ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕ ರಾಣಿ ರಾಂಪಾಲ್, ಹಾಕಿ ವೃತ್ತಿಬದುಕಿಗೆ ವಿದಾಯ ಘೋಷಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಭಾರತದ ತಾರಾ ಹಾಕಿ ಆಟಗಾರ್ತಿ, ಮಾಜಿ ನಾಯಕಿ ರಾಣಿ ರಾಂಪಾಲ್ ತಮ್ಮ 15 ವರ್ಷಗಳ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ. 2008ರಲ್ಲಿ ತಮ್ಮ 14ನೇ ವರ್ಷದಲ್ಲೇ ಭಾರತ ತಂಡಕ್ಕೆ ಕಾಲಿಟ್ಟಿದ್ದ ರಾಣಿ ಗುರುವಾರ ಹಾಕಿಗೆ ನಿವೃತ್ತಿ ಘೋಷಿಸುವುದಾಗಿ ಸಾಮಾಜಿಕ ತಾಣಗಳಲ್ಲಿ ಪ್ರಕಟಿಸಿದ್ದಾರೆ. ರಾಣಿ ರಾಂಪಾಲ್ 2008ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಒಲಿಂಪಿಕ್ಸ್ ಕ್ವಾಲಿಫೈಯರ್ ವರ್ಷದಲ್ಲೇ ಭಾರತ ಮಹಿಳಾ ಹಾಕಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು.
ರಾಣಿ ರಾಂಪಾಲ್ ಭಾರತ ಮಹಿಳಾ ತಂಡವು ಕಂಡ ಯಶಸ್ವಿ ಹಾಕಿ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದು, ಅವರ ನಾಯಕತ್ವದಲ್ಲೇ ಭಾರತದ 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು. ಏಷ್ಯನ್ ಗೇಮ್ಸ್, ಏಷ್ಯಾಕಪ್, ಏಷ್ಯನ್ ಚಾಂಪಿಯನ್‌ಶಿಪ್, ಜೂನಿಯರ್ ವಿಶ್ವಕಪ್ ಪದಕ ವಿಜೇತ ತಂಡದಲ್ಲೂ ರಾಣಿ ಇದ್ದರು.
ಫಿಟ್ನೆಸ್ ಕಾರಣಕ್ಕೆ ಪೃಥ್ವಿ ಶಾ ರಣಜಿಯಿಂದಲೂ ಔಟ್!
"ಇದೊಂದು ಅದ್ಭುತವಾದ ಪಯಣ. ನಾನು ಭಾರತ ಪರ ಇಷ್ಟು ದೀರ್ಘಕಾಲ ಆಡುತ್ತೇನೆ ಎಂದು ಎಂದೆಂದೂ ಯೋಚಿಸಿರಲಿಲ್ಲ. ನಾನು ನನ್ನ ಬಾಲ್ಯದಲ್ಲಿ ಸಾಕಷ್ಟು ಬಡತನವನ್ನು ಅನುಭವಿಸಿದ್ದೇನೆ. ಆದರೆ ಅದು ನಾನು ಭಾರತವನ್ನು ಪ್ರತಿನಿಧಿಸಬೇಕು ಎನ್ನುವ ಗುರಿಗೆ ಅಡ್ಡಿಯಾಗಲಿಲ್ಲ" ಎಂದು ಸುದ್ದಿಗೋಷ್ಟಿಯಲ್ಲಿ ರಾಣಿ ರಾಂಪಾಲ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ಭಾರತ ಪರ 254 ಪಂದ್ಯಗಳನ್ನಾಡಿರುವ 29 ವರ್ಷದ ರಾಣಿ 205 ಗೋಲು ಬಾರಿಸಿದ್ದಾರೆ. ಅವರು ಧ್ಯಾನ್‌ಚಂದ್ ಖೇಲ್ ರತ್ನ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗಷ್ಟೇ ಅವರನ್ನು ರಾಷ್ಟ್ರೀಯ ಸಬ್ ಜೂನಿಯರ್ ಮಹಿಳಾ ತಂಡಕ್ಕೆ ಕೋಚ್ ಆಗಿ ನೇಮಕಗೊಳಿಸಲಾಗಿತ್ತು.
ಕನಸುಗಳ ಬೆನ್ನೇರಿ ಹೊರಟ ಬೆಂಗಳೂರಿನ ‘ಆಸ್ಟಿನ್ ಟೌನ್ ಹುಡುಗ’ ವಿನೀತ್ ವೆಂಕಟೇಶ್
ಜೆರ್ಸಿ ನಂಬರ್ 28ಗೂ ನಿವೃತ್ತಿ: ಇನ್ನು ರಾಣಿ ರಾಂಪಾಲ್ ಅಂತಾರಾಷ್ಟ್ರೀಯ ಹಾಕಿ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಹಾಕಿ ಇಂಡಿಯಾ, ಅವರ ಜೆರ್ಸಿ ನಂಬರ್ 28ಗೂ ನಿವೃತ್ತಿ ಮಾಡಿದೆ. ರಾಣಿ ರಾಂಪಾಲ್ ಭಾರತ ಮಹಿಳಾ ತಂಡದ ಹಾಕಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಜೆರ್ಸಿ ನಂಬರ್ 28 ಅನ್ನು ರಿಟೈರ್ಡ್ ಮಾಡಿದೆ.