ಚೆನ್ನೈ(ಫೆ.17): 2020ರ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಮೋಯಿನ್ ಅಲಿ ಫೆ.18ರಂದು ನಡೆಯಲಿರುವ ಐಪಿಎಲ್‌ ಹರಾಜಿಗೂ ಮುನ್ನ ಫ್ರಾಂಚೈಸಿಗಳ ಮನಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಹೌದು, ಭಾರತ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನ ಕೊನೆಯಲ್ಲಿ ಮೋಯಿನ್‌ ಅಲಿ ಕೇವಲ 18 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 3 ಬೌಂಡರಿಯೊಂದಿಗೆ 43 ರನ್‌ ಸಿಡಿಸಿ ಗಮನ ಸೆಳೆದಿದ್ದಾರೆ. ಅದರಲ್ಲೂ ಅಕ್ಷರ್ ಪಟೇಲ್‌ ಒಂದೇ ಓವರ್‌ನಲ್ಲಿ ಮುಗಿಲೆತ್ತರದ ಹ್ಯಾಟ್ರಿಕ್ ಸಿಕ್ಸರ್‌ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಎದುರೇ ಅಬ್ಬರಿಸಿದರು.

ನಾನು ಈ ತಂಡದ ಪರ ಐಪಿಎಲ್‌ ಆಡಲು ಇಷ್ಟಪಡುತ್ತೇನೆ ಎಂದ ಗ್ಲೆನ್‌ ಮ್ಯಾಕ್ಸ್‌ವೆಲ್‌..!

ಇಂಗ್ಲೆಂಡ್‌ ತಂಡದ ಉಪಯುಕ್ತ ಆಲ್ರೌಂಡರ್ ಅಗಿ ಗುರುತಿಸಿಕೊಂಡಿರುವ ಮೋಯಿನ್ ಅಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಕಬಳಿಸಿ ಮಿಂಚಿದ್ದರು. ಇದರ ಜತೆಗೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಎರಡು ಇನಿಂಗ್ಸ್‌ಗಳಲ್ಲೂ ಪೆವಿಲಿಯನ್ನಿಗಟ್ಟುವಲ್ಲಿ ಮೋಯಿನ್ ಅಲಿ ಸಫಲವಾಗಿದ್ದರು.  ಆರ್‌ಸಿಬಿಯಿಂದ ಹೊರಬಿದ್ದಿರುವ ಅಲಿ ತಮ್ಮ ಮೂಲಬೆಲೆಯನ್ನು 2 ಕೋಟಿ ರುಪಾಯಿಗೆ ನಿಗದಿ ಪಡಿಸಿಕೊಂಡಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌: 2ನೇ ಸ್ಥಾನಕ್ಕೇರಿದ ಭಾರತ

ಚೆಪಾಕ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡು ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದ್ದ ಭಾರತ, 2ನೇ ಟೆಸ್ಟ್‌ನಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಫೈನಲ್‌ಗೆ ಅರ್ಹತೆ ಪಡೆಯಲು ಭಾರತ, ಇಂಗ್ಲೆಂಡ್‌ ವಿರುದ್ಧ ಬಾಕಿ ಇರುವ 2 ಟೆಸ್ಟ್‌ಗಳಲ್ಲಿ ಕನಿಷ್ಠ 1ರಲ್ಲಿ ಗೆಲ್ಲಲೇಬೇಕಿದೆ. ಆದರೆ ಒಂದೂ ಪಂದ್ಯವನ್ನು ಸೋಲುವಂತಿಲ್ಲ. ಇಂಗ್ಲೆಂಡ್‌ ಫೈನಲ್‌ಗೇರಲು ಇನ್ನುಳಿದಿರುವ ಎರಡರಲ್ಲೂ ಜಯಿಸಬೇಕು. ಭಾರತ ಹಾಗೂ ಇಂಗ್ಲೆಂಡ್‌ ತಲಾ ಒಂದೊಂದು ಗೆದ್ದರೆ, ಆಗ ಆಸ್ಪ್ರೇಲಿಯಾ ಫೈನಲ್‌ಗೇರಲಿದೆ. ನ್ಯೂಜಿಲೆಂಡ್‌ ಈಗಾಗಲೇ ಫೈನಲ್‌ ಪ್ರವೇಶಿಸಿದೆ.

ಭಾರತದಲ್ಲಿ ಅತಿಹೆಚ್ಚು ಜಯ: ಧೋನಿ ದಾಖಲೆ ಸರಿಗಟ್ಟಿದ ಕೊಹ್ಲಿ

ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ತವರಿನಲ್ಲಿ 21ನೇ ಗೆಲುವು(ಒಟ್ಟು 28 ಪಂದ್ಯ) ದಾಖಲಿಸಿದೆ. ಧೋನಿ ಸಹ ನಾಯಕನಾಗಿ ಭಾರತದಲ್ಲಿ 21 ಟೆಸ್ಟ್‌ ಗೆಲುವು (ಒಟ್ಟು 30 ಪಂದ್ಯ)ಗಳನ್ನು ಕಂಡಿದ್ದರು. ವಿರಾಟ್‌ ಇನ್ನೊಂದು ಗೆಲುವು ದಾಖಲಿಸಿದರೆ ಭಾರತದಲ್ಲಿ ಅತ್ಯಂತ ಯಶಸ್ವಿ ನಾಯಕ ಎನಿಸಲಿದ್ದಾರೆ.