ಯಶಸ್ವಿ ಜೈಸ್ವಾಲ್ LWD ಔಟ್‌ಗೆ ಡಿಆರ್‌ಎಸ್ ರಿವ್ಯೂವ್ ಪಡೆದಿದ್ದಾರೆ. ಆದರೆ ಇದು ಹೇಗೆ ಸಾಧ್ಯ ಎಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಂಡಾಮಂಡಲವಾದ ಘಟನೆ ನಡಿದಿದೆ. ಅಷ್ಟಕ್ಕೂ ಸ್ಟೋಕ್ಸ್ ಅಕ್ಷೇಪ ವ್ಯಕ್ತಪಡಿಸಿದ್ದು ಯಾಕೆ?

ಎಡ್ಜ್‌ಬಾಸ್ಟನ್ (ಜು.04) ಇಂಗ್ಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ಮೊದಲ ವಿಕೆಟ್ ಕಳೆದುಕೊಂಡಿದೆ. ಇಂಗ್ಲೆಂಡ್ ತಂಡವನ್ನು 407 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ 180 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿತ್ತು. ಆದರೆ ಆರಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಜೋಶ್ ಟಾಂಗ್ ಎಸೆತದಲ್ಲಿ LWD ಬಲೆಗೆ ಬಿದ್ದ ಜೈಸ್ವಾಲ್‌ಗೆ ಅಂಪೈರ್ ಔಟ್ ತೀರ್ಪು ನೀಡಿದ್ದರು. ಆದರೆ ಈ ತೀರ್ಪನ್ನು ಜೈಸ್ವಾಲ್ ಡಿಆರ್‌ಎಸ್ ರಿವ್ಯೂವ್‌ ಪಡೆದುಕೊಂಡರು. ತಕ್ಷಣವೇ ಕ್ರೀಸ್ ನಡುವೆ ಬಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಇದು ಸಾಧ್ಯವಿಲ್ಲ, ಜೈಸ್ವಾಲ್‌ಗೆ ಡಿಆರ್‌ಎಸ್ ರಿವ್ಯೂವ್‌ ಪಡೆಯಲು ಅರ್ಹರಲ್ಲ ಎಂದು ಅಂಪೈರ್ ಬಳಿ ಅಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಜೈಸ್ವಾಲ್ ರಿವ್ಯೂವ್ ವೇಳೆ ನಡೆದಿದ್ದೇನು?

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಎಚ್ಚರಿಕೆ ಆರಂಭ ಪಡೆದಿತ್ತು. ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಅರ್ಧಶತಕ ಜೊತೆಯಾಟ ನೀಡಿದ್ದರು. ಆದರೆ ಜೋಶ್ ಟಾಂಗ್ ಓವರ್‌ನ 4ನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ LWD ಬಲೆಗೆ ಬಿದ್ದಿದ್ದರು. ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ತಕ್ಷಣವೇ ನಾನ್ ಸ್ಟ್ರೈಕರ್ ಕೆಎಲ್ ರಾಹುಲ್ ಬಳಿ ಬಂದ ಯಶಸ್ವಿ ಜೈಸ್ವಾಲ್, ಬಾಲ್ ವಿಕೆಟ್‌ನಿಂದ ಹೊರಗೆ ಹೋಗುತ್ತಿರುವ ಸಾಧ್ಯತೆ ಇದೆ. ಜೊತೆಗೆ ಎತ್ತರ ಕೂಡ ಹೆಚ್ಚಾಗಿದೆ ಎಂದು ಜೈಸ್ವಾಲ್ ಹೇಳಿದ್ದಾರೆ. ಇಬ್ಬರು ಚರ್ಚಿಸಿ ಡಿಆರ್‌ಎಸ್‌ಗೆ ಜೈಸ್ವಾಲ್ ರಿವ್ಯೂವ್ ಮಾಡಿದ್ದಾರೆ. ಅಂಪೈರ್ ಜೈಸ್ವಾಲ್ ಮನವಿಯನ್ನು ಪುರಸ್ಕರಿಸಿ ಥರ್ಡ್ ಅಂಪೈರ್‌ಗೆ ಸೂಚನೆ ನೀಡಿದ್ದಾರೆ.

Scroll to load tweet…

ಸ್ಟೋಕ್ಸ್ ಅಕ್ಷೇಪ ಯಾಕೆ?

