ಟೀಂ ಇಂಡಿಯಾ ನಾಯಕ ಶುಬ್‌ಮನ್ ಗಿಲ್ ಹೊಸ ದಾಖಲೆ ಬರೆದಿದ್ದಾರೆ. 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲೂ ಗಿಲ್ ಸೆಂಚುರಿ ಸಿಡಿಸಿದ್ದರೆ. ಈ ಮೂಲಕ ಹಲವು ದಾಖಲೆ ಬರೆದಿದ್ದಾರೆ.
ಎಡ್ಜ್‌ಬಾಸ್ಟನ್ (ಜು.04) ಇಂಗ್ಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಭರ್ಜರಿ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಮೊದಲ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಇದರ ನಡುವೆ ನಾಯಕ ಶುಬ್‌ಮನ್ ಗಿಲ್ ಹೊಸ ದಾಖಲೆ ಬರೆದಿದ್ದಾರೆ. 2 ಟೆಸ್ಟ್ ಪಂದ್ಯದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಗಿಲ್ ಅಬ್ಬರಿಸಿದ್ದಾರೆ. ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಗಿಲ್ ಶತಕ ಸಿಡಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ್ದ ಗಿಲ್, ಮೊದಲ ಟೆಸ್ಟ್ ಪಂದ್ಯದಲ್ಲೂ ಸೆಂಚುರಿ ಸಾಧನೆ ಮಾಡಿದ್ದರು. ಒಂದೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಸಿಡಿಸಿದ ವಿಶ್ವದ 9ನೇ ಬ್ಯಾಟರ್ ಅನ್ನೋ ಹೆಗ್ಗಳಿಕೆಗೂ ಗಿಲ್ ಪಾತ್ರರಾಗಿದ್ದಾರೆ.
ಎರಡು ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಾಧನೆ ಮಾಡಿದ ಟೀಂ ಇಂಡಿಯಾ ನಾಯಕರು
ಸುನಿಲ್ ಗವಾಸ್ಕರ್ vs ವೆಸ್ಟ್ ಇಂಡೀಸ್, 1978
ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ, 2014
ಶುಬ್‌ಮನ್ ಗಿಲ್ vs ಇಂಗ್ಲೆಂಡ್, 2025
ಹೆಡಿಂಗ್ಲೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಗಿಲ್ 147 ರನ್ ಸಿಡಿಸಿದ್ದರು. ಇದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ನಿರೀಕ್ಷಿತ ರನ್ ಸಿಡಿಸಲು ವಿಫಲವಾಗಿದ್ದು. ಆದರೆ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಗಿಲ್ 269 ರನ್ ಸಿಡಿಸಿದ್ದರು. ಈ ಮೂಲಕ 4 ಇನ್ನಿಂಗ್ಸ್ ಪೈಕಿ ಮೂರು ಇನ್ನಿಂಗ್ಸ್‌ನಲ್ಲಿ ಶುಬ್‌ಮನ್ ಗಿಲ್ ಅಬ್ಬರಿಸಿದ್ದಾರೆ. ಒಂದು ದ್ವಿಶತಕ ಹಾಗೂ 2 ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಭಾರತಕ್ಕೆ 484 ರನ್ ಮುನ್ನಡೆ
ಶುಬ್‌ಮನ್ ಗಿಲ್ ಸೆಂಚುರಿಯಿಂದ ಟೀಂ ಇಂಡಿಯಾ ಚಹಾ ವಿರಾಮದ ವೇಳೆ 484 ರನ್ ಮುನ್ನಡೆ ಪಡೆದಿದೆ. ಗಿಲ್ ಅಜೇಯ 100 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದರೆ, ರವೀಂದ್ರ ಜಡೇಜಾ ಅಜೇಯ 25 ರನ್ ಸಿಡಿಸಿದ್ದಾರೆ. ಚಹಾ ವಿರಾಮದ ವೇಳೆ ಟೀಂ ಇಂಡಿಯಾ ಇನ್ನಿಂಗ್ಸ್‌ನಲ್ಲಿ4 ವಿಕೆಟ್ ನಷ್ಟಕ್ಕೆ 304 ರನ್ ಸಿಡಿಸಿದೆ.
ಕೊಹ್ಲಿ ದಾಖಲೆ ಬ್ರೇಕ್
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಗಿಲ್, ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ. ನಾಯಕನಾಗಿ ಮೊದಲ ಟೆಸ್ಟ್ ಸರಣಿಯಲ್ಲಿ ಗಿಲ್ ಈಗಾಗಲೇ 500 ರನ್ ಗಡಿ ದಾಟಿದ್ದಾರೆ. ವಿರಾಟ್ ಕೊಹ್ಲಿ ನಾಯಕನಾಗಿ ಮೊದಲ ಸರಣಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 449 ರನ್ ಸಿಡಿಸಿದ್ದರು. 2014-15ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಕೊಹ್ಲಿ ದಾಖಲೆಯನ್ನು ಗಿಲ್ ಪುಡಿ ಮಾಡಿದ್ದಾರೆ.