ಕೊರೋನಾ ಟೆಸ್ಟ್ ಪಾಸಾದ ಇಂಗ್ಲೆಂಡ್, ಪಾಕ್ ಕ್ರಿಕೆಟಿಗರು
ಕೊರೋನಾ ಭೀತಿಯ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗುತ್ತಿವೆ. ಇಂಗ್ಲೆಂಡ್-ಪಾಕಿಸ್ತಾನ ಸರಣಿಗೂ ಮುನ್ನ ನಡೆದ ಕೊರೋನಾ ಪರೀಕ್ಷೆಯನ್ನು ಉಭಯ ದೇಶಗಳ ಆಟಗಾರರು ಯಶಸ್ವಿಯಾಗಿ ಪೂರೈಸಿದ್ದು, ವರದಿ ನೆಗೆಟಿವ್ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸೌಥಾಂಪ್ಟನ್(ಜು.01): ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಕ್ರಿಕೆಟಿಗರು ಇತ್ತೀಚೆಗೆ ನಡೆದ ಕೊರೋನಾ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮಂಗಳವಾರ ತಿಳಿಸಿದೆ.
ಪಾಕಿಸ್ತಾನದ ಎಲ್ಲಾ 20 ಆಟಗಾರರು ಹಾಗೂ 11 ಸಹಾಯಕ ಸಿಬ್ಬಂದಿಯ ವರದಿ ನೆಗೆಟಿವ್ ಬಂದಿದೆ. ಇದೇ ವೇಳೆ ಮೊಹಮಹ್ ಹಫೀಜ್ ಸೇರಿ ಪಾಕಿಸ್ತಾನದ 6 ಸೋಂಕಿತ ಕ್ರಿಕೆಟಿಗರಿಗೆ ಕಳೆದ 3 ದಿನಗಳಲ್ಲಿ 2 ಬಾರಿ ಪರೀಕ್ಷೆ ನಡೆಸಿದ್ದು, ಎರಡು ವರದಿಯಲ್ಲೂ ನೆಗೆಟಿವ್ ಬಂದಿದೆ. ಹೀಗಾಗಿ ಸದ್ಯದಲ್ಲೇ 6 ಮಂದಿ ಇಂಗ್ಲೆಂಡ್‌ಗೆ ತೆರಳಲಿದ್ದಾರೆ.
ಮನೋವೈದ್ಯರ ಮೊರೆ ಹೋದ ವೇಗಿ ಸ್ಟುವರ್ಟ್ ಬ್ರಾಡ್!
ಲಾಕ್‌ಡೌನ್ ಬಳಿಕ ಕ್ರಿಕೆಟ್ ಸರಣಿ ಆರಂಭವಾಗಲು ದಿನಗಣನೆ ಆರಂಭವಾಗಿವೆ. ಇದೇ ಜುಲೈ 08ರಿಂದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಜರುಗಲಿದೆ. ಇದಾದ ಬಳಿಕ ಜುಲೈ 30ರಿಂದ ಪಾಕಿಸ್ತಾನ ತಂಡವು 3 ಟೆಸ್ಟ್ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ.
ಅಭ್ಯಾಸ ಆರಂಭಿಸಿದ ದ.ಆಫ್ರಿಕಾ ಕ್ರಿಕೆಟರ್ಸ್
ಜೋಹಾನ್ಸ್‌ಬರ್ಗ್: ಕೊರೋನಾ ಸೋಂಕಿನಿಂದಾಗಿ ಮಾ.15ರಿಂದ ಕ್ರಿಕೆಟ್ ಚಟುವಟಿಕೆಗಳನ್ನು ಸ್ಥಗಿತಗೊಳ್ಳಲಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಮಂಗಳವಾರದಿಂದ ಅಭ್ಯಾಸ ಆರಂಭಿಸಿದ್ದಾರೆ.
ದೇಶದ ಕ್ರೀಡಾ ಸಚಿವಾಲಯ ಅನುಮತಿ ನೀಡಿದ ಬಳಿಕ, ಕ್ವಿಂಟನ್ ಡಿ ಕಾಕ್ ನೇತೃತ್ವದಲ್ಲಿ 44 ಕ್ರಿಕೆಟಿಗರು ಅಭ್ಯಾಸ ಪುನಾರಂಭಿಸಿದರು. ತಮ್ಮ ತಮ್ಮ ಊರುಗಳಲ್ಲೇ ಮಾನ್ಯತೆ ಹೊಂದಿರುವ ಕೋಚ್‌ಗಳ ಸಹಾಯದೊಂದಿಗೆ ಸಣ್ಣ ಸಣ್ಣ ಗುಂಪುಗಳಲ್ಲಿ ಆಟಗಾರರು ಅಭ್ಯಾಸ ನಡೆಸಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ತಿಳಿಸಿದೆ.