Asianet Suvarna News Asianet Suvarna News

ಬೆಟ್ಟಿಂಗ್ ಆ್ಯಪ್ ಜತೆ ನಂಟು: ಬ್ರೆಂಡನ್ ಮೆಕ್ಕಲಂಗೆ ಸಂಕಷ್ಟ..!

ಇಂಗ್ಲೆಂಡ್ ಕ್ರಿಕೆಟ್‌ ಕೋಚ್ ಬ್ರೆಂಡನ್ ಮೆಕ್ಕಲಂಗೆ ಸಂಕಷ್ಟ
ಬೆಟ್ಟಿಂಗ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ
ಕಳೆದ ಜನವರಿಯಲ್ಲಿ 22 ಬೆಟ್‌ನ ರಾಯಭಾರಿಯಾಗಿ ನೇಮಕವಾಗಿದ್ದ ಮೆಕ್ಕಲಂ

England coach Brendon McCullum under Scrutiny over betting Advertisements kvn
Author
First Published Apr 15, 2023, 1:56 PM IST

ಲಂಡನ್(ಏ.15): ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಪ್ರಧಾನ ಕೋಚ್ ಬ್ರೆಂಡನ್ ಮೆಕ್ಕಲಂ '22 ಬೆಟ್' ಹೆಸರಿನ ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ(ಇಸಿಬಿ) ತನಿಖೆ ಆರಂಭಿಸಿದೆ. ಮೆಕ್ಕಲಂಗೆ ಬೆಟ್ಟಿಂಗ್ ಸಂಸ್ಥೆ ಜೊತೆಗಿನ ಸಂಬಂಧ ಹಾಗೂ ಮಂಡಳಿಯ ಭ್ರಷ್ಟಾಚಾರ ವಿರೋಧಿ ನಿಯಮವನ್ನು ಮೆಕ್ಕಲಂ ಉಲ್ಲಂಘಿಸಿದ್ದಾರೆಯೇ ಎಂದು ಇಸಿಬಿ ಪರಿಶೀಲನೆ ನಡೆಸುತ್ತಿದೆ.

ಇನ್ನು ಇದೆಲ್ಲದರ ನಡುವೆಯೇ, ಬ್ರೆಂಡನ್ ಮೆಕ್ಕಲಂ ಅವರ ವಿರುದ್ದ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಇಸಿಬಿ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ. ನ್ಯೂಜಿಲೆಂಡ್‌ ಮಾಜಿ ನಾಯಕ ಜನವರಿಯಲ್ಲಿ 22 ಬೆಟ್‌ನ ರಾಯಭಾರಿಯಾಗಿ ನೇಮಕಗೊಂಡಿದ್ದರು. ಇತ್ತೀಚೆಗೆ ಐಪಿಎಲ್‌ಗೆ ಸಂಬಂಧಿಸಿದ ಬೆಟ್ಟಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.   

ಬ್ರೂಕ್‌ ಶತಕಕ್ಕೆ ಬೆಚ್ಚಿದ ನೈಟ್‌ರೈಡ​ರ್ಸ್!

ಕೋಲ್ಕತಾ: ಕೊನೆ ಕ್ಷಣ​ದಲ್ಲಿ ಬ್ಯಾಟಿಂಗ್‌​ನಲ್ಲಿ ಅಬ್ಬ​ರಿಸಿ ಕಳೆ​ದೆ​ರಡು ಪಂದ್ಯ​ಗ​ಳನ್ನು ತನ್ನ​ದಾ​ಗಿಸಿ​ಕೊಂಡಿದ್ದ ಕೋಲ್ಕ​ತಾ ಈ ಬಾರಿ ಅದೇ ಸಾಹಸ ಪ್ರದ​ರ್ಶಿ​ಸು​ವಲ್ಲಿ ವಿಫ​ಲ​ವಾ​ಯಿತು. ರಿಂಕು ಸಿಂಗ್‌ ಹಾಗೂ ನಿತೀಶ್‌ ರಾಣಾ ಮತ್ತೊಮ್ಮೆ ಸ್ಪೋಟಕ ಆಟವಾಡಿ​ದರೂ ಶುಕ್ರ​ವಾರ ತಂಡಕ್ಕೆ ಸನ್‌​ರೈ​ಸ​ರ್ಸ್ ಹೈದ​ರಾ​ಬಾದ್‌ ವಿರುದ್ಧ 23 ರನ್‌​ಗಳ ಸೋಲಿ​ನಿಂದ ತಪ್ಪಿ​ಸಲು ಆಗ​ಲಿಲ್ಲ. ಎರ​ಡು ಸೋಲಿ​ನೊಂದಿಗೆ ಟೂರ್ನಿಗೆ ಕಾಲಿ​ರಿ​ಸಿದ್ದ ಹೈದರ​ಬಾದ್‌ ಸತತ 2ನೇ ಜಯ ದಾಖ​ಲಿ​ಸಿ​ದರೆ, ಕೋಲ್ಕ​ತಾದ ಹ್ಯಾಟ್ರಿಕ್‌ ಗೆಲು​ವಿನ ಕನಸು ನನಸಾಗಲಿಲ್ಲ.