ಡಿಆರ್‌ಎಸ್ ರಿವ್ಯೂವ್ ಪಡೆಯಲು ಕೇವಲ 15 ಸೆಕೆಂಡ್ ಸಮಯವಿದೆ. ಈ ಸಮಯದಲ್ಲಿ ತಮ್ಮ ನಿರ್ಧಾರವನ್ನು ಅಂಪೈರ್‌ಗೆ ತಿಳಿಸಬೇಕು. ಆದರೆ ಜೈಸ್ವಾಲ್ ರಿವ್ಯೂವ್ ಪಡೆಯುವಾಗ 15 ಸೆಕೆಂಡ್ ಜಸ್ಟ್ ಮುಗಿದಿದೆ. ನಿಯಮದ ಪ್ರಕಾರ ಜೈಸ್ವಾಲ್ ರಿವ್ಯೂವ್ ಪಡೆಯಲು ಅರ್ಹರಲ್ಲ. ಇದೇ ಕಾರಣಕ್ಕೆ ಬೆನ್ ಸ್ಟೋಕ್ಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೈಸ್ವಾಲ್ ಸಮಯ ಮುಗಿದ ಬಳಿಕ ರಿವ್ಯೂವ್ ಮನವಿ ಮಾಡಿದ್ದಾರೆ ಎಂದು ಸ್ಟೋಕ್ಸ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಅಂಪೈರ್ ಸ್ಟೋಕ್ಸ್ ಸಮಾಧಾನಿಸಿ ಜೈಸ್ವಾಲ್ ಮನವಿ ಪುರಸ್ಕರಿಸಿದ್ದಾರೆ. ಇದರಿಂದ ಸ್ಟೋಕ್ಸ್ ಅಸಮಾಧಾನಗೊಂಡಿದ್ದರು.

ರಿವ್ಯೂವ್‌ನಲ್ಲೂ ಔಟ್

ಸ್ಟೋಕ್ಸ್ ಅಕ್ಷೇಪದ ನಡುವೆಯೂ ಜೈಸ್ವಾಲ್ ಮನವಿ ಪುಸ್ಕರಿಸಿದ ಅಂಪೈರ್, ನಿರ್ಧಾರದ ರಿವ್ಯೂವ್ ಮಾಡಿದ್ದಾರೆ. ಈ ವೇಳೆ ಥರ್ಡ್ ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದ್ದಾರೆ. ಈ ವೇಳೆ ಸ್ಟೋಕ್ಸ್ ಸಂಭ್ರಮದಲ್ಲಿ ಕುಣಿದಾಡಿದ್ದಾರೆ.

ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಬೆನ್ ಸ್ಟೋಕ್ಸ್ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ. ಸ್ಲೆಡ್ಜಿಂಗ್, ತಿರುಗೇಟುಗಳು ನಡೆಯುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರಿ ಸ್ಲೆಡ್ಜಿಂಗ್ ನಡೆದಿತ್ತು. ಬಳಿಕ ಜೈಸ್ವಾಲ್ ವಿಕೆಟ್ ಕಬಳಿಸಿದ್ದ ಬೆನ್ ಸ್ಟೋಕ್ಸ್ ಮೈದಾನದಲ್ಲೇ ಸಂಭ್ರಮ ಆಚರಿಸಿದ್ದರು. ಭಾರಿ ಸ್ಲೆಡ್ಜಿಂಗ್ ಮೂಲಕ ಸ್ಟೋಕ್ಸ್ ವಿಕೆಟ್ ಕಬಳಿಸಿ ಕುಣಿದಾಡಿದ್ದರು. ಇದೀಗ ಮತ್ತೆ ಜೈಸ್ವಾಲ್ ರಿವ್ಯೂವ್‌ಗೂ ಸ್ಟೋಕ್ಸ್ ಅಡ್ಡಿಪಡಿಸಿ ನಿಯಮದ ಪ್ರಕಾರ ಅರ್ಹರಲ್ಲ ಎಂದು ಬೊಟ್ಟು ಮಾಡಿ ತೋರಿಸಿದ್ದರು.

ಭಾರತಕ್ಕೆ 244 ರನ್ ಮುನ್ನಡೆ

ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಎಚ್ಚರಿಕೆಯ ಆರಂಭ ಪಡದಿತ್ತು. ಆದರೆ ಯಶಸ್ವಿ ಜೈಸ್ವಾಲ್ 28ರನ್ ಸಿಡಿಸಿ ಔಟಾದರು. ದಿನದಾಟದ ಅಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 64 ರನ್ ಸಿಡಿಸಿದೆ. ಈ ಮೂಲಕ 244 ರನ್ ಮುನ್ನಡೆ ಪಡೆದುಕೊಂಡಿದೆ.