ್ಯವಾಗಿದೆ. ಆಟಗಾರರ ಜತೆಗೆ ಅವರ ಕುಟುಂಬದವರು ಒಟ್ಟಿಗಿರಲು ಅನುಮತಿ ಸಿಕ್ಕಿದ ಬೆನ್ನಲ್ಲೇ ಇಂಗ್ಲೆಂಡ್ ಆಟಗಾರರು ಆ್ಯಷಸ್‌ ಸರಣಿ (Ashes Test Series) ಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದಾರೆ. 

ಐಪಿಎಲ್‌ನಿಂದ ಹಿಂದೆ ಸರಿದಿದ್ದೇಕೆ: ರಹಸ್ಯ ಬಿಚ್ಚಿಟ್ಟ ಕ್ರಿಸ್ ವೋಕ್ಸ್‌

ತಂಡದಲ್ಲಿ ಜೋ ರೂಟ್‌ (Joe Root), ಜೋಸ್‌ ಬಟ್ಲರ್‌ ಸೇರಿ ಬಹುತೇಕ ಎಲ್ಲಾ ಪ್ರಮುಖ ಆಟಗಾರರೂ ಇದ್ದಾರೆ. ಗಾಯಾಳು ಜೋಫ್ರಾ ಆರ್ಚರ್‌, ಸ್ಯಾಮ್‌ ಕರ್ರನ್‌ ಹಾಗೂ ಬೆನ್‌ ಸ್ಟೋಕ್ಸ್‌ಗೆ ಸ್ಥಾನ ಸಿಕ್ಕಿಲ್ಲ. ಭಾರತ ವಿರುದ್ದ ಮೊದಲ ಟೆಸ್ಟ್ ಬಳಿಕ ಗಾಯಗೊಂಡಿದ್ದ ಅನುಭವಿ ವೇಗಿ ಸ್ಟುವರ್ಟ್‌ ಬ್ರಾಡ್ (Stuart Broad) ತಂಡ ಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಜೋಸ್ ಬಟ್ಲರ್‌ (Jos Buttler) ಆ್ಯಷಸ್‌ ಸರಣಿಯಿಂದ ಹಿಂದೆ ಸರಿಯಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೀಗ ಬಟ್ಲರ್ ಕೂಡಾ ಆಸ್ಟ್ರೇಲಿಯಾ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ.

ಭಾರತ ವಿರುದ್ದ ಉತ್ತಮ ಪ್ರದರ್ಶನ ತೋರಿದ್ದ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳಾದ ರೋರಿ ಬರ್ನ್ಸ್‌, ಹಸೀಬ್ ಹಮೀದ್ ಹಾಗೂ ಡೇವಿಡ್ ಮಲಾನ್ ಆ್ಯಷಸ್ ಸರಣಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಇನ್ನು ಅನುಭವಿ ವೇಗಿಗಳಾದ ಜೇಮ್ಸ್‌ ಆ್ಯಂಡರ್‌ಸನ್‌, ಸ್ಟುವರ್ಟ್ ಬ್ರಾಡ್ ಜತೆಗೆ ಕ್ರಿಸ್‌ ವೋಕ್ಸ್‌, ಮಾರ್ಕ್‌ ವುಡ್ ಹಾಗೂ ಓಲಿ ರಾಬಿನ್‌ಸನ್‌ ಕಾಂಗರೂ ನಾಡಿನಲ್ಲಿ ಮಿಂಚಲು ಎದುರು ನೋಡುತ್ತಿದ್ದಾರೆ. ಮೋಯಿನ್ ಅಲಿ ಇತ್ತೀಚೆಗಷ್ಟೇ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ಜಾಕ್‌ ಲೀಚ್‌ ಹಾಗೂ ಡಾಮ್ ಬ್ಲಿಸ್‌ ಇಂಗ್ಲೆಂಡ್ ತಂಡದಲ್ಲಿ ಸ್ಪಿನ್ನರ್ ಪಾತ್ರದಲ್ಲಿ ಕಣಕ್ಕಿಳಿಯಲಿದ್ದಾರೆ. ಆದರೆ ಸ್ಟಾರ್ ಆಲ್ರೌಂಡರ್‌ ಬೆನ್ ಸ್ಟೋಕ್ಸ್‌ (Ben Stokes), ಸ್ಯಾಮ್ ಕರ್ರನ್ ಹಾಗೂ ಮಾರಕ ವೇಗಿ ಜೋಫ್ರ ಆರ್ಚರ್ ಅನುಪಸ್ಥಿತಿ ಇಂಗ್ಲೆಂಡ್ ತಂಡವನ್ನು ಕಾಡುವ ಸಾಧ್ಯತೆಯಿದೆ. 

ಆಸೀಸ್ ಎದುರಿನ ಆ್ಯಷಸ್ ಸರಣಿಗೆ ಇಂಗ್ಲೆಂಡ್‌ನ ಪ್ರಮುಖರು ಬಹಿಷ್ಕಾರ?

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ಪ್ರತಿಷ್ಠಿತ 5 ಪಂದ್ಯಗಳ ಆ್ಯಷಸ್ ಸರಣಿಯ ಮೊದಲ ಪಂದ್ಯ ಡಿಸೆಂಬರ್‌ 8ರಿಂದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಇಂಗ್ಲೆಂಡ್ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರು ನವೆಂಬರ್ 04ರಂದು ಆಸ್ಟ್ರೇಲಿಯಾಗೆ ಹಾರಲಿದ್ದಾರೆ. ಇನ್ನುಳಿದ ಆಟಗಾರರು ಯುಎಇನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಮುಗಿಸಿ ಅಲ್ಲಿಂದಲೇ ಕಾಂಗರೂ ನಾಡಿನತ್ತ ಪಯಣ ಬೆಳೆಸಲಿದ್ದಾರೆ. 

ಆ್ಯಷಸ್ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಜೋ ರೂಟ್‌(ನಾಯಕ), ಜೇಮ್ಸ್‌ ಆ್ಯಂಡರ್‌ಸನ್, ಜಾನಿ ಬೇರ್‌ಸ್ಟೋವ್, ಡಾಮ್ ಬೆಸ್‌, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್‌, ಜೋಸ್ ಬಟ್ಲರ್, ಜಾಕ್‌ ಕ್ರಾವ್ಲೆ, ಹಸೀಬ್ ಹಮೀದ್, ಡೇನಿಯಲ್ ಲಾರೆನ್ಸ್, ಜಾಕ್ ಲೀಚ್, ಡೇವಿಡ್ ಮಲಾನ್, ಕ್ರೇಗ್‌ ಓವರ್‌ಟನ್, ಓಲಿ ಪೋಪ್‌, ಓಲಿ ರಾಬಿನ್‌ಸನ್‌, ಕ್ರಿಸ್‌ ವೋಕ್ಸ್, ಮಾರ್ಕ್ ವುಡ್.

Follow Us:
Download App:
  • android
  • ios