ಎಮರ್ಜಿಂಗ್ ಏಷ್ಯಾಕಪ್ ಟೂರ್ನಿ: ಇಂದು ಭಾರತ vs ಆಫ್ಘನ್ ಸೆಮೀಸ್ ಫೈಟ್
ತಿಲಕ್ ವರ್ಮಾ ನಾಯಕತ್ವದ ಭಾರತ ‘ಎ’ ತಂಡ ಗುಂಪು ಹಂತದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಇದೀಗ ಆಫ್ಘಾನ್ ಎದುರು ಸೆಮೀಸ್ ಕಾದಾಟಕ್ಕೆ ಸಜ್ಜಾಗಿದೆ.
ಮಸ್ಕತ್(ಒಮಾನ್): ಎಮರ್ಜಿಂಗ್ ಏಷ್ಯಾಕಪ್ ಟಿ20 ಟೂರ್ನಿಯ ಸೆಮಿಫೈನಲ್‌ನಲ್ಲಿ ಶುಕ್ರವಾರ ಭಾರತ ‘ಎ’ ತಂಡಕ್ಕೆ ಅಫ್ಘಾನಿಸ್ತಾನ ಸವಾಲು ಎದುರಾಗಲಿದೆ.
ತಿಲಕ್ ವರ್ಮಾ ನಾಯಕತ್ವದ ಭಾರತ ‘ಎ’ ತಂಡ ಗುಂಪು ಹಂತದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿಯೇ ನಾಕೌಟ್ ಪ್ರವೇಶಿಸಿದೆ. 2013ರ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿ, 2018 ಹಾಗೂ 2023ರಲ್ಲಿ ರನ್ನರ್-ಅಪ್ ಸ್ಥಾನ ಪಡೆದಿರುವ ಭಾರತ ಟೂರ್ನಿಯಲ್ಲಿ 4ನೇ ಬಾರಿ ಫೈನಲ್‌ಗೇರುವ ತವಕದಲ್ಲಿದೆ. ಅತ್ತ ‘ಎ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿದ್ದ ಆಫ್ಘನ್, ಮೊದಲ ಬಾರಿ ಫೈನಲ್‌ಗೇರಲು ಕಾಯುತ್ತಿದೆ.
14ನೇ ವರ್ಷದಲ್ಲೇ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಭಾರತದ ಮಾಜಿ ನಾಯಕಿ ರಾಂಪಾಲ್ ಹಾಕಿಗೆ ನಿವೃತ್ತಿ
ಶುಕ್ರವಾರ ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಸೆಣಸಾಡಲಿವೆ. ಕಳೆದೆರಡು ಆವೃತ್ತಿಗಳ ಚಾಂಪಿಯನ್ ಪಾಕಿಸ್ತಾನ ಹ್ಯಾಟ್ರಿಕ್ ಫೈನಲ್ ಮೇಲೆ ಕಣ್ಣಿಟ್ಟಿದ್ದು, 2017, 2018ರ ಪ್ರಶಸ್ತಿ ವಿಜೇತ ಲಂಕಾ 5 ವರ್ಷ ಬಳಿಕ ಮತ್ತೆ ಫೈನಲ್‌ಗೇರುವ ನಿರೀಕ್ಷೆಯಲ್ಲಿದೆ. ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.
ಪಂದ್ಯ: ಪಾಕಿಸ್ತಾನ-ಶ್ರೀಲಂಕಾ, ಮಧ್ಯಾಹ್ನ 2.30ಕ್ಕೆ
ಭಾರತ-ಅಫ್ಘಾನಿಸ್ತಾನ, ಸಂಜೆ 7ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್.