IPL 2023: ಹ್ಯಾಟ್ರಿಕ್‌ ಸೋಲಿಂದ ಪಾರಾಗುತ್ತಾ ಪಂಜಾಬ್ ಕಿಂಗ್ಸ್?

ಶತಕ​ಗಳ ಮೂಲ​ಕವೇ ವಿಶ್ವ​ ಕ್ರಿ​ಕೆ​ಟ್‌​ನಲ್ಲಿ ಹೆಸರು ಗಳಿ​ಸುತ್ತಿ​ರುವ ಹ್ಯಾರಿ ಬ್ರೂಕ್‌, ಐಪಿಎಲ್‌ನಲ್ಲೂ ಶತಕದ ಖಾತೆ ತೆರೆದರು. ಅವರ ಅಬ್ಬ​ರದ ಬ್ಯಾಟಿಂಗ್‌ ಹೈದರಬಾದ್‌ 4 ವಿಕೆ​ಟ್‌ಗೆ 228 ರನ್‌ ಕಲೆ​ಹಾ​ಕಲು ನೆರ​ವಾ​ಯಿತು. ಬೃಹತ್‌ ಮೊತ್ತ ಬೆನ್ನ​ತ್ತಿದ ಕೆಕೆ​ಆರ್‌ 7 ವಿಕೆ​ಟ್‌ಗೆ 205 ರನ್‌​ಗ​ಳಿಸಿ ಸೋಲೊ​ಪ್ಪಿ​ಕೊಂಡಿ​ತು.

6 ಕ್ಯಾಚ್‌ ಕೈಚೆಲ್ಲಿದರೂ ಗೆದ್ದ ಸನ್‌ರೈಸ​ರ್ಸ್!

ಸನ್‌ರೈಸ​ರ್ಸ್ ದೊಡ್ಡ ಮೊತ್ತ ಕಲೆಹಾಕದೆ ಹೋಗಿದ್ದರೆ ಕಳಪೆ ಫೀಲ್ಡಿಂಗ್‌ನಿಂದಾಗಿಯೇ ಪಂದ್ಯ ಸೋತಿದ್ದರೆ ಆಶ್ಚಯರ್ವಿರಲಿಲ್ಲ. ಕೆಕೆಆರ್‌ನ ಒಟ್ಟು 6 ಕ್ಯಾಚ್‌ಗಳನ್ನು ಸನ್‌ರೈಸ​ರ್ಸ್ ಆಟಗಾರರು ಕೈಚೆಲ್ಲಿದರು. ಅತ್ಯುತ್ತಮ ಕ್ಷೇತ್ರರಕ್ಷಕರೆನಿಸಿರುವ  ಗ್ಲೆನ್‌ ಫಿಲಿಫ್ಸ್, ಏಡನ್‌ ಮಾರ್ಕ್ರಮ್‌, ವಾಷಿಂಗ್ಟನ್‌ ಸುಂದರ್‌ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ತಂಡದ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತು.

ಈ ವಾರ ತವರಿನಲ್ಲಿ ಪಂದ್ಯ ಆಡಿದ ತಂಡಗಳು ಸೋತಿವೆ!

ಈ ವಾರ ಸತತ 5ನೇ ಪಂದ್ಯದಲ್ಲಿ ತವರಿನಲ್ಲಿ ಆಡಿದ ತಂಡ ಸೋಲುಂಡಿದೆ. ಲಖನೌ ವಿರುದ್ಧ ಬೆಂಗಳೂರಲ್ಲಿ ಆರ್‌ಸಿಬಿ, ಡೆಲ್ಲಿಯಲ್ಲಿ ಮುಂಬೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌, ಚೆನ್ನೈನಲ್ಲಿ ರಾಜಸ್ಥಾನ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌, ಮೊಹಾಲಿಯಲ್ಲಿ ಗುಜರಾತ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌, ಕೋಲ್ಕತಾದಲ್ಲಿ ಸನ್‌ರೈಸ​ರ್ಸ್ ವಿರುದ್ಧ ಕೆಕೆಆರ್‌ ಸೋಲುಂಡಿದೆ. ಈ ಟ್ರೆಂಡ್‌ ಮುಂದುವರಿಯಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

Follow Us:
Download App:
  • android
  • ios