Asianet Suvarna News Asianet Suvarna News

ಲಂಕಾ ವಿರುದ್ಧ ಇಂಗ್ಲೆಂಡ್‌ 2-0 ಸರಣಿ ಕ್ಲೀನ್‌ ಸ್ವೀಪ್‌

ಬಲಿಷ್ಠ ಇಂಗ್ಲೆಂಡ್‌ ತಂಡವು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ಎದುರು ಕ್ಲೀನ್ ಸ್ವೀಪ್‌ ಮಾಡಿದೆ. ಇನ್ನು ವೆಸ್ಟ್ ಇಂಡೀಸ್‌ ಎದುರು ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ಕ್ಲೀನ್‌ಸ್ವೀಪ್‌ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

England beat Sri Lanka by 6 wickets to sweep the 2 match Test series kvn
Author
Galle, First Published Jan 26, 2021, 10:01 AM IST

ಗಾಲೆ(ಜ.26): ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದರೂ 2ನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಿಂದ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. 

4ನೇ ದಿನವಾದ ಸೋಮವಾರ ಮೊದಲ ಇನ್ನಿಂಗ್ಸ್‌ನಲ್ಲಿ 344 ರನ್‌ಗೆ ಆಲೌಟ್‌ ಆದ ಇಂಗ್ಲೆಂಡ್‌ 37 ರನ್‌ ಮುನ್ನಡೆ ಬಿಟ್ಟುಕೊಟ್ಟಿತು. ಆದರೆ ಸ್ಪಿನ್ನರ್‌ಗಳಾದ ಜ್ಯಾಕ್‌ ಲೀಚ್‌ ಹಾಗೂ ಡಾಮ್‌ ಬೆಸ್‌ ತಲಾ 4 ವಿಕೆಟ್‌ ಕಬಳಿಸಿದ್ದರಿಂದ 2ನೇ ಇನ್ನಿಂಗ್ಸ್‌ನಲ್ಲಿ ಲಂಕಾವನ್ನು 126 ರನ್‌ಗೆ ಆಲೌಟ್‌ ಮಾಡಿತು. 164 ರನ್‌ ಗುರಿಯನ್ನು ಇಂಗ್ಲೆಂಡ್‌, 4 ವಿಕೆಟ್‌ ಕಳೆದುಕೊಂಡು ಬೆನ್ನತ್ತಿತು. ಡಾಮ್‌ ಸಿಬ್ಲಿ (56) ಹಾಗೂ ಜೋಸ್‌ ಬಟ್ಲರ್‌ (46) ನೆರವಾದರು.

ಲಂಕಾದಿಂದಲೇ ಟೀಂ ಇಂಡಿಯಾಗೆ ಜೋ ರೂಟ್‌ ವಾರ್ನಿಂಗ್‌..!

ಸ್ಕೋರ್‌: 
ಲಂಕಾ 381 ಹಾಗೂ 126 
ಇಂಗ್ಲೆಂಡ್‌ 344 ಹಾಗೂ 164/4

ವಿಂಡೀಸ್‌ ವಿರುದ್ಧ ಬಾಂಗ್ಲಾಗೆ 3-0 ಜಯ

ಚಟ್ಟೊಗ್ರಾಮ್‌: ವೆಸ್ಟ್‌ ಇಂಡೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 120 ರನ್‌ಗಳ ಗೆಲುವು ಸಾಧಿಸಿದ ಬಾಂಗ್ಲಾದೇಶ 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 6 ವಿಕೆಟ್‌ಗೆ 297 ರನ್‌ಗಳಿಸಿತು. ವಿಂಡೀಸ್‌ 177 ರನ್‌ಗೆ ಆಲೌಟ್‌ ಆಯಿತು.

ಸ್ಕೋರ್‌: 
ಬಾಂಗ್ಲಾ 297/6 
ವಿಂಡೀಸ್‌ 177/10
 

Follow Us:
Download App:
  • android
  • ios