Asianet Suvarna News Asianet Suvarna News

Moeen Ali Good bye ಟೆಸ್ಟ್‌ ಕ್ರಿಕೆಟ್‌ಗೆ ದಿಢೀರ್ ಗುಡ್‌ಬೈ ಹೇಳಿದ ಮೋಯಿನ್‌ ಅಲಿ

* ಇಂಗ್ಲೆಂಡ್ ಟೆಸ್ಟ್‌ ತಂಡಕ್ಕೆ ಗುಡ್‌ ಬೈ ಹೇಳಿದ ಮೋಯಿನ್ ಅಲಿ

* ಸೀಮಿತ ಓವರ್‌ಗಳ ಕ್ರಿಕೆಟ್ ಮಾದರಿಯಲ್ಲಿ ಮುಂದುವರೆಯುವುದಾಗಿ ಖಚಿತಪಡಿಸಿದ ಅಲಿ

* ಭಾರತ ವಿರುದ್ದ ಇತ್ತೀಚೆಗಷ್ಟೇ ಕಡೆಯ ಟೆಸ್ಟ್ ಪಂದ್ಯವನ್ನಾಡಿದ್ದ ಮೋಯಿನ್ ಅಲಿ

England All Rounder Moeen Ali retires from Test cricket kvn
Author
London, First Published Sep 28, 2021, 9:32 AM IST

ಲಂಡನ್‌(ಸೆ.28): ಇಂಗ್ಲೆಂಡ್‌ನ ಆಲ್ರೌಂಡರ್‌ ಮೋಯಿನ್‌ ಅಲಿ(Moeen Ali) ಸೋಮವಾರ ಟೆಸ್ಟ್‌ ಕ್ರಿಕೆಟ್‌(Test Cricket)ಗೆ ನಿವೃತ್ತಿ(Retirement) ಘೋಷಿಸಿದ್ದಾರೆ. ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ದಿನಗಳ ಕಾಲ ಉಳಿಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. 

ನನಗೀಗ 34 ವರ್ಷ, ನನಗೆ ಎಷ್ಟು ಸಾಧ್ಯವೋ ಅಷ್ಟು ದೀರ್ಘಕಾಲ ಕ್ರಿಕೆಟ್‌ ಆಡಿ ಎಂಜಾಯ್‌ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಅಲಿ ಹೇಳಿದ್ದಾರೆ. ಎಲ್ಲಿಯವರೆಗೂ ನೀವು ಚೆನ್ನಾಗಿ ಆಡುತ್ತೀರೋ ಅಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್ ಒಂದು ಅದ್ಭುತ ಕ್ರಿಕೆಟ್ ಮಾದರಿ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಾಕಷ್ಟು ಕಲಿಯಬಹುದು ಹಾಗೂ ಹೆಚ್ಚಿನ ಪ್ರತಿಫಲ ಪಡೆಯಬಹುದು ಎಂದು ಮೋಯಿನ್ ಅಲಿ ಅಭಿಪ್ರಾಯಪಟ್ಟಿದ್ದಾರೆ.

ಮೋಯಿನ್ ಅಲಿ 2014ರಲ್ಲಿ ಶ್ರೀಲಂಕಾ ಎದುರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರೂ ಸಹಾ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಕ್ಕಿಂತ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದೇ ಹೆಚ್ಚು. ತಾವಾಡಿದ ಎರಡನೇ ಟೆಸ್ಟ್‌ನಲ್ಲೇ ಮೋಯಿನ್ ಅಲಿ ಶತಕ ಸಿಡಿಸಿದರಾದರೂ, ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ತೋರಲು ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಫಲವಾಗಿದ್ದರು. 

