ಜೋಹಾನ್ಸ್‌ಬರ್ಗ್‌(ಜ.25): ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ 5 ಲಕ್ಷ ರನ್‌ ಗಳಿಸಿದ ಮೊದಲ ತಂಡ ಎನ್ನುವ ದಾಖಲೆಯನ್ನು ಇಂಗ್ಲೆಂಡ್‌ ಬರೆದಿದೆ. 

ದ.ಆಫ್ರಿಕಾ ವಿರುದ್ಧ ಶುಕ್ರವಾರ ಆರಂಭಗೊಂಡ 3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 186ನೇ ಗಳಿಸುತ್ತಿದ್ದಂತೆ, ಇಂಗ್ಲೆಂಡ್‌ 5 ಲಕ್ಷ ಮೈಲಿಗಲ್ಲು ತಲುಪಿತು. ನಾಯಕ ಜೋ ರೂಟ್‌ ಗಳಿಸಿದ ರನ್‌ ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ಇಂಗ್ಲೆಂಡ್‌ ತನ್ನ 1022ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದೆ. 

ಟೀಂ ಇಂಡಿಯಾದ 27 ಆಟಗಾರರಲ್ಲಿ ಯಾರಿಗೆಷ್ಟು ಸಂಬಳ..?

ಈ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಸಾವಿರ ಟೆಸ್ಟ್ ಪಂದ್ಯವನ್ನಾಡಿದ ಮೊದಲ ತಂಡ ಎನ್ನುವ ದಾಖಲೆಗೂ ಇಂಗ್ಲೆಂಡ್ ಪಾತ್ರವಾಗಿತ್ತು. ಭಾರತ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯವು ಇಂಗ್ಲೆಂಡ್‌ ಆಡಿದ 1000ನೇ ಟೆಸ್ಟ್ ಪಂದ್ಯವಾಗಿತ್ತು. ಆ ಪಂದ್ಯವನ್ನು 31 ರನ್‌ಗಳಿಂದ ರೋಚಕ ಜಯ ಸಾದಿಸುವ ಮೂಲಕ ಇಂಗ್ಲೆಂಡ್ ಸ್ಮರಣೀಯವಾಗಿಸಿಕೊಂಡಿತ್ತು. ಆಸ್ಟ್ರೇಲಿಯಾ ತಂಡವು 830 ಟೆಸ್ಟ್ ಪಂದ್ಯಗಳನ್ನಾಡಿ 4,32,706 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಟೀಂ ಇಂಡಿಯಾ 540 ಟೆಸ್ಟ್ ಪಂದ್ಯಗಳನ್ನಾಡಿದ್ದು 2,73,518 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಫುಟ್ಬಾಲ್ ಪಂದ್ಯದಲ್ಲಿ ಮತ್ತೊಬ್ಬಳಿಗೆ ಮುತ್ತು; ವೈರಲ್ ವಿಡಿಯೋದಿಂದ ಲವ್ ಬ್ರೇಕ್ಅಪ್!

ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭಗೊಂಡಿತು. ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್‌ 4 ವಿಕೆಟ್‌ ನಷ್ಟಕ್ಕೆ 192 ರನ್‌ ಗಳಿಸಿತು.