ನ್ಯೂಜಿಲೆಂಡ್ ವಿರುದ್ಧ ಭಾರತ ವನಿತೆಯರಿಗೆ 59 ರನ್ ಜಯ
ಅಹಮದಾಬಾದ್: ದೀಪ್ತಿ ಶರ್ಮಾ ಆಲ್ರೌಂಡ್ ಆಟ, ಬೌಲರ್‌ಗಳ ಮೊನಚು ದಾಳಿ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 59 ರನ್ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 44.3 ಓವರ್‌ಗಳಲ್ಲಿ 227 ರನ್‌ಗೆ ಆಲೌಟಾಯಿತು. ಚೊಚ್ಚಲ ಪಂದ್ಯವಾಡಿದ ತೇಜಲ್ ಹಸಬ್ಬಿಸ್ 42, ದೀಪ್ತಿ ಶರ್ಮಾ 41, ಯಸ್ತಿಕಾ ಭಾಟಿಯಾ 37, ಜೆಮಿಮಾ 35, ಶಫಾಲಿ ವರ್ಮಾ 33 ರನ್ ಸಿಡಿಸಿದರು. ನಾಯಕಿ ಸ್ಮೃತಿ ಮಂಧನಾ ಕೇವಲ 5 ರನ್ ಗಳಿಸಿದರು.
Pune Test: ವಾಷಿಂಗ್ಟನ್ ಸುಂದರ್ ದಾಳಿಗೆ ಕಿವೀಸ್ ಛಿದ್ರ; ಮೊದಲ ದಿನವೇ ನ್ಯೂಜಿಲೆಂಡ್ ಆಲೌಟ್
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕಿವೀಸ್ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ ಓವರ್‌ಗಳಲ್ಲಿ 168 ರನ್‌ಗೆ ಆಲೌಟಾಯಿತು. ಬೂಕ್ ಹಾಲಿಡೆ(39) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಕಲೆಹಾಕಿದರು. ರಾಧಾ ಯಾದವ್ 3, ಸೆಮಾ ಠಾಕೂರ್ 2, ದೀಪ್ತಿ ಶರ್ಮಾ, ಅರುಂಧತಿ ತಲಾ 1 ವಿಕೆಟ್ ಕಿತ್ತರು. 2ನೇ ಏಕದಿನ ಅ.27ಕ್ಕೆ ನಡೆಯಲಿದೆ.
ಸ್ಕೋರ್: ಭಾರತ 44.3 ಓವರಲ್ಲಿ 227/10 (ತೇಜಲ್ 42, ದೀಪ್ತಿ 42, ಅಮೇಲಿ 4-42)
ನ್ಯೂಜಿಲೆಂಡ್ 40.4 ಓವರಲ್ಲಿ 168/10 (ಬ್ರೂಕ್ 39, ರಾಧಾ 3-35, ಸೈಮಾ 2-26)
ಪಂದ್ಯಶೇಷ: ದೀಪ್ತಿ ಶರ್ಮಾ
ಟೆಸ್ಟ್: ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 267ಕ್ಕೆ ಆಲೌಟ್
ರಾವಲ್ಪಿಂಡಿ: ಪಾಕಿಸ್ತಾನ ವಿರುದ್ಧ 3ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೊದಲ ದಿನವೇ 267 ರನ್‌ಗೆ ಆಲೌಟಾಗಿದೆ. ಆರಂಭಿಕ ಆಟಗಾರ ಬೆನ್ ಡಕೆಟ್ 52 ರನ್ ಗಳಿಸಿದರು. ಬಳಿಕ 118ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಜೆಮೀ ಸ್ಮಿತ್(89) ಆಸರೆಯಾದರು. ಪಾಕ್‌ನ ಸಾಜಿದ್ ಖಾನ್ 6, ನೊಮಾನ್ ಅಲಿ 3 ವಿಕೆಟ್ ಕಿತ್ತರು. ಬಳಿಕ ಇನ್ನಿಂಗ್ಸ್ ಆರಂಭಿಸಿದ ಪಾಕ್ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ಗೆ 73 ರನ್ ಗಳಿಸಿದ್ದು, ಇನ್ನೂ 194 ರನ್ ಹಿನ್ನಡೆಯಲ್ಲಿದೆ.