ಮೋಯಿನ್ ಅಲಿ ಬರೋಬ್ಬರಿ 18 ತಿಂಗಳುಗಳ ಕಾಲ ಬಿಡುವಿನ ಬಳಿಕ 2021ರಲ್ಲಿ ಚೆನ್ನೈನಲ್ಲಿ ನಡೆದ ಭಾರತ ವಿರುದ್ದದ ಟೆಸ್ಟ್‌ ಸರಣಿ ವೇಳೆ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದರು. ಕಮ್‌ಬ್ಯಾಕ್‌ ಪಂದ್ಯದಲ್ಲೇ ಮೋಯಿನ್ ಅಲಿ 8 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇದೆಲ್ಲದರ ಹೊರತಾಗಿಯೂ ಇಂಗ್ಲೆಂಡ್ ತಂಡವು ಟೆಸ್ಟ್ ಪಂದ್ಯವನ್ನು ಸೋತಿತ್ತು. ಇದರ ಬೆನ್ನಲ್ಲೇ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಅಂಗವಾಗಿ ಮೋಯಿನ್ ಅಲಿಯನ್ನು ತವರಿಗೆ ಕಳಿಸಲಾಗಿತ್ತು. ಇನ್ನು ಬೆನ್ ಸ್ಟೋಕ್ಸ್‌(Ben Stokes) ಹಾಗೂ ಕ್ರಿಸ್‌ ವೋಕ್ಸ್‌ ಅನುಪಸ್ಥಿತಿಯಲ್ಲಿ ಭಾರತ ವಿರುದ್ದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮೋಯಿನ್ ಅಲಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಕಳೆದ ತಿಂಗಳು ಓವಲ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಮೋಯಿನ್‌ ಅಲಿ ಇಂಗ್ಲೆಂಡ್ ಪರ ಕಡೆಯ ಟೆಸ್ಟ್‌ ಪಂದ್ಯವನ್ನಾಡಿದ್ದರು. 

ಪಡಿಕ್ಕಲ್ ಕನ್ನಡಾಭಿಮಾನ: ನಾವು ಕನ್ನಡಿಗರು, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲೇ ಮಾತು!

ಮೋಯಿನ್ ಅಲಿ 64 ಟೆಸ್ಟ್‌ಗಳನ್ನು ಆಡಿದ್ದು 2,914 ರನ್‌ ಕಲೆಹಾಕಿದ್ದಾರೆ. ಜೊತೆಗೆ 195 ವಿಕೆಟ್‌ ಸಹ ಪಡೆದಿದ್ದಾರೆ. 2016ರಲ್ಲಿ ಅತ್ಯುತ್ತಮ ಆಟವಾಡಿದ್ದ ಅಲಿ, ಆ ವರ್ಷ ಟೆಸ್ಟ್‌ನಲ್ಲಿ 1,078 ರನ್‌ ಕಲೆಹಾಕಿದ್ದರು. ತಮ್ಮ ವೃತ್ತಿಬದುಕಿನಲ್ಲಿ ಗಳಿಸಿರುವ 5 ಶತಕಗಳಲ್ಲಿ 4 ಸೆಂಚುರಿಗಳನ್ನು ಅವರು 2016ರಲ್ಲೇ ಗಳಿಸಿದ್ದರು. ಅದೇ ವರ್ಷ ಐಸಿಸಿ ಟೆಸ್ಟ್‌ ಆಲ್ರೌಂಡರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದರು.

ಯುಎಇನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮೋಯಿನ್ ಅಲಿ ಚೆನ್ನೈ ಸೂಪರ್‌ ಕಿಂಗ್ಸ್(CSK) ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸಿಎಸ್‌ಕೆ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯುತ್ತಿರುವ ಮೋಯಿನ್‌ ಅಲಿ ಬ್ಯಾಟಿಂಗ್ ಆಲ್ರೌಂಡರ್‌ ಆಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಮೋಯಿನ್‌ ಅಲಿ ಟೆಸ್ಟ್ ತಂಡಕ್ಕೆ ವಿದಾಯ ಹೇಳಿದ್ದು ಇಂಗ್ಲೆಂಡ್ ಟೆಸ್ಟ್ ತಂಡದ ಪಾಲಿಗೆ ಬಹುದೊಡ್ಡ ನಷ್ಟ ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್‌(Joe Root) ